ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ಡೌನ್ ಸಂದರ್ಭದಲ್ಲಿ ಸಿಬ್ಬಂದಿಗೆ ಪೂರ್ತಿ ಸಂಬಳ ನೀಡಿ: FKCCI

|
Google Oneindia Kannada News

ಬೆಂಗಳೂರು, ಏಪ್ರಿಲ್ 13: ಕೊರನಾವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಮಾಡಿರುವುದರಿಂದ ಅತಿ ಸಣ್ಣ, ಸಣ್ಣ, ಮಧ್ಯಮ ಉದ್ದಿಮೆ(ಎಂಎಸ್ಎಂಇ) ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಈ ವಲಯದ ನೌಕರರ ಕನಿಷ್ಠ ಸಂಬಳ ನಿಗದಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯ ಕೈಗಾರಿಕೆ ವಾಣಿಜ್ಯ ಮಹಾ ಸಂಸ್ಥೆ (ಎಫ್ ಕೆ ಸಿ ಸಿ ಐ) ಪತ್ರ ಬರೆದಿದೆ.

ರಾಜ್ಯದಲ್ಲಿ 6.5 ಲಕ್ಷ ಕೈಗಾರಿಕೆಗಳಿದ್ದು 65 ಲಕ್ಷ ಮಂದಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ 6500 ಕೋಟಿ ರೂಪಾಯಿ ವೇತನ ಪಾವತಿ ಮಾಡಲಾಗುತ್ತಿದೆ. MSMEs ವಲಯದಲ್ಲಿ ದೇಶದಲ್ಲಿ 11 ಕೋಟಿ ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ಜಿಡಿಪಿಗೆ ಶೇ 30 ರಷ್ಟು ಕೊಡುಗೆ ನೀಡುತ್ತಿದೆ.

ಕೊವಿಡ್19 ನೆಪದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವಂತಿಲ್ಲಕೊವಿಡ್19 ನೆಪದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವಂತಿಲ್ಲ

ಲಾಕ್ ಡೌನ್ ಸಂದರ್ಭದಲ್ಲಿ ಉತ್ಪಾದನೆ ಇಲ್ಲದೆ ಉದ್ದಿಮೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೂರ್ತಿ ವೇತನ ಪಾವತಿ ಮಾಡಲಾಗದೆ ಸಮಸ್ಯೆಗೆ ಸಿಲುಕಿದ್ದಾರೆ. ಬಹಳಷ್ಟು ಮಂದಿ ಸ್ಪಷ್ಟೀಕರಣ ನೀಡುವಂತೆ ಮನವಿ ಮಾಡಲಾಗಿದೆ ಎಂದು ಎಫ್ ಕೆ ಸಿ ಸಿ ಅಧ್ಯಕ್ಷ ಸಿ.ಆರ್.ಜನಾರ್ದನ್ ಹೇಳಿದರು

Lock Down: FKCCI on MSMEs minimum wages to be paid

ಪ್ರಮುಖ ಶಿಫಾರಸುಗಳು:
* 15 ಸಾವಿರ ಕನಿಷ್ಠ ವೇತನ ಪಡೆಯುತ್ತಿರುವ ಸಂಬಳವನ್ನು 25 ರಿಂದ 30 ಸಾವಿರಕ್ಕೇರಿಸುವ ಬಗ್ಗೆ ಶಿಫಾರಸು ಮಾಡಲಾಗಿದೆ.
* ಇನ್ನು ಒಂದು ವರ್ಷಗಳ ಕಾಲ ಘಟಕಗಳ ಪರಿಶೀಲನೆ, ಕಾನೂನು ತೊಡಕು ಇಲ್ಲದ್ದಂತೆ ಕಾರ್ಯ ನಿರ್ವಹಿಸುವ ವಾತಾವರಣದ ಅಗತ್ಯವಿದೆ.
* ಇಎಸ್ಐ ಬಳಿ ಅಪತ್ ಧನದ ರೂಪದಲ್ಲಿ 1, 00,000 ಕೋಟಿ ರು ನಿಧಿಯಿದೆ. ಇದನ್ನು ಕಾರ್ಮಿಕರ ಸಂಬಳ, ಅಗತ್ಯಕ್ಕಾಗಿ ಬಳಸಬಹುದು.
* ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಬಳಿ ಕ್ಲೇಮ್ ಆಗದಿರುವ ಮೊತ್ತ 35, 000 ಕೋಟಿ ರು ನಷ್ಟಿದೆ.
15 ಸಾವಿರ ರುಗಿಂತ ಕಡಿಮೆ ವೇತನದಾರರು: ಲಾಕ್ ಡೌನ್ ಸಂದರ್ಭದಲ್ಲಿ 15 ಸಾವಿರಕ್ಕಿಂತ ಒಳಗಿನ ವೇತನದಾರರಿಗೆ ಕೆಲಸ ಮಾಡದೇ ಇದ್ದರೂ ಅಥವಾ ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ ಅಂಥವರಿಗೆ ಪೂರ್ತಿ ವೇತನ ಪಾವತಿಸಬೇಕು, ವೇತನ ಕಡಿತಗೊಳಿಸಿದರೆ ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ಎಫ್ ಕೆ ಸಿ ಸಿ ಐ ಸೂಚಿಸಿದೆ.

50 ಸಾವಿರ ರು ಒಳಗಿನ ಸಂಬಳದಾರರು: 15 ರಿಂದ 50 ವರ್ಷದೊಳಗಿನ ವೇತನ ಪಡೆಯುವ ವರ್ಗದವರು ಮನೆಯಿಂದ ಕೆಲಸ ಮಾಡುತ್ತಿದ್ದರೆ ಯಾವುದೇ ಕಡಿತ ಇಲ್ಲದೆ ಪೂರ್ತಿ ವೇತನ ಪಾವತಿ ಮಾಡಬೇಕು. ರಜೆ ಹಾಕಿ ಮನೆಯಲ್ಲಿದ್ದರೆ ಅವರಿಗೆ ವೇತನದಲ್ಲಿ ಶೇ.50ರಷ್ಟನ್ನು ಪಾವತಿ ಮಾಡಬೇಕು.

50 ಸಾವಿರಕ್ಕಿಂತ ಮೇಲ್ಪಟ್ಟ ಸಂಬಳದಾರರು: 50 ಪ್ಲಸ್ ಸಾವಿರ ವೇತನ ಪಡೆಯುವವರು ಮನೆಯಿಂದಲೇ ಕೆಲಸ ಮಾಡಿದ್ದರೆ ವೇತನ ಪಾವತಿ ಮಾಡಬೇಕು. ಯಾವುದೇ ಕೆಲಸ ಮಾಡದೆ ರಜೆ ಹಾಕಿ ಮನೆಯಲ್ಲಿದ್ದರೆ ವೇತನ ಪಾವತಿ ಮಾಡುವ ಅಗತ್ಯ ಇಲ್ಲ ಎಂದು ಎಫ್ ಕೆ ಸಿ ಸಿ ಅಧ್ಯಕ್ಷ ಸಿ.ಆರ್.ಜನಾರ್ದನ್ ಸ್ಪಷ್ಟಪಡಿಸಿದ್ದಾರೆ.

English summary
Covid19 lock down: The Federation of Karnataka Chambers of Commerce and Industry (FKCCI), in a letter to the Prime Minister Narendra Modi demanded
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X