ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಕುಸಿತ ಕಂಡ ಎಲ್‌ಐಸಿ ಷೇರು: ಹೂಡಿಕೆದಾರರಿಗೆ ಭಾರಿ ನಷ್ಟ

|
Google Oneindia Kannada News

ದೆಹಲಿ, ಜೂನ್ 6: ಭಾರಿ ನಿರೀಕ್ಷೆಯೊಂದಿಗೆ ಷೇರುಮಾರುಕಟ್ಟೆಗೆ ಪ್ರವೇಶಿಸಿದ್ದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಹೂಡಿಕೆದಾರರು ಭಾರಿ ನಷ್ಟ ಅನುಭವಿಸಿದ್ದಾರೆ.

ಸೋಮವಾರ ಎಲ್‌ಐಸಿ ಷೇರು ಬೆಲೆ ಸೋಮವಾರದ ದಿನದಾಂತ್ಯಕ್ಕೆ 800 ರೂಪಾಯಿಗಿಂತ ಕಡಿಮೆಯಾಗಿ, 776.50 ರೂಪಾಯಿಯಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಷೇರಿನ ಐಪಿಒ ವಿತರಣೆ ಬೆಲೆ 949 ರೂಪಾಯಿಗಳಿಗೆ ಹೋಲಿಸಿದರೆ ಸದ್ಯದ ಬೆಲೆ ಶೇ.23.75ಕ್ಕಿಂತ ಕಡಿಮೆಯಾಗಿವೆ.

ಎಲ್‌ಐಸಿ ಐಪಿಒ: ಮೊದಲ ದಿನವೇ ಷೇರು ಕೊಳ್ಳಲು ಪೈಪೋಟಿಎಲ್‌ಐಸಿ ಐಪಿಒ: ಮೊದಲ ದಿನವೇ ಷೇರು ಕೊಳ್ಳಲು ಪೈಪೋಟಿ

ಷೇರುಗಳ ಬೆಲೆಯಲ್ಲಿನ ಕುಸಿತದೊಂದಿಗೆ ಎಲ್‌ಐಸಿ ಮಾರುಕಟ್ಟೆ ಮೌಲ್ಯ 5 ಲಕ್ಷ ಕೋಟಿ ರೂಪಾಯಿಗಳಿಗಿಂತ ಕೆಳಕ್ಕಿಳಿದು, 4.92 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಐಪಿಒದಲ್ಲಿ ಷೇರು ವಿತರಣೆ ವೇಳೆ ಎಲ್‌ಐಸಿ ಮಾರುಕಟ್ಟೆ ಮೌಲ್ಯ 6,00,242 ಕೋಟಿ ರೂಪಾಯಿಗಳಷ್ಟಿತ್ತು. ಇದುವರೆಗೂ ಒಟ್ಟಾರೆ ಕಂಪನಿ ಮೌಲ್ಯ 1.08 ಲಕ್ಷ ಕೋಟಿ ಕಡಿಮೆಯಾಗಿದೆ. ಈ ಕುಸಿತದೊಂದಿಗೆ ಎಲ್‌ಐಸಿ ಸದ್ಯ ಅತ್ಯಮೂಲ್ಯ ಕಂಪನಿ ರ್‍ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿದೆ.

LIC Share Prices Hit New Low: Falls Below Rs 5 Trillion

2022ರ ಮೇ 17 ರಂದು ಎಲ್‌ಐಸಿ ಷೇರುಗಳು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲ್ಪಟ್ಟಿದ್ದವು. ಷೇರುಗಳು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತವೆ ಎಂದೇ ನಂಬಲಾಗಿತ್ತು. ದೇಶದ ಜನರಲ್ಲಿ, ಹೂಡಿಕೆದಾರರಲ್ಲಿ ಎಲ್‌ಐಸಿ ಷೇರು ಕುರಿತು ಭಾರಿ ಕುತೂಹಲ ಮೂಡಿಸಿತ್ತು. ದೀರ್ಘಾವಧಿಯ ನಿರೀಕ್ಷೆ ಮತ್ತು ಗಾತ್ರದಲ್ಲಿ ತೀವ್ರ ಕಡಿತದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ತೀವ್ರ ಬೇಡಿಕೆ ಸೃಷ್ಟಿಯಾಗಬಹುದು ಎನ್ನಲಾಗಿತ್ತು.

LIC IPO: ಎಲ್‌ಐಸಿ ಐಪಿಒ ತಡೆಗೆ ಬಾಂಬೆ ಹೈಕೋರ್ಟ್ ನಕಾರLIC IPO: ಎಲ್‌ಐಸಿ ಐಪಿಒ ತಡೆಗೆ ಬಾಂಬೆ ಹೈಕೋರ್ಟ್ ನಕಾರ

ನಿರೀಕ್ಷೆಯೊಂದಿಗೆ ಮಾರುಕಟ್ಟೆಗೆ ಬಂದ ಷೇರುಗಳು ಪ್ರಾರಂಭದಿಂದಲೇ ನಿರಂತರ ಕುಸಿತ ಕಾಣುತ್ತಿವೆ. ಅಂದಿನಿಂದ ಇಂದಿನವರೆಗೂ ಕೇವಲ ನಾಲ್ಕು ವಹಿವಾಟುಗಳಲ್ಲಿ ಮಾತ್ರ ಗಳಿಕೆ ಕಂಡಿವೆ, ಉಳಿದ ದಿನಗಳಲ್ಲಿ ಮಾರಾಟದ ಒತ್ತಡದಲ್ಲಿ ಕುಸಿತ ಕಂಡಿದೆ.

ಎಮ್ಕಿ ಗ್ಲೋಬಲ್‌, ಎಲ್‌ಐಸಿಯನ್ನು "ನೃತ್ಯ ಮಾಡದ ಆನೆ" ಎಂದು ಕರೆದಿದೆ, ಅದರ ಬೆಳವಣಿಗೆಗೆ ತಕ್ಕಂತೆ ಬೆಲೆ ಇದೆ ಎಂದು ಹೇಳಿದೆ. ಎಲ್‌ಐಸಿ ಕಂಪನಿಯ ಗಾತ್ರ, ಉದ್ಯಮದಲ್ಲಿನ ಪ್ರಾಬಲ್ಯ ಮತ್ತು ಅದರ ಪರಂಪರೆಯೇ ಷೇರಿನ ಬೆಲೆ ಏರಿಕೆಗೆ ಅಡಚಣೆಗಳಾಗಿ ಮುಂದುವರಿಯುತ್ತವೆ ಎಂದು ಹೇಳಿದೆ. ಹೆಚ್ಚಿನ ವಿಶ್ಲೇಷಕರು ಷೇರಿನ ಬೆಲೆ ತಟಸ್ಥವಾಗಿರಲಿದೆ ಎಂದು ಹೇಳಿದ್ದು, ಹೆಚ್ಚು ಏರಿಕೆ ಕಾಣುವುದಿಲ್ಲ ಎಂಬ ಭವಿಷ್ಯ ನುಡಿದಿದ್ದಾರೆ.

"13 ಲಕ್ಷ ಏಜೆಂಟ್‌ಗಳ ನೆಟ್‌ವರ್ಕ್ ಎಲ್‌ಐಸಿಯ ಅತಿದೊಡ್ಡ ಶಕ್ತಿಯಾಗಿದೆ. ಖಾಸಗಿ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಇದು ಭೌತಿಕವಾಗಿ ಹೆಚ್ಚಿನ ಉತ್ಪಾದಕತೆಯನ್ನು ಹೊಂದಿದೆ. ಆದರೂ, ಬೃಹತ್‌ ಗಾತ್ರದ ಶಾಖೆಯ ನೆಟ್‌ವರ್ಕ್ ವೆಚ್ಚ ಹೆಚ್ಚಾಗಲೂ ಕೂಡ ಕಾರಣವಾಗಿದೆ," ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.

Recommended Video

BJP ನಾಯಕರು ಕೊಟ್ಟ ಹೇಳಿಕೆಗೆ ಈಗ ದೇಶಕ್ಕೆ ಕೆಟ್ಟ ಹೆಸರು | Oneindia Kannada

English summary
With the fall in share prices, the market capitalization of the company also fell below Rs 5 lakh crore to Rs 4.98 lakh crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X