ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡುಕರಿಗೆ ಉಪವಾಸ ಮುಂದುವರಿಕೆ ಮೇ 3ರ ತನಕ ಎಣ್ಣೆ ಸಿಗಲ್ಲ

|
Google Oneindia Kannada News

ಬೆಂಗಳೂರು, ಏಪ್ರಿಲ್ 15: ಕೊರೊನಾವೈರಸ್ ಸೋಂಕು ಹರಡದಂತೆ ವಿಧಿಸಲಾಗಿರುವ ಲಾಕ್‌ಡೌನ್‌ ಎರಡನೇ ಅವಧಿಗೆ 19ದಿನಗಳ ಕಾಲಕ್ಕೆ ವಿಸ್ತರಣೆಯಾಗಿದೆ. ಏಪ್ರಿಲ್ 15ರಂದು ಈ ಕುರಿತಂತೆ ಗೃಹ ಸಚಿವಾಲಯ ಮಾರ್ಗಸೂಚಿ ನೀಡಿದೆ. ಇಡೀ ದೇಶದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಕರ್ನಾಟಕದಲ್ಲಿ ಮದ್ಯ ಮಾರಾಟ ಬಗ್ಗೆ ಕೇಂದ್ರದ ಮಾರ್ಗಸೂಚಿ ನೋಡಿಕೊಂಡು ನಿರ್ಧರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದರು. ಆದರೆ, ಗೃಹ ಸಚಿವಾಲಯದ ಮಾರ್ಗಸೂಚಿಯಲ್ಲಿ ಮದ್ಯ ಮಾರಾಟಕ್ಕೆ ಯಾವುದೇ ವಿನಾಯಿತಿ ಸೂಚಿಸಿಲ್ಲ. ಹೀಗಾಗಿ ಎರಡನೇ ಅವಧಿ ಲಾಕ್ ಡೌನ್ ಮುಗಿಯುವ ತನಕ ರಾಜ್ಯದೆಲ್ಲೆಡೆ ಮದ್ಯ ಮಾರಾಟ ಸ್ಥಗಿತವಾಗಿರಲಿದೆ.

ಲಾಕ್ಡೌನ್ ವಿಸ್ತರಣೆ ಘೋಷಣೆಗೂ ಮುನ್ನ ಮಾತನಾಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಂಎಸ್‌ಐಎಲ್ ಮೂಲಕ ಮದ್ಯ ಮಾರಾಟ ಮಾಡುವ ಚಿಂತನೆ ಇದೆ ಎಂದಿದ್ದರು.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನಿಂದ 10 ಮಂದಿ ಮೃತಪಟ್ಟಿದ್ದಾರೆ. ಆದರೆ ಅಷ್ಟೇ ಪ್ರಮಾಣದಲ್ಲಿ ಮದ್ಯವ್ಯಸನಿಗಳು ಮದ್ಯ ಸಿಗದೇ ಇದ್ದುದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡಬೇಕಾಗಿ ಭಾರಿ ಒತ್ತಡ ಕೇಳಿ ಬಂದಿತ್ತು. ಆದರೆ,
ಎಂಎಸ್‌ಐಲ್‌ ಮಳಿಗೆಗಳ ಮೂಲಕ ಮದ್ಯ ಮಾರಾಟಕ್ಕೆ ಮುಂದಾಗಿರುವ ಸರ್ಕಾರದ ಚಿಂತನೆಯನ್ನು ಬೆಂಗಳೂರಿನ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕರ್ನಾಟಕ ವಿರೋಧ ವ್ಯಕ್ತಪಡಿಸಿತ್ತು.

ಮದ್ಯ ವ್ಯಾಪಾರಿಗಳ ಸಂಘದ ವಿರೋಧವೇಕೆ?

ಮದ್ಯ ವ್ಯಾಪಾರಿಗಳ ಸಂಘದ ವಿರೋಧವೇಕೆ?

ಕೊರೊನಾ ವೈರಸ್ ಸಮಸ್ಯೆಯಿಂದ ಸಿಎಲ್‌ 4 ಲೈಸನ್ಸ್‌ ಹೊಂದಿರುವ ಕ್ಲಬ್‌ಗಳು ಮಾರ್ಚ್‌ 14 ರಿಂದ ಮುಚ್ಚಿವೆ. ಸಿಎಲ್ 2 ಹಾಗೂ ಸಿಎಲ್ 11ಸಿ ಲೈಸನ್ಸ್‌ ಹೊರತು ಪಡಿಸಿ ಉಳಿದ ಎಲ್ಲ ವರ್ಗದ ಲೈಸನ್ಸ್‌ ಹೊಂದಿರುವ ಮದ್ಯದ ಅಂಗಡಿಗಳು ಮಾರ್ಚ್‌ 21 ರಿಂದ ಮುಚ್ಚಲ್ಪಟ್ಟಿವೆ. ಜೊತೆಗೆ ಸಿಎಲ್ 2 ಹಾಗೂ ಸಿಎಲ್ 11ಸಿ ಲೈಸನ್ಸ್ ಹೊಂದಿದ್ದ ಅಂಗಡಿಗಳು ಮಾರ್ಚ್‌ 24 ರಿಂದ ಮುಚ್ಚಲ್ಪಿಟ್ಟಿವೆ. ಸರ್ಕಾರದ ನಿಲುವಿಗೆ ಮದ್ಯದ ವ್ಯಾಪಾರಿಗಳು ಸಹಕಾರ ಕೊಟ್ಟಿದ್ದಾರೆ. ರಾಜ್ಯದಲ್ಲಿ ಅನೇಕ ಮಂದಿ ಮದ್ಯ ಸೇವನೆ ಮಾಡುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದೀಗ ಸರ್ಕಾರ ಎಂಎಸ್‌ಐಎಲ್‌ಗಳ ಮೂಲಕ ಮದ್ಯ ಮಾರಾಟದ ಚಿಂತನೆ ಮಾಡಿರುವುದನ್ನು ರಾಜ್ಯ ಮದ್ಯ ವ್ಯಾಪಾರಿಗಳ ಸಂಘ ವಿರೋಧಿಸಿದೆ.

ಎಂಎಸ್ಐಎಲ್ ಮಾತ್ರ ಏಕೆ?

ಎಂಎಸ್ಐಎಲ್ ಮಾತ್ರ ಏಕೆ?

ಎಲ್ಲಾ ಲೈಸನ್ಸ್‌ ಹೊಂದಿರುವವರಿಗೆ ಮದ್ಯ ಮಾರಾಟಕ್ಕೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿಕೊಂಡಿದೆ. ರಾಜ್ಯದಲ್ಲಿ ಕೇವಲ 789 ಎಂಎಸ್‌ಐಎಲ್ ಮಳಿಗೆಗಳಿವೆ, ಅವುಗಳಿಗೆ ಮಾತ್ರ ಮದ್ಯ ಮಾರಾಟದ ಅವಕಾಶ ಕೊಟ್ಟರೆ ಜನದಟ್ಟಣೆ ಹೆಚ್ಚಾಗಿ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಮದ್ಯ ಮಾರಾಟದ ಲೈಸನ್ಸ್‌ ಹೊಂದಿರುವ ಎಲ್ಲರಿಗೂ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗ್ರಾಹಕರಿಗೆ ಪಾರ್ಸೆಲ್‌ ಮಾತ್ರ ನೀಡಲು ವಿಶೇಷ ಅನುಮತಿ ಕೊಡಬೇಕೆಂದು ಸಂಘಟನೆ ಮನವಿ ಮಾಡಿದೆ.

ಮೇ 3 ರ ತನಕ ಮದ್ಯ ಮಾರಾಟವಿಲ್ಲ

ಮೇ 3 ರ ತನಕ ಮದ್ಯ ಮಾರಾಟವಿಲ್ಲ

ಪ್ರವಾಸಿಗರಿಗೆ ಸ್ಥಳಾವಕಾಶ ಕಲ್ಪಿಸುವ ಹೋಟೆಲ್‌ಗಳು, ಹೋಂ ಸ್ಟೇಗಳು, ವಸತಿಗೃಹಗಳು ಮತ್ತು ಮೋಟೆಲ್‌ಗಳು, ಕ್ಲಬ್, ಪಬ್, ಬಾರ್ ಗಳು ಎಲ್ಲವನ್ನು ನಿರ್ಬಂಧಿತ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೀಗಾಗಿ, ಮೇ 3 ರ ತನಕ ಸರ್ಕಾರಿ ಹಾಗೂ ಖಾಸಗಿ ಮದ್ಯ ಮಾರಾಟ ಮಳಿಗೆಗಳನ್ನು ಮಾರುವಂತಿಲ್ಲ. ರಾಜ್ಯದಲ್ಲಿ ಜಿಲ್ಲಾಧಿಕಾರಿಗಳು ಈ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಾಗುತ್ತದೆ.

ಲಾಕ್ ಡೌನ್ ನಿಯಮ ಉಲ್ಲಂಘಿಸಿದರೆ ಶಿಕ್ಷೆ

ಲಾಕ್ ಡೌನ್ ನಿಯಮ ಉಲ್ಲಂಘಿಸಿದರೆ ಶಿಕ್ಷೆ

ಲಾಕ್‌ಡೌನ್ ಕ್ರಮಗಳಲ್ಲಿ ನಿರ್ದಿಷ್ಟಪಡಿಸಿದಂತೆ, ಸಾಮಾಜಿಕ ದೂರ ಮತ್ತು ಸರಿಯಾದ ಮೇಲಿನ ಪ್ರತಿಯೊಂದು ಚಟುವಟಿಕೆಗಳಲ್ಲಿ ನೈರ್ಮಲ್ಯ ಅಭ್ಯಾಸಗಳನ್ನು ಖಚಿತಪಡಿಸಿಕೊಳ್ಳಬೇಕು. ಅನುಸರಣೆ ಖಚಿತಪಡಿಸಿಕೊಳ್ಳಲು ಸಂಸ್ಥೆ / ಸ್ಥಾಪನೆಯ ಮುಖ್ಯಸ್ಥರ ಜವಾಬ್ದಾರಿ ಅಂತಹ . ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಚಿತಪಡಿಸುತ್ತಾರೆ

ಒಂದು ವೇಳೆ ನಿರ್ಬಂಧ, ನಿಯಮ ಮೀರಿದರೆ ನಿರ್ವಹಣಾ ಕಾಯ್ದೆಯ ಸೆಕ್ಷನ್ 51 ರಿಂದ 60 ರ ನಿಬಂಧನೆಗಳ ಪ್ರಕಾರ, 2005, ಸೆಕ್ಷನ್ ಅಡಿಯಲ್ಲಿ ಕಾನೂನು ಕ್ರಮಗಳ ಜೊತೆಗೆ. ಐಪಿಸಿಯ 188 ಅನ್ವಯ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

ಕರ್ನಾಟಕದ ದಾವಣಗೆರೆ ಜಿಲ್ಲಾಧಿಕಾರಿ ಈ ಕುರಿತಂತೆ ಮೊದಲಿಗೆ ಪ್ರಕಟಣೆ ಹೊರಡಿಸಿ, ಜಿಲ್ಲೆಯಲ್ಲಿರುವ ಯಾವುದೇ ಬಾರ್‌ಗಳು ಮದ್ಯ ಮಾರಾಟವನ್ನು ಮಾಡುವಂತಿಲ್ಲ. ಯಾರಾದರೂ, ನಿಯಮ ಪಾಲನೆ ಮಾಡದೆ ಇದ್ದರೆ, ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

English summary
Lock Down 2: MHA guidelines strictly says no provision for Excise Department to allow Liquor Sales even through state owned outlets till May 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X