ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಮೂರನೇ ತಿಂಗಳು ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ

|
Google Oneindia Kannada News

ನವದೆಹಲಿ, ಮೇ 1: ಕೊರೊನಾವೈರಸ್ ಸೋಂಕು ತಡೆಗಟ್ಟಲು ದೇಶದೆಲ್ಲೆಡೆ ಎರಡನೇ ಅವಧಿಯ ಲಾಕ್ ಡೌನ್ ಜಾರಿಯಲ್ಲಿದೆ. ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮೇ 1ರಿಂದ ತಗ್ಗಿಸಲಾಗಿದೆ. ಪ್ರತಿ ತಿಂಗಳ ಆರಂಭದಲ್ಲಿ ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ. ಅದರಂತೆ, ಸತತ ಮೂರು ತಿಂಗಳಿನಿಂದ ಎಲ್ಪಿಜಿ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ.

Recommended Video

ಪೊಲೀಸರು ಮಾಡುತ್ತಿರೋ ಕೆಲಸಕ್ಕೆ ನಮ್ಮದೊಂದು ಚಿಕ್ಕ ಸಲಾಂ | Oneindia Kannada

ಮಾರ್ಚ್ ತಿಂಗಳ ಆರಂಭದಲ್ಲೇ ಎಲ್ ಪಿಜಿ ಗ್ರಾಹಕರಿಗೆ ಶುಭ ಸುದ್ದಿ ಸಿಕ್ಕಿತ್ತು. ಗೃಹಬಳಕೆಯ ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮತ್ತೊಮ್ಮೆ ತಗ್ಗಿಸಲಾಗಿದೆ. 14.2 ಕೆ.ಜಿ ತೂಗುವ ಎಲ್ ಪಿಜಿ ಸಿಲಿಂಡರ್ ಬೆಲೆಗಳನ್ನು ಮಾರ್ಚ್ 01ರಿಂದ ಸಿಲಿಂಡರ್ ಬೆಲೆ 53 ರೂ. ನಷ್ಟು ಇಳಿಕೆ, ಇದೇ ರೀತಿ 19 ಕೆಜಿ ವಾಣಿಜ್ಯ ಸಿಲಿಂಡರ್ ಸಹ 84.50 ರೂ. ಗಳಷ್ಟು ಅಗ್ಗವಾಗಿತ್ತು. ಈಗ ಮೇ ತಿಂಗಳಿನಲ್ಲಿ 162.50 ಪ್ರತಿ ಸಿಲಿಂಡರ್ ನಂತೆ ಇಳಿಕೆಯಾಗಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕುಸಿಯುತ್ತಿದೆ. ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 15.98 ಯುಎಸ್ ಡಾಲರ್ ನಷ್ಟು ಕುಸಿದಿತ್ತು. ಆದರೆ, ಶುಕ್ರವಾರದಂದು ಚೇತರಿಕೆ ಕಂಡಿದ್ದು, ಪ್ರತಿ ಬ್ಯಾರೆಲ್ ಬೆಲೆ 26.43 ಯುಎಸ್ ಡಾಲರ್ ನಂತೆ ವಹಿವಾಟು ನಡೆಸಿದೆ.

LPG cylinder price cut by over Rs 160 today; check details

ಎಲ್ಪಿಜಿ ಬೆಲೆ ಇಳಿಕೆ: ದೆಹಲಿಯಲ್ಲಿ 744ರು ಇದ್ದ ಬೆಲೆ ಇಂದು 581.50 ರು ನಷ್ಟಾಗಿದೆ. ಮುಂಬೈ 714.5 ರುನಿಂದ 579 ರು ಆಗಿದೆ. ಇದೇ ರೀತಿ ಕೋಲ್ಕತಾದಲ್ಲಿ 584.50 ರು(ಕಳೆದ ತಿಂಗಳ ದರ 774.5 ರು), ಹಾಗೂ ಬೆಂಗಳೂರು 585ರು ರು(744ರು). ನಿಮ್ಮ ನಗರದಲ್ಲಿ ಎಲ್ಪಿಜಿ, ಪೆಟ್ರೋಲ್, ಡೀಸೆಲ್ ದರವನ್ನು ತಿಳಿಯಲು ಕ್ಲಿಕ್ ಮಾಡಿ

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ. ಇದಲ್ಲದೆ ಆರು ತಿಂಗಳಿಗೊಮ್ಮೆ ನೈಸರ್ಗಿಕ ಅನಿಲದ ಸರಾಸರಿ ದರ ನಿಗದಿಪಡಿಸಲಾಗುತ್ತದೆ.

READ IN ENGLISH

English summary
Non-subsidised LPG or market-priced cooking gas prices were cut by a record Rs 162.50 per cylinder on Friday, in line with the slump in benchmark international rates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X