ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 30ರೊಳಗೆ ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ದುಪ್ಪಟ್ಟು ದಂಡ

|
Google Oneindia Kannada News

ನವದೆಹಲಿ, ಜೂನ್ 4 : ಪ್ಯಾನ್ ಕಾರ್ಡ್‌ ಆಧಾರ್ ಲಿಂಕ್ ಮಾಡಿಲ್ಲದೆ ಇರುವವರು ಜೂನ್ 30 ರೊಳಗೆ ಲಿಂಕ್ ಮಾಡಿ. ಇಲ್ಲದಿದ್ದರೆ ಜುಲೈ 1 ರ ಬಳಿಕ ದುಪ್ಪಟ್ಟು ದಂಡ ಪಾವತಿಸಬೇಕಾಗುತ್ತದೆ. ಈಗ ಆಧಾರ್ ಪ್ಯಾನ್ ಲಿಂಕ್ ಮಾಡಲು 500 ರೂಪಾಯಿ ದಂಡ ತೆರಬೇಕಿದೆ. ಜುಲೈ 1 ರ ನಂತರ ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡಿಸಲು ದುಪ್ಪಟ್ಟು ಅಂದರೆ 1000 ರೂಪಾಯಿ ದಂಡ ತೆರಬೇಕಾಗುತ್ತದೆ.

ಪ್ಯಾನ್ - ಆಧಾರ್ ಜೋಡಣೆಗೆ ಇದ್ದ ಅಂತಿಮ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. 2022 ಮಾರ್ಚ್‌ 31ರವರೆಗೆ ಆಧಾರ್ ಪ್ಯಾನ್ ಕಾರ್ಡ್ ಜೋಡಣೆಗೆ ಅಂತಿಮ ಗಡುವು ನೀಡಿದ್ದು ಈಗ ಅದನ್ನು 2023ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಏಪ್ರಿಲ್ 1 ರ ನಂತರ ಆಧಾರ್ ಪ್ಯಾನ್ ಕಾರ್ಡ್‌ ಜೋಡಣೆಗೆ ದಂಡ ವಿಧಿಸಲಾಗುತ್ತಿತ್ತು.

ಇಪಿಎಫ್ ಮೇಲಿನ ಬಡ್ಡಿ ಕಡಿತಕ್ಕೆ ಸರ್ಕಾರ ಅನುಮೋದನೆಇಪಿಎಫ್ ಮೇಲಿನ ಬಡ್ಡಿ ಕಡಿತಕ್ಕೆ ಸರ್ಕಾರ ಅನುಮೋದನೆ

ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಹೊರಡಿಸಿರುವ ಸುತ್ತೋಲೆಯಲ್ಲಿ 2022 ರ ಏಪ್ರಿಲ್ 1ರಿಂದ ಜೂನ್ 30ರ ತನಕ ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಿದರೆ 500ರೂ. ವಿಳಂಬ ಶುಲ್ಕ ಪಾವತಿಸಬೇಕಿದೆ. ಇನ್ನು ಜುಲೈ 1ರ ಬಳಿಕ ಆಧಾರ್-ಪ್ಯಾನ್ ಜೋಡಣೆಗೆ 1000 ರೂ. ದಂಡ ಪಾವತಿಸಬೇಕಾಗುತ್ತದೆ ಎಂದು ಸಿಬಿಡಿಟಿ ತಿಳಿಸಿದೆ.

2023 ಮಾರ್ಚ್ 31ರವೆರೆಗೆ ಇದೆ ಅವಕಾಶ

2023 ಮಾರ್ಚ್ 31ರವೆರೆಗೆ ಇದೆ ಅವಕಾಶ

2023ರ ಮಾರ್ಚ್ 31 ರೊಳಗೆ ಪ್ಯಾನ್ ಅನ್ನು ಆಧಾರ್ ಜೊತೆ ಜೋಡಣೆ ಮಾಡದಿದ್ದರೆ ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಸಿಬಿಡಿಟಿ ತಿಳಿಸಿದೆ.

ಆದಾಯ ತೆರಿಗೆ ಕಾನೂನಿನ ಪ್ರಕಾರ 2017ರ ಜುಲೈ 1ರಿಂದ ಎಲ್ಲಾ ನಾಗರೀಕರು ಪ್ಯಾನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಕಡ್ಡಾಯವೆಂದು ಹೇಳಿದೆ. ನಿಗದಿತ ಗಡುವಿನೊಳಗೆ ಆಧಾರ್ ಜೊತೆ ಜೋಡಣೆ ಆಗದ ಪ್ಯಾನ್ ಕಾರ್ಡ್ ಗಳನ್ನು ನಿಷ್ಕ್ರೀಯಗೊಳಿಸುವುದಾಗಿ ಆದಾಯ ತೆರಿಗೆ ಇಲಾಖೆ ಈ ಮೊದಲೇ ಮಾಹಿತಿ ನೀಡಿತ್ತು.

ಪ್ಯಾನ್ ಕಾರ್ಡ್ ನಿಷ್ಕ್ರೀಯಗೊಂಡರೆ ಬ್ಯಾಂಕಿಂಗ್ ವ್ಯವಹಾರ ಅಸಾಧ್ಯ

ಪ್ಯಾನ್ ಕಾರ್ಡ್ ನಿಷ್ಕ್ರೀಯಗೊಂಡರೆ ಬ್ಯಾಂಕಿಂಗ್ ವ್ಯವಹಾರ ಅಸಾಧ್ಯ

ಒಂದು ವೇಳೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ನಿಮಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅವಕಾಶ ಇರುವುದಿಲ್ಲ. ಬ್ಯಾಂಕ್ ಖಾತೆ ತೆರೆಯಲು, ಮ್ಯೂಷುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು, ಷೇರು ಮಾರುಕಟ್ಟೆಯಲ್ಲಿ ವ್ಯವಹಾರಕ್ಕಾಗಿ ಡಿಮ್ಯಾಟ್ ಖಾತೆ ತೆರೆಯಲು ಸಹ ಸಾಧ್ಯವಾಗುವುದಿಲ್ಲ.

ಈಗ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಪ್ಯಾನ್ ಕಾರ್ಡ್ ಅನಿವಾರ್ಯವಾಗಿದೆ. ಖಾತೆ ಹೊಂದಿರುವವರು ಸಹ 50 ಸಾವಿರ ರೂಪಾಯಿಗಳಿಂತ ಅಧಿಕ ಮೊತ್ತದ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅಗತ್ಯವಾಗಿದೆ.

ಆಧಾರ್ ಕಾರ್ಡ್ ಎಲ್ಲಿ ಬಳಸಬೇಕು, ಎಲ್ಲಿ ಬಳಸಬಾರದು, ತಿಳಿದಿರಿಆಧಾರ್ ಕಾರ್ಡ್ ಎಲ್ಲಿ ಬಳಸಬೇಕು, ಎಲ್ಲಿ ಬಳಸಬಾರದು, ತಿಳಿದಿರಿ

ಜೋಡಣೆ ಮಾಡೋದು ಹೇಗೆ

ಜೋಡಣೆ ಮಾಡೋದು ಹೇಗೆ

ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲು ಅನೇಕ ವಿಧಾನಗಳಿವೆ. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್, ಎನ್ಎಸ್ ಡಿಎಲ್, ಎಸ್ಎಂಎಸ್ ಅಥವಾ ಯುಟಿಐಐಎಲ್ ಕಚೇರಿಗಳಿಗೆ ಭೇಟಿ ನೀಡಿ ಪ್ಯಾನ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು.

ದಂಡ ಪಾವತಿಸಲು ಆದಾಯ ಇಲಾಖೆ ಗೈಡ್‌ಲೈನ್

ದಂಡ ಪಾವತಿಸಲು ಆದಾಯ ಇಲಾಖೆ ಗೈಡ್‌ಲೈನ್

ಆದಾಯ ತೆರಿಗೆ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ದಂಡದ ಮೊತ್ತವನ್ನು ಹೇಗೆ ಪಾವತಿಸಬೇಕು ಎಂದು ಮಾಹಿತಿ ನೀಡಿದೆ.

ಆದಾಯ ತೆರಿಗೆ ಇಲಾಕೆ ಪ್ರಕಾರ " 2022 ಜೂನ್ 30ರವೆರೆಗೆ ಲಿಂಕ್ ಮಾಡುವವರು 500 ರೂಪಾಯಿ ಶುಲ್ಕ ಪಾವತಿಸಬೇಕು. ಇಲ್ಲದಿದ್ದರೆ ಜುಲೈ 1 ನಂತರ 1000 ರೂಪಾಯಿ ಪಾವತಿಸಬೇಕಾಗುತ್ತದೆ. ಚಲನ್ ಸಂಖ್ಯೆ ಐಟಿಎನ್‌ಎಸ್‌ 280 ಮೂಲಕ ಶುಲ್ಕ ಪಾವತಿಸಬೇಕಾಗುತ್ತದೆ. ಶುಲ್ಕ ಪಾವತಿಸಿದ ನಾಲ್ಕರಿಂದ ಐದು ಕೆಲಸದ ದಿನಗಳ ಅವಧಿಯ ನಂತರ ಪ್ಯಾನ್ ಜೊತೆ ಆಧಾರ್ ಜೋಡಣೆ ಮಾಡಬೇಕು" ಎಂದು ತಿಳಿಸಿದೆ.

English summary
Those who do not have link PAN Card with Aadhaar, link by June 30th. Otherwise you will have to pay a double fine after July 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X