ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಹೂಡಿಕೆ ಮಾಡಲು ಅಮೆರಿಕದ ಬೇನ್ ಕ್ಯಾಪಿಟಲ್ ಕಂಪನಿ ನಿರ್ಧಾರ

|
Google Oneindia Kannada News

ಬಾಸ್ಟನ್, ಅಕ್ಟೋಬರ್ 12: ಭಾರತದಲ್ಲಿ ಹೂಡಿಕೆ ಮಾಡಲು ಅಮೆರಿಕದ 'ಬೇನ್ ಕ್ಯಾಪಿಟಲ್' ಕಂಪನಿ ನಿರ್ಧರಿಸಿದೆ. ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದೇವೆ ಎಂದು ಬೇನ್ ಕ್ಯಾಪಟಿಲ್ ಅಧಿಕಾರಿಗಳು ತಿಳಿಸಿದ್ದಾರೆ.

ಹೂಡಿಕೆ ಹಾಗೂ ಉದ್ಯಮ ಬೆಳವಣಿಗೆ ದೃಷ್ಟಿಯಿಂದ ಅಮೆರಿಕ ಹಾಗೂ ಭಾರತಕ್ಕೆ ಮುಂದಿನ ದಶಕ ಮಹತ್ವದ್ದು ಎಂದು ಕಂಪನಿಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸಂಸ್ಥೆಯ ಸಹ ಚೇರ್ಮನ್ ಸ್ಟೀಫನ್ ಪಗ್ಲಿಯುಕಾ ಹಾಗೂ ಸಹ ವ್ಯವಸ್ಥಾಪಕ ಪಾಲುದಾರ ಜಾನ್ ಕನಾಟನ್ ಈ ವಿಷಯ ತಿಳಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ನ ಅವರೊಂದಿಗಿನ ಚರ್ಚೆ ಉತ್ತಮವಾಗಿತ್ತು, ಗುಜರಾತ್‌ನಲ್ಲಿನ ಹಣಕಾಸು ಸೇವೆಗಳ ಜಿಲ್ಲೆ ಕುರಿತಾಗಿಯೂ ಚರ್ಚಿಸಲಾಯಿತು ಎಂದು ಹೇಳಿಕೊಂಡಿದ್ದಾರೆ.

Looking Forward To Investing Even More In India: Bain Capital

ವಿಶ್ವ ಬ್ಯಾಂಕ್ ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿ ವಾರ್ಷಿಕ ಸಭೆಗಳಲ್ಲಿ ಪಾಲ್ಗೊಳ್ಳುವ ಸಂಬಂಧ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದರು. ಅವರು ಜಿ 20 ರಾಷ್ಟ್ರಗಳ ಹಣಕಾಸು ಸಚಿವರು ಹಾಗೂ ಸೆಂಟ್ರಲ್ ಬ್ಯಾಂಕ್ ಗವರ್ನರ್ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ.

ಕಳೆದ 10-12 ವರ್ಷಗಳಿಂದ ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದೇವೆ, ಅದರಲ್ಲೂ ಬ್ಯಾಂಕಿಂಗ್, ಹೊರಗುತ್ತಿಗೆ ಹಾಗೂ ಔಷಧ ಉತ್ಪಾದನಾ ಕ್ಷೇತ್ರಗಳಲ್ಲಿ ನಮ್ಮ ಹೂಡಿಕೆ ಅಧಿಕವಾಗಿದೆ. ಭಾರತ ಸುಧಾರಣಾ ಕ್ರಮಗಳನ್ನು ಕೈಗೊಂಡಾಗಲೆಲ್ಲಾ ನಮ್ಮ ಹೂಡಿಕೆಗೆ ವೇಗ ಸಿಗುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಕ್ವಾಡ್ ಸಭೆಯಲ್ಲಿ ಪಾಲ್ಗೊಳ್ಳಲೆಂದು ಅಮೆರಿಕಕ್ಕೆ ತೆರಳಿದ್ದಾಗ ಅಮೆರಿಕ ಐದು ಪ್ರಮುಖ ಉದ್ಯಮಗಳ ಸಿಇಒ ಜತೆ ಮಖತಃ ಚರ್ಚೆ ನಡೆಸಿದ್ದರು.

ಅಡೋಬಿಯಾ ಶಂತನು ನಾರಾಯಣ್, ಜನರಲ್ ಆಟೊಮಿಕ್ಸ್‌ನ ವಿವೇಕ್ ಲಾಲ್, ಕ್ವಾಲ್‌ಕಾಂನ ಕ್ರಿಸ್ಟಿಯಾನೊ ಇ ಅಮೋನ್, ಫರ್ಸ್ ಸೋಲಾರ್ ಮಾರ್ಕ್ ವಿಡ್ಮಾರ್ ಬ್ಲ್ಯಾಕ್‌ಸ್ಟೋನ್‌ನ ಸ್ಟೀಫನ್‌ ಶವಾರ್‌ಝ್ಮಾನ್ ಜತೆಗೆ ಮಾತುಕತೆ ನಡೆಸಿದ್ದರು.

ಭಾರತದಲ್ಲಿ ತಂತ್ರಾಂಶ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ಶಂತನು ಜತೆಗೆ ಮಾತುಕತೆ ನಡೆಸಿದ್ದರು. ಸೇನಾ ಡ್ರೋನ್‌ಗಳ ತಯಾರಿಕೆ ಬಗ್ಗೆ ವಿವೇಕ್ ಅವರ ಜತೆ ಮಾತುಕತೆ ನಡೆಸಿದ್ದರು. ಭಾರತವು ಅಮೆರಿಕದಿಂದ ಸೇನಾ ಡ್ರೋನ್‌ಗಳನ್ನು ಖರೀದಿಸುವ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ.

ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಷೇರುವಿಕ್ರಯ ಹಾಗೂ ರಿಯಲ್ ಎಸ್ಟೇಟ್ ಕಂಪನಿ ಬ್ಲ್ಯಾಕ್‌ಸ್ಟೋನ್‌ನ ಸಿಇಒ ಜತೆಗೆ ಮೋದಿ ಮಾತನಾಡಿದ್ದರು.

English summary
American private investment firm Bain Capital, with investments of about USD 5 billion in Indian companies, is looking forward to investing "even more" in the country and the next decade will be very important for both India and the US to work together to build businesses on a global basis, top executives of the company said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X