ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆ; ಏಪ್ರಿಲ್ 1ರಿಂದಲೇ ಹೊಸ ದರ ಜಾರಿ

|
Google Oneindia Kannada News

ನವದೆಹಲಿ, ಮಾರ್ಚ್ 31: ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ದರವನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರ ಮೇಲಿನ ಹೊರೆ ತಗ್ಗಿಸಲಾಗುತ್ತಿದೆ. ಪ್ರತಿ ಸಿಲಿಂಡರ್‌ಗೆ 10 ರೂಪಾಯಿ ಇಳಿಕೆ ಮಾಡಲಾಗುತ್ತಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಬುಧವಾರ ಮಾಹಿತಿ ನೀಡಿದೆ.

Recommended Video

10 ರೂಪಾಯಿ ಇಳಿಕೆ ಕಂಡ ಎಲ್‌ಪಿಜಿ ಸಿಲಿಂಡರ್‌ ಬೆಲೆ... | Oneindia Kannada

ಏಪ್ರಿಲ್ 1ರಿಂದಲೇ ಈ ಹೊಸ ದರ ಜಾರಿಗೆ ಬರಲಿರುವುದಾಗಿ ತಿಳಿಸಿದೆ. ಈ ಹಿಂದೆ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 819 ರೂ ಇದ್ದು, ಏಪ್ರಿಲ್ 1ರಿಂದ ಪ್ರತಿ ಸಿಲಿಂಡರ್‌ಗೆ 10ರೂ ತಗ್ಗುವ ಮೂಲಕ ಆ ಬೆಲೆ 809 ರೂ ಆಗಲಿದೆ ಎಂದು ತಿಳಿಸಿದೆ. ಮುಂದೆ ಓದಿ...

 ಭಾರೀ ಏರಿಕೆ ಕಂಡಿದ್ದ ಸಿಲಿಂಡರ್ ಬೆಲೆ

ಭಾರೀ ಏರಿಕೆ ಕಂಡಿದ್ದ ಸಿಲಿಂಡರ್ ಬೆಲೆ

ಕಳೆದ ನವೆಂಬರ್ ತಿಂಗಳಿನಿಂದಲೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿತ್ತು. ಹೀಗಾಗಿ ಭಾರತದಲ್ಲಿಯೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಕಂಡಿತ್ತು. ಪೆಟ್ರೋಲ್, ಡೀಸೆಲ್ ದರ ಸೇರಿದಂತೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿಯೂ ಏರಿಕೆ ಮಾಡಲಾಗಿತ್ತು. ಮಾರ್ಚ್‌ ಮಧ್ಯದಲ್ಲಿ ತೈಲ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನೂ ಕೊಂಚ ತಗ್ಗಿಸಲಾಗಿತ್ತು.

 ವಿವಿಧ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಪ್ರಸ್ತುತ ಬೆಲೆ

ವಿವಿಧ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಪ್ರಸ್ತುತ ಬೆಲೆ

ಏಪ್ರಿಲ್ 1 ರಿಂದ ಪ್ರತಿ ಗ್ಯಾಸ್ ಸಿಲಿಂಡರ್ ಬೆಲೆ 10 ರೂಪಾಯಿ ಕಡಿಮೆಯಾಗಲಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 822 ರೂ ಇದ್ದರೆ, ದೆಹಲಿಯಲ್ಲಿ 819 ರೂ, ಕೋಲ್ಕತ್ತಾದಲ್ಲಿ 845ರೂ, ಮುಂಬೈನಲ್ಲಿ 819 ರೂ ಹಾಗೂ ಚೆನ್ನೈನಲ್ಲಿ 835ರೂ ಇರಲಿದೆ.

 ಮಾರ್ಚ್‌ನಲ್ಲಿ 819ಕ್ಕೆ ತಲುಪಿದ್ದ ಸಿಲಿಂಡರ್ ಬೆಲೆ

ಮಾರ್ಚ್‌ನಲ್ಲಿ 819ಕ್ಕೆ ತಲುಪಿದ್ದ ಸಿಲಿಂಡರ್ ಬೆಲೆ

ಜನವರಿ ತಿಂಗಳಿನಲ್ಲಿ 694ರೂ ಇದ್ದ ಸಿಲಿಂಡರ್ ಬೆಲೆ ಫೆಬ್ರವರಿ ತಿಂಗಳಿನಲ್ಲಿ ಏಕಾಏಕಿ 719ರೂಗೆ ತಲುಪಿತ್ತು. ಫೆಬ್ರವರಿ ಮಧ್ಯದಲ್ಲಿ 769ರೂಗೆ ಮುಟ್ಟಿದ್ದು, ಮಾರ್ಚ್ ಆರಂಭದಲ್ಲಿ 819ಕ್ಕೆ ತಲುಪಿತ್ತು. ಇದೀಗ 10 ರೂಪಾಯಿ ಇಳಿಸಿರುವುದಾಗಿ ತಿಳಿದುಬಂದಿದೆ.

 ಎರಡು ಬಾರಿ ಇಳಿಕೆಯಾಗಿದ್ದ ಕಚ್ಚಾ ತೈಲ ಬೆಲೆ

ಎರಡು ಬಾರಿ ಇಳಿಕೆಯಾಗಿದ್ದ ಕಚ್ಚಾ ತೈಲ ಬೆಲೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯು ಕೊಂಚ ಇಳಿಕೆಯಾಗಿದೆ. ಮಾರ್ಚ್‌ ತಿಂಗಳಿನಲ್ಲಿ ಹದಿನೈದು ದಿನಗಳಲ್ಲಿ ಎರಡು ಬಾರಿ ಬೆಲೆ ಇಳಿಕೆಯಾಗಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

English summary
The cost of LPG cylinders will reduce by ₹ 10 from April 1, bringing it down to ₹ 809 per cylinder informed Indian Oil Corporation (IOC) on Wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X