ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋಫೋನ್‌ ಬಳಕೆದಾರರಿಗೆ ಬಂಪರ್ ಆಫರ್ ಕೊಟ್ಟ ಜಿಯೋ

|
Google Oneindia Kannada News

ಬೆಂಗಳೂರು, ಏಪ್ರಿಲ್ 1: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ (ಆರ್ ಜಿಯೋ) ತನ್ನ ಜಿಯೋಫೋನ್ ಬಳಕೆದಾರರಿಗೆ ಹೊಸ ಪ್ರಯೋಜನಗಳನ್ನು ಘೋಷಿಸಿದೆ. ಉಚಿತವಾಗಿ 100 ನಿಮಿಷಗಳ ಕರೆಗಳು ಮಾಡಬಹುದಾಗಿದ್ದು, ಇದರೊಂದಿಗೆ 100 ಎಸ್‌ಎಂಎಸ್ ಗಳನ್ನು ಉಚಿತವಾಗಿ ಕಳುಹಿಸಬಹುದಾಗಿದೆ.

ದೇಶದೆಲ್ಲೆಡೆ ಇರುವ ಎಲ್ಲಾ ಜಿಯೋಫೋನ್ ಬಳಕೆದಾರರಿಗೆ ಈ ಉಚಿತ ಕರೆ ಮಾಡುವ ನಿಮಿಷಗಳು ಮತ್ತು ಉಚಿತ SMS ಮಾಡುವ ಅವಕಾಶವನ್ನು ಏಪ್ರಿಲ್ 17ರ ವರೆಗೆ ಒದಗಿಸಲಾಗಿದೆ. ಇದಲ್ಲದೆ ಎಲ್ಲಾ ಜಿಯೋ ಫೋನ್ ಬಳಕೆದಾರರು ಮಾನ್ಯತೆಯ ಅವಧಿ ಮುಗಿದ ನಂತರವೂ ಒಳ ಬರುವ ಕರೆಗಳನ್ನು ಸ್ವೀಕರಿಸಲಿದ್ದಾರೆ.

ಜಿಯೋ ಫೈಬರ್ ಹೊಚ್ಚ ಹೊಸ ಆಫರ್, WFHಗೆ ಅನುಕೂಲಜಿಯೋ ಫೈಬರ್ ಹೊಚ್ಚ ಹೊಸ ಆಫರ್, WFHಗೆ ಅನುಕೂಲ

ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡುವ ಹೆಚ್ಚಿನ ಶೇಕಡಾವಾರು ಬಳಕೆದಾರರನ್ನು ಆರ್‌ ಜಿಯೋ ಹೊಂದಿದೆ. ಚಿಲ್ಲರೆ ಅಂಗಡಿಗಳ ಮೂಲಕ ರೀಚಾರ್ಜ್ ಮಾಡುವವರಿಗೆ ಮತ್ತು ಪ್ರಸ್ತುತ ಲಾಕ್‌ಡೌನ್‌ನಿಂದಾಗಿ ತೊಂದರೆಗಳನ್ನು ಎದುರಿಸುತ್ತಿರುವವರಿಗೆ, ಯುಪಿಐ, ಎಟಿಎಂ, ಎಸ್‌ ಎಂಎಸ್ ಮತ್ತು ಕರೆ ಮಾಡುವ ಮೂಲಕ ರೀಚಾರ್ಜ್ ಮಾಡಿಕೊಳ್ಳಲು ಜಿಯೋ ಪರ್ಯಾಯ ಚಾನಲ್‌ಗಳನ್ನು ಒದಗಿಸಿದೆ.

 Lock Down: Reliance Jio will provide free 100 minutes calling

ಇದರ ಜೊತೆಗೆ ಮನೆಯಲ್ಲಿದ್ದು ಕಾರ್ಯ ನಿರ್ವಹಿಸುತ್ತಿರುವ Work From Home ಮಾಡುವ ಭಾರತೀಯರಿಗೆ ಸಹಾಯ ಮಾಡಲು ಜಿಯೋ ಮುಂದಾಗಿದೆ. ಮನೆಯಲ್ಲಿದ್ದಾಗ ಎಲ್ಲರೂ ಸಂಪರ್ಕದಲ್ಲಿ ಇರಲಿ ಎನ್ನುವ ಕಾರಣಕ್ಕೆ ಜಿಯೋ ಫೈಬರ್ ಉಚಿತವಾಗಿ ನೀಡಲು ಮುಂದಾಗಿದೆ. ಜಿಯೋ ತನ್ನ ಬಳಕೆದಾರರಿಗೆ ಬೇಸಿಕ್ ಜಿಯೋಫೈಬರ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಯಾವುದೇ ಸೇವಾ ಶುಲ್ಕವಿಲ್ಲದೆ ಉಚಿತವಾಗಿ 30 ದಿನಗಳವರೆಗೆ ನೀಡಲಿದೆ.

English summary
Lock Down: Reliance Jio will provide free 100 minutes calling and SMSes till April 17, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X