ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಕ್ವಿಟಿಗಳಲ್ಲಿ 34000 ಕೋಟಿ ರೂ ಹೂಡಿಕೆಗೆ ಮುಂದಾದ ಎಲ್ಐಸಿ

|
Google Oneindia Kannada News

ನವದೆಹಲಿ, ಆಗಸ್ಟ್ 13: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿದಿದೆ. ಇದರ ಮಧ್ಯೆ ಅತಿದೊಡ್ಡ ದೇಶೀಯ ಸಾಂಸ್ಥಿಕ ಹೂಡಿಕೆದಾರರಲ್ಲಿ ಜೀವ ವಿಮಾ ನಿಗಮವು ಈ ಸಾಲಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಈಕ್ವಿಟಿಗಳಲ್ಲಿ 34,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.

ಎಲ್‌ಐಸಿಯ ಅಧ್ಯಕ್ಷ ಎಂ.ಆರ್.ಕುಮಾರ್, "ನಾವು ಹೂಡಿಕೆ ತತ್ವಕ್ಕೆ ವಿರುದ್ಧವಾಗಿದ್ದೇವೆ, ಆದ್ದರಿಂದ ಷೇರುಗಳನ್ನು ಖರೀದಿಸಲು ಇದು ಉತ್ತಮ ಸಮಯ ಎಂದು ಭಾವಿಸಿದ್ದೇವೆ," ಎಂದು ಹೇಳಿದರು. ಎಲ್ಐಸಿ 46,444 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದು, 12,444 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ ಎಂದರು.

ಮೊದಲ ತ್ರೈಮಾಸಿದ ಗಳಿಕೆಯ ಸಭೆಯಲ್ಲಿ ಅವರು ಮಾತನಾಡಿದರು. ದೇಶದ ಷೇರು ಮಾರುಕಟ್ಟೆಯ ಏರಿಳಿತದ ಕಾರಣದಿಂದಾಗಿ, ವಿಮಾದಾರರು ಲಾಭಗಳನ್ನು ಕಾಯ್ದಿರಿಸುವ ಬದಲು ಹೆಚ್ಚಿನ ಷೇರುಗಳನ್ನು ಖರೀದಿಸುತ್ತಿದ್ದಾರೆ. ಈ ಕಾರಣದಿಂದ ಎಲ್‌ಐಸಿಯ ಹೂಡಿಕೆಯ ಲಾಭಗಳು ವರ್ಷದಿಂದ ವರ್ಷಕ್ಕೆ ಕುಸಿಯಿತು. ಈಗ ಕಂಪನಿಯು ಜೂನ್ ತ್ರೈಮಾಸಿಕದಲ್ಲಿ 5,076 ಕೋಟಿ ಈಕ್ವಿಟಿ ಲಾಭವನ್ನು ಬುಕ್ ಮಾಡಿದೆ ಎಂದು ಕುಮಾರ್ ಹೇಳಿದರು.

Life Insurance Corporation will invests 34000 crore rupees in equities amid Stock market volatility

683 ಕೋಟಿ ರೂಪಾಯಿ ನಿವ್ವಳ ಲಾಭ:

2023ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಎಲ್ಐಸಿ ಕಂಪನಿಯು 683 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಗಳಿಸಿದ್ದು, ಹಿಂದಿನ ವರ್ಷದ ಅವಧಿಯಲ್ಲಿ 3 ಕೋಟಿಯಿಂದ ನೂರಾರು ಬಹು ಪಟ್ಟು ಹೆಚ್ಚಳವಾಗಿದೆ. ವಿಮಾದಾರರ ಪ್ರೀಮಿಯಂ ಆದಾಯದಲ್ಲಿ ಶೇಕಡಾ 20ರಷ್ಟು ಹೆಚ್ಚಳದಿಂದ 98,352 ಕೋಟಿಗೆ ಏರಿಕೆಯಾಗಿದೆ. "ಮೊದಲ ತ್ರೈಮಾಸಿಕದಲ್ಲಿ ಬೆಳವಣಿಗೆಯು ತುಂಬಾ ದೃಢವಾಗಿದ್ದರೂ, ಕಳೆದ ವರ್ಷ ಕೋವಿಡ್ ಎರಡನೇ ಅಲೆಯ ಪ್ರಭಾವದಿಂದಾಗಿ ಇದು ಕಡಿಮೆಯಾಗಿತ್ತು," ಎಂದು ಕುಮಾರ್ ಹೇಳಿದರು.

ವಿಮಾದಾರರ ಒಟ್ಟಾರೆ ಮಾರುಕಟ್ಟೆ ಪಾಲು:

2022ರ ಸಾಲಿನಲ್ಲಿ ಮೊದಲ ವರ್ಷದ ಪ್ರೀಮಿಯಂ ಆದಾಯದ ಪ್ರಕಾರ ವಿಮಾದಾರರ ಒಟ್ಟಾರೆ ಮಾರುಕಟ್ಟೆ ಪಾಲು ಶೇ.63 ರಿಂದ ಶೇ.65ಕ್ಕೆ ಏರಿಕೆಯಾಗಿದೆ. ಹಿಂದಿನ ವರ್ಷದಲ್ಲಿ ಕಡಿಮೆ ಬೇಸ್‌ನಿಂದಾಗಿ ಮೊದಲ ತ್ರೈಮಾಸಿಕದಲ್ಲಿ ಮಾರಾಟವಾದ ವೈಯಕ್ತಿಕ ಪಾಲಿಸಿಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಶೇ.60ರಷ್ಟು ಹೆಚ್ಚಾಗಿದೆ ಎಂದು ಹೇಳಿದರು. ಎಲ್ಐಸಿ ಕಂಪನಿಯು ತನ್ನ ಏಜೆಂಟರಿಗೆ ಪ್ರೀಮಿಯಂ ಮೊತ್ತದ ಮೇಲೆ ಮಾತ್ರವಲ್ಲದೆ ಮಾರಾಟವಾದ ಪಾಲಿಸಿಗಳ ಸಂಖ್ಯೆಯ ಮೇಲೆ ಗಮನವನ್ನು ಕೇಂದ್ರೀಕರಿಸಲಾಗುತ್ತದೆ ಎಂದರು.

ಎಲ್ಐಸಿ ಕಂಪನಿಯ ನಿವ್ವಳ ಸಾಲ ಇಳಿಕೆ:

2023ರ ಮೊದಲ ತ್ರೈಮಾಸಿಕದಲ್ಲಿ ಎಲ್ಐಸಿಯ ವಾರ್ಷಿಕ ಪ್ರೀಮಿಯಂ ಸಮಾನವು 10,270 ಕೋಟಿ ಆಗಿತ್ತು. ಅದರಲ್ಲಿ ವೈಯಕ್ತಿಕ ವ್ಯವಹಾರವು 63 ಪ್ರತಿಶತದಷ್ಟಿದ್ದರೆ, ಗುಂಪು ವ್ಯವಹಾರವು 37 ಪ್ರತಿಶತದಷ್ಟಿತ್ತು. ಮೊದಲ ತ್ರೈಮಾಸಿಕದಲ್ಲಿ ವಿಮಾದಾರರ ಆಸ್ತಿ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡಿದೆ. ನಿವ್ವಳ ಸಾಲಗಳು ಹಿಂದಿನ ವರ್ಷದ ಅವಧಿಯಲ್ಲಿ 194 ಕೋಟಿಗಳಿದ್ದು, ಈ ಸಾಲಿನಲ್ಲಿ 9 ಕೋಟಿ ರೂಪಾಯಿಗೆ ಇಳಿದಿದೆ. ಏಕೆಂದರೆ ಕಂಪನಿಯು 26,620 ಕೋಟಿಗಳ ಒಟ್ಟು NPA ವಿರುದ್ಧ ₹ 26,611 ಕೋಟಿ ನಿಬಂಧನೆಗಳನ್ನು ಮಾಡಿದೆ ಎಂದು ಮಾಹಿತಿ ನೀಡಿದರು.

English summary
Life Insurance Corporation will invests 34000 crore rupees in equities amid Stock market volatility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X