ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವವಿಮೆ ಕಂತು ಕಟ್ಟುವ ದಿನಾಂಕ ವಿಸ್ತರಣೆ

By Mahesh
|
Google Oneindia Kannada News

ನವದೆಹಲಿ, ನವೆಂಬರ್ 27: ಜೀವ ವಿಮಾ ಯೋಜನೆ ಪ್ರೀಮಿಯಂ ಕಟ್ಟುವವರಿಗೆ ಶುಭ ಸುದ್ದಿ ಸಿಕ್ಕಿದೆ. ಪಾಲಿಸಿದಾರರು ತಮ್ಮ ವಿಮೆ ಕಂತನ್ನು ಇನ್ನೂ 30ದಿನ ಬಿಟ್ಟು ಕಟ್ಟಿದರೂ ತೊಂದರೆಯಿಲ್ಲ. ಪ್ರೀಮಿಯಂ ಪೇಮೆಂಟ್ ಕೊನೆ ದಿನಾಂಕವನ್ನು ಎಲ್ ಐಸಿ ವಿಸ್ತರಿಸಿದೆ.

ನವೆಂಬರ್ 8ರಿಂದ 500 ಹಾಗೂ 1000 ರುಪಾಯಿ ನೋಟುಗಳ ಬಳಕೆ ನಿಷೇಧವಾದ ಬಳಿಕ ದೊಡ್ಡ ಮೊತ್ತದ ಪ್ರೀಮಿಯಂ ಪಾವತಿಸಲು ಗ್ರಾಹಕರು ಪರದಾಡುತ್ತಿದ್ದಾರೆ. ಬ್ಯಾಂಕು ಹಾಗೂ ಎಟಿಎಂಗಳಿಂದ ನಗದು ಪಡೆಯಲು ಕೂಡಾ ಆಗುತ್ತಿಲ್ಲ. ಅಲ್ಲದೆ, ವಾರಕ್ಕೆ 24,000 ರುಪಾಯಿ ವಿಥ್ ಡ್ರಾ ಮಿತಿ ನೀಡಲಾಗಿದೆ.

Life insurance policy holders get 30 days more to pay premium

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಲ್ ಐಸಿ ತನ್ನ ಗ್ರಾಹಕರಿಗೆ ಆದಷ್ಟು ಆನ್ ಲೈನ್ ಮೂಲಕ ವಿಮೆ ಕಂತು ಪಾವತಿಸುವಂತೆ ಸೂಚಿಸಿದೆ. ನಗದುರೂಪದಲ್ಲಿ ಪ್ರೀಮಿಯಂ ಭರಿಸಲು ಬಯಸುವವರಿಗೆ ಇನ್ನೂ ಒಂದು ತಿಂಗಳ ಅವಕಾಶ ನೀಡಲಾಗಿದೆ. ಇದು ನವೆಂಬರ್ 8 ರಿಂದ ಡಿಸೆಂಬರ್ 31, 2016 ರ ಅವಧಿಯಲ್ಲಿ ಪ್ರೀಮಿಯಂ ಕಟ್ಟಬೇಕಾಗಿರುವ ಗ್ರಾಹಕರಿಗೆ ಅನ್ವಯವಾಗಲಿದೆ.

1ಕೋಟಿ ರು ತನಕದ ಮನೆ, ಕಾರು, ತೋಟ ಇನ್ನಿತರ ಸಾಲಗಳ ರೀಪೇಮೆಂಟ್ ದಿನಾಂಕವನ್ನು 60ದಿನಗಳ ಕಾಲ ವಿಸ್ತರಿಸಿ ಆರ್ ಬಿಐ ಪ್ರಕಟಣೆ ಹೊರಡಿಸಿದ ಮೇಲೆ ಎಲ್ ಐಸಿ ಈ ಕ್ರಮ ಕೈಗೊಂಡಿದೆ.(ಪಿಟಿಐ)

English summary
Extending a helping hand to people facing cash crunch, regulator Irdai has asked life insurance companies to provide an additional window of 30 days to policy holders for paying premium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X