ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಆರ್ಥಿಕ ಹಿಂಜರಿತ ಪ್ರವೇಶಿಸಿದ್ದರೂ ಪ್ರೋತ್ಸಾಹದಾಯಕವಾಗಿದೆ: ಕೆ. ಸುಬ್ರಹ್ಮಣಿಯನ್

|
Google Oneindia Kannada News

ನವದೆಹಲಿ, ನವೆಂಬರ್ 28: ದೇಶದ ಆರ್ಥಿಕತೆಯು ತಾಂತ್ರಿಕವಾಗಿ ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದ್ದರೂ ಎರಡನೇ ತ್ರೈಮಾಸಿಕ ದರವು ಪ್ರೋತ್ಸಾಹದಾಯಕ ಅಂಶವನ್ನು ಒಳಗೊಂಡಿದೆ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೆ. ಸುಬ್ರಹ್ಮಣಿಯನ್ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿದಲ್ಲಿ ಜಿಡಿಪಿ ದರವು ಋಣಾತ್ಮಕವಾಗಿದ್ದರೂ (-7.5%) ಅಂಕಿ-ಅಂಶಗಳು ಉತ್ತೇಜಕವಾಗಿದೆ ಎಂದಿದ್ದಾರೆ. ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರವು ಶೇ. 23.9ಕ್ಕೆ ಹೋಲಿಸಿದರೆ, ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ದರವು ದೊಡ್ಡ ಸುಧಾರಣೆಯಾಗಿದೆ. ಆದಾಗ್ಯೂ ಸತತ ಋಣಾತ್ಮಕ ತ್ರೈಮಾಸಿಕ ಬೆಳವಣಿಗೆಯನ್ನು ದೇಶವನ್ನು ಆರ್ಥಿಕ ಹಿಂಜರಿತಕ್ಕೆ ತಳ್ಳಿದೆ.

GDP

'' ಆರ್ಥಿಕ ದೃಷ್ಟಿಯಿಂದ ನಾವು ಎಚ್ಚರಿಕೆಯಿಂದ ಆಶಾವಾದಿಯಾಗಿರಬೇಕು. ಕ್ಯೂ2 ಜಿಡಿಪಿ ದರ ಬಹಳ ಪ್ರೋತ್ಸಾಹದಾಯಕವಾಗಿದೆ ಆದರೆ ನಾವು ಕಾದು ನೋಡಬೇಕು'' ಎಂದು ಹೇಳಿದರು.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 7.5ರಷ್ಟು ಕುಸಿತಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 7.5ರಷ್ಟು ಕುಸಿತ

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು '' ನಾವು 'V' ಆಕಾರದ ಚೇತರಿಕೆ ಕಾಣುತ್ತಿದ್ದೇವೆ. ಮೂಲಸೌಕರ್ಯ, ಉತ್ಪಾದನೆ ಮತ್ತು ವಿದ್ಯುತ್ ಮುಂತಾದ ಕ್ಷೇತ್ರಗಳು ಬೆಳವಣಿಗೆಯ ಪಥದಲ್ಲಿವೆ, ಕೃಷಿ ಭಾರತೀಯ ಆರ್ಥಿಕತೆಯಲ್ಲಿ ಉಜ್ವಲ ಸ್ಥಾನವಿದೆ" ಎಂದು ಹೇಳಿದರು.

ಇದರ ಜೊತೆಗೆ ಕೊರೊನಾವೈರಸ್ ಪರಿಣಾಮದ ಕುರಿತು ಮಾತನಾಡುತ್ತಾ, ಸ್ಪ್ಯಾನಿಷ್ ಜ್ವರದ ಎರಡನೇ ಅಲೆ ತೀವ್ರವಾಗಿತ್ತು ಎಂಬುನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸಿಜರ್ (SOPs) ಪಾಲಿಸಬೇಕು ಎಂದಿದ್ದಾರೆ.

English summary
India’s Chief Economic Advisor (CEA) K Subramanian termed the improvement in Q2 GDP as encouraging even as india officialy entered a technical recession
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X