ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಎಲ್ಪಿಜಿ ಬೆಲೆ ಏರಿಕೆ! ದುಬಾರಿಯಾಯ್ತು ದುನಿಯಾ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 01: ದಿನೇ ದಿನೇ ತೈಲ ಬೆಲೆ ಏರಿಕೆ ಸುದ್ದಿಯ ನಡುವೆ, ರಾಷ್ಟ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ಇರುವ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಪ್ರತಿ ಸಿಲಿಂಡರ್ ಮೇಲೆ 1.76 ರು ಏರಿಕೆಯಾಗಿದ್ದು, ಉಳಿದ ಮೆಟ್ರೋ ನಗರಗಳು ಇನ್ನಿತರ ಪ್ರಮುಖ ಪಟ್ಟಣಗಳಲ್ಲಿ ಬೆಲೆ ವ್ಯತ್ಯಾಸವಾಗುವ ನಿರೀಕ್ಷೆಯಿದೆ.

ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ

ಸಬ್ಸಿಡಿಯಲ್ಲಿ ಸಿಗುವ ಎಲ್‌ಪಿಜಿ ಸಿಲಿಂಡರ್‌ಗಳ ಪರಿಷ್ಕೃತ ದರ ಬುಧವಾರ(ಆಗಸ್ಟ್ 01) ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ.

LPG Cylinder Becomes More Expensive In Delhi: 5 Things To Know

ದೆಹಲಿಯಲ್ಲಿ 14.2 ಕಿಲೋಗ್ರಾಮ್ ತೂಕುವ ಗೃಹ ಬಳಕೆಯ ಸಿಲಿಂಡರ್ ಬೆಲೆ 496.26 ರೂ. ಇತ್ತು. ಈಗ ಪರಿಷ್ಕೃತ ದರ ಪಟ್ಟಿಯಂತೆ 498.02 ರೂ. ಆಗಲಿದೆ ಎಂದು ಇಂಡಿಯನ್‌ ಆಯಿಲ್‌ ಪ್ರಕಟಿಸಿದೆ.

2017ರ ನಂತರ ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆ 2017ರ ನಂತರ ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆ

ಗ್ರಾಹಕರಿಗೆ 14.2 ಕೆಜಿಯ ವಾರ್ಷಿಕ 12 ಸಿಲಿಂಡರ್‌ಗಳಿಗೆ ಸರಕಾರ ಸಬ್ಸಿಡಿ ಸಿಗುತ್ತಿದೆ. ಸಬ್ಸಿಡಿ ಮೊತ್ತವನ್ನು ನೇರವಾಗಿ ಗ್ರಾಹಕರ ಬ್ಯಾಂಕ್‌ ಖಾತೆಗೆ ಜಮಾ ಆಗುತ್ತಿದೆ. ಸಬ್ಸಿಡಿರಹಿತ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 754 ರು ನಷ್ಟಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನಿಲ ಬೆಲೆ ಹೆಚ್ಚಾದರೆ, ಸರಕಾರ ಬೆಂಬಲ ಬೆಲೆ ಹೆಚ್ಚಿಸುತ್ತಿದೆ. ಆದರೆ ಜಿಎಸ್‌ಟಿ ಹಾಗೂ ತೆರಿಗೆಯ ಬೆಲೆಯು ಆಯಾ ಮಾರುಕಟ್ಟೆ ದರಕ್ಕೆ ಅನುಗುಣವಾಗಿಯೇ ನೀಡಬೇಕಾಗುತ್ತದೆ. ಈ ಕಾರಣದಿಂದ ಅನಿಲ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ. ಜು.1 ರಂದು ಅನಿಲ ಬೆಲೆ 2.71 ರೂ. ಹೆಚ್ಚಳವಾಗಿತ್ತು.

ಜಾಗತಿಕ ಮಾರುಕಟ್ಟೆ ದರದ ಮೇಲೆ ನಿಗದಿ

ಜಾಗತಿಕ ಮಾರುಕಟ್ಟೆ ದರದ ಮೇಲೆ ನಿಗದಿ

ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.

ಮೋದಿ ಸರ್ಕಾರಕ್ಕೆ 4ರ ಸಂಭ್ರಮ, ಟಾಪ್ 15ಯೋಜನೆಗಳು ಮೋದಿ ಸರ್ಕಾರಕ್ಕೆ 4ರ ಸಂಭ್ರಮ, ಟಾಪ್ 15ಯೋಜನೆಗಳು

ಸಬ್ಸಿಡಿ ಮೊತ್ತ ಏರಿಕೆ

ಸಬ್ಸಿಡಿ ಮೊತ್ತ ಏರಿಕೆ

ಆಗಸ್ಟ್ 2018ರಲ್ಲಿ ಗ್ರಾಹಕರ ಬ್ಯಾಂಕ್ ಖಾತೆಗೆ ಸೇರಲಿರುವ ಸಬ್ಸಿಡಿ ವರ್ಗಾವಣೆ ಮೊತ್ತವನ್ನು 291.48 ರು ಪ್ರತಿ ಸಿಲಿಂಡರ್ ಗೆ ಏರಿಕೆ ಮಾಡಲಾಗಿದೆ. ಜುಲೈ ತಿಂಗಳಿನಲ್ಲಿ 257.74 ರು ನಷ್ಟಿತ್ತು. ಜೂನ್ ತಿಂಗಳಿನಲ್ಲಿ 204.95ರು ನಷ್ಟಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ವ್ಯತ್ಯಯದಿಂದ ಎಲ್ ಪಿಜಿ ಗ್ರಾಹಕರನ್ನು ಈ ಮೂಲಕ ರಕ್ಷಿಸಲಾಗಿದೆ ಎಂದು ಐಒಸಿ ಹೇಳಿದೆ.

ಆಗಸ್ಟ್ ನಲ್ಲಿ ಎಷ್ಟಾಗಲಿದೆ ಬೆಲೆ?

ಆಗಸ್ಟ್ ನಲ್ಲಿ ಎಷ್ಟಾಗಲಿದೆ ಬೆಲೆ?

ಆಗಸ್ಟ್ ತಿಂಗಳಿನಲ್ಲಿ ದೆಹಲಿಯಲ್ಲಿ ಎಲ್ ಪಿಜಿ ದರ : ಸಬ್ಸಿಡಿಯುಳ್ಳ ಪ್ರತಿಸಿಲಿಂಡರ್ ಬೆಲೆ 498.02 ರು ಆಗಲಿದ್ದು, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 789.5 ರು ಅಗಲಿದೆ ಎಂದು ಭಾರತದ ಅತಿದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ. ಜುಲೈ ತಿಂಗಳಿನಲ್ಲಿ ಸಬ್ಸಿಡಿ ಹಾಗೂ ಸಬ್ಸಿಡಿಯೇತರ ಎಲ್ಪಿಜಿ ಬೆಲೆಯಲ್ಲಿ ಪ್ರತಿ ಸಿಲಿಂಡರ್ ಮೇಲೆ 2.71 ರು ಹಾಗೂ 55.50ರು ಏರಿಕೆ ಮಾಡಲಾಗಿತ್ತು.

ಉಜ್ವಲ ಯೋಜನೆ ಸಾಕಾರ

ಉಜ್ವಲ ಯೋಜನೆ ಸಾಕಾರ

ಕಳೆದ ನಾಲ್ಕು ವರ್ಷಗಳಲ್ಲಿ ಉಜ್ವಲ ಯೋಜನೆಯ ಮೂಲಕ ಬಿಜೆಪಿ ಸರ್ಕಾರ 10 ಕೋಟಿ ಮನೆಗಳಿಗೆ ಎಲ್ ಪಿಜಿ ಸಂಪರ್ಕ ಒದಗಿಸಿದೆ. ಮೋದಿ ಅವರ ಕನಸಿನ ಈ ಯೋಜನೆ ಸಾಕಾರಗೊಳಿಸಲು ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳು ಕೂಡಾ ಕೈಜೋಡಿಸಿವೆ. ಹೀಗಾಗಿ, ಈ ಮುಂಚೆ ಜಾರಿಯಲ್ಲಿದ್ದ ಪ್ರತಿ ತಿಂಗಳು ಕನಿಷ್ಟ 4 ರು ಬೆಲೆ ಏರಿಕೆ ಯೋಜನೆಯನ್ನು ಕೈಬಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು

English summary
LPG prices were increased in Delhi on Tuesday. Indian Oil said in a statement that the increase in non-subsidised price of LPG will be Rs. 35.50 per cylinder in August, compared to the current price. Subsidised LPG - or cooking gas - will cost the consumer Rs. 1.76 per cylinder more from Wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X