ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಗಳಿಗೆ ವರದಾನವಾಗುತ್ತಿದೆ ಫೇಸ್‌ಬುಕ್‌ ನೀತಿಯಲ್ಲಿನ ಲೋಪ

|
Google Oneindia Kannada News

ನವದೆಹಲಿ, ಏಪ್ರಿಲ್ 14: ಸುಳ್ಳು ಮಾಹಿತಿಗಳ ಪ್ರಚಾರದ ಕುರಿತು ಉದ್ಯೋಗಿಗಳು ನಿರಂತರವಾಗಿ ಎಚ್ಚರಿಕೆಗಳನ್ನು ನೀಡಿದ್ದರೂ ಸರ್ವಾಧಿಕಾರಿ ಸರ್ಕಾರಗಳಿಗೆ ತಮ್ಮ ಆಡಳಿತದ ಬಗ್ಗೆ ನಕಲಿ ಬೆಂಬಲಗಳನ್ನು ಸೃಷ್ಟಿಸಲು ಹಲವು ತಿಂಗಳಿನಿಂದ ತನ್ನ ವೇದಿಕೆಯನ್ನು ಬಳಸಿಕೊಳ್ಳಲು ಫೇಸ್‌ಬುಕ್ ಅವಕಾಶ ನೀಡುತ್ತಿದೆ ಎಂದು 'ದಿ ಗಾರ್ಡಿಯನ್' ನಡೆಸಿದ ತನಿಖಾ ವರದಿ ಬಹಿರಂಗಪಡಿಸಿದೆ.

ಫೇಸ್‌ಬುಕ್ ನೀತಿಗಳಲ್ಲಿನ ಲೋಪಗಳು ಜಗತ್ತಿನೆಲ್ಲೆಡೆಗಿನ ಸರ್ಕಾರದ ಅಧಿಕಾರಿಗಳು ಅಸಂಖ್ಯಾತ ನಕಲಿ 'ಪೇಜ್‌' ಖಾತೆಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತಿದೆ. ಬಳಕೆದಾರರ ಪ್ರೊಫೈಲ್‌ಗಳಲ್ಲಿ ಜನರು ಖುದ್ದು ಲೈಕ್, ಕಾಮೆಂಟ್ ಹಾಕಬೇಕು. ಆದರೆ ಈ ನಕಲಿ ಪುಟಗಳಲ್ಲಿ ಅವರು ನೈಜ ವ್ಯಕ್ತಿಯೊಂದಿಗೆ ಸಂವಹಿಸದೆಯೂ ಅವರ ಲೈಕ್, ಕಾಮೆಂಟ್, ಪ್ರತಿಕ್ರಿಯೆ ಮತ್ತು ವಿಚಾರದ ಹಂಚಿಕೆ ಸಾಧ್ಯವಾಗುತ್ತದೆ ಎಂದು ವರದಿ ತಿಳಿಸಿದೆ.

ಎಚ್ಚರ! 53ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆ ಎಚ್ಚರ! 53ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆ

ಈ ಲೋಪಗಳನ್ನು ಬಳಸಿಕೊಳ್ಳುತ್ತಿರುವ ಸರ್ಕಾರಗಳು, ನೈಜ ಬಳಕೆದಾರರಂತೆ ಕಾಣಿಸುವ ಖಾತೆಗಳಿಂದ ಸರ್ಕಾರದ ಪರವಾದ ವಿಚಾರಗಳಿಗೆ ಬೆಂಬಲ ಸೃಷ್ಟಿಸಲು ಅನುಕೂಲ ಮಾಡಿಕೊಳ್ಳುತ್ತಿವೆ. ಇದು ಭಾಷಣಕ್ಕೆ ಹಣಕೊಟ್ಟು ಜನರನ್ನು ಕರೆಸುವ ವ್ಯವಹಾರಕ್ಕೆ ಸಮನಾಗಿದೆ ಎಂದು ವರದಿ ಹೇಳಿದೆ.

 Loophole In Facebooks Policies Allows Authoritarian Govt Using Platform For Fake Support

ಕಂಪೆನಿಯ ಇಂಟಿಗ್ರಿಟಿ ತಂಡದ ಫೇಸ್‌ಬುಕ್ ಡೇಟಾ ವಿಜ್ಞಾನಿಯಾಗಿದ್ದ ಸೋಫಿ ಝಾಂಗ್ ಅವರು ಈ ಬಗ್ಗೆ ಫೇಸ್‌ಬುಕ್‌ನ ಹಿರಿಯ ಅಧಿಕಾರಿಗಳಿಗೆ ಈ ಮುಂಚೆಯೇ ಎಚ್ಚರಿಕೆ ನೀಡಿದ್ದರು. ಆದರೆ ಚುನಾವಣೆಗಳು ಮುಕ್ತವಾಗಿ ನಡೆಯದ ಮತ್ತು ಸರ್ಕಾರ ಪ್ರಾಯೋಜಿತ ಪ್ರಚಾರಾಂದೋಲನಗಳು ತೀವ್ರವಾಗಿ ನಡೆಯುವ ದೇಶಗಳಲ್ಲಿನ ಸುಳ್ಳು ಮಾಹಿತಿ ಪ್ರಸಾರ ಮಾಡುವ ಜಾಲದ ಕುರಿತಾದ ಮಾಹಿತಿ ಬಗ್ಗೆ ಫೇಸ್‌ಬುಕ್ ಹೆಚ್ಚು ಗಮನ ಹರಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

 ವಿಧಾನಸಭೆ ಚುನಾವಣೆ; ಪ್ರಚೋದನಕಾರಿ ಭಾಷಣ, ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಲು ಫೇಸ್‌ಬುಕ್ ಕ್ರಮ ವಿಧಾನಸಭೆ ಚುನಾವಣೆ; ಪ್ರಚೋದನಕಾರಿ ಭಾಷಣ, ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಲು ಫೇಸ್‌ಬುಕ್ ಕ್ರಮ

ಹೊಂಡುರಸ್‌ ದೇಶದಲ್ಲಿನ ನಕಲಿ ಖಾತೆಗಳ ಆಂದೋಲನದ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದರೂ ಫೇಸ್‌ಬುಕ್ 344 ದಿನಗಳ ಕಾಲ ಕಾದಿತ್ತು. ಅಜೆರ್ಬೈಜನ್ ಪ್ರಕರಣದಲ್ಲಿ ಅದು 426 ದಿನಗಳನ್ನು ತೆಗೆದುಕೊಂಡಿತ್ತು.

ತನ್ನಲ್ಲಿನ ಶೇ 5ರಷ್ಟು ಖಾತೆಗಳು ನಕಲಿ ಎಂದು ಸ್ವತಃ ಫೇಸ್‌ಬುಕ್ ಒಪ್ಪಿಕೊಂಡಿದೆ. 2019ರಿಂದ ಈ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ನಕಲಿ ಖಾತೆಗಳನ್ನು ನಿಯಂತ್ರಿಸಲು ಫೇಸ್‌ಬುಕ್ ಕೇಂದ್ರೀಕೃತ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಹೊಂದಿಲ್ಲ. ಸುಳ್ಳು ಮಾಹಿತಿಗಳನ್ನು ತಡೆಯಲು ಸಹ ವ್ಯವಸ್ಥೆ ನಿರ್ಮಿಸಿಲ್ಲ.

English summary
Loophole in Facebook's policies allowing authoritarian governments to use platform to generate fake support says The Gaurdian's report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X