ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಐಸಿ: 1 ಲಕ್ಷ ರೂ. ಹೂಡಿಕೆ ಮಾಡಿ ಪಿಂಚಣಿ ಪಡೆಯಿರಿ!

|
Google Oneindia Kannada News

ನವದೆಹಲಿ, ಫೆಬ್ರವರಿ 03: ವಿಮೆ ಮಾಡಿಸಲು, ಹೂಡಿಕೆ ಮಾಡಲು ಎಲ್‌ಐಸಿಯು ಜನರ ಮೊದಲ ಆಯ್ಕೆಯಾಗಿದೆ. ಜೊತೆಗೆ ಅವಧಿಯ ಮುಕ್ತಾಯದ ಜೊತೆಗೆ ಉತ್ತಮ ಆದಾಯವು ಸಿಗುತ್ತದೆ, ಹೀಗಾಗಿ ದೇಶದ ಹೆಚ್ಚಿನ ಕುಟುಂಬಗಳು ಎಲ್‌ಐಸಿಯಲ್ಲಿಯೇ ಜೀವ ವಿಮಾ ಪಾಲಿಸಿ ತೆಗೆದುಕೊಳ್ಳುತ್ತಾರೆ.

ಈ ಸಮಯದಲ್ಲಿ ನೀವು ನಿವೃತ್ತಿಗಾಗಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಖಂಡಿತವಾಗಿಯೂ ಈ ಸುದ್ದಿಯನ್ನು ಓಮ್ಮೆ ಓದಬೇಕು. ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದು, ಆದರೆ ಎಲ್ಲಿ ಹೂಡಿಕೆ ಮಾಡಬೇಕೆಂಬ ಗೊಂದಲವಿದ್ದರೆ ಅಸಮಾಧಾನಗೊಳ್ಳಬೇಡಿ. ನೀವು ಎಲ್ಐಸಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ನೀವು ಹೂಡಿಕೆ ಮಾಡುವ ಮೂಲಕ ಉತ್ತಮ ಲಾಭ ಗಳಿಸಬಹುದು. ಎಲ್ಐಸಿ ಹಲವಾರು ಪಾಲಿಸಿಗಳನ್ನು ಪರಿಚಯಿಸಿದೆ, ಇದರಲ್ಲಿ ನೀವು ಹೂಡಿಕೆ ಮಾಡಿದ ನಂತರ ಖಾತರಿಯ ಆದಾಯವನ್ನು ಪಡೆಯುತ್ತೀರಿ.

ಜೀವತಾವಧಿ ಪಿಂಚಣಿ ಪಡೆಯಲು ಒಮ್ಮೆ ಹೂಡಿಕೆ ಮಾಡಿ

ಜೀವತಾವಧಿ ಪಿಂಚಣಿ ಪಡೆಯಲು ಒಮ್ಮೆ ಹೂಡಿಕೆ ಮಾಡಿ

ಪ್ರಸ್ತುತ ಪರಿಸ್ಥಿತಿಗಳನ್ನು ನೋಡಿದರೆ, ಭವಿಷ್ಯದ ಕಾಳಜಿ ಎಲ್ಲರಿಗೂ ಉಳಿದಿದೆ. ಸರ್ಕಾರಿ ನೌಕರರಿಗಾದ್ರೆ ಸರ್ಕಾರದಿಂದ ಪಿಂಚಣಿ ಲಾಭ ಪಡೆಯುತ್ತಾರೆ ಆದರೆ ಖಾಸಗಿ ನೌಕರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂದಿನ ಯುಗದಲ್ಲಿ ಪ್ರತಿಯೊಬ್ಬ ಉದ್ಯೋಗ ವ್ಯಕ್ತಿಯು ನಿವೃತ್ತಿಯ ನಂತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಪಿಂಚಣಿ ಯೋಜನೆಯನ್ನು ತೆಗೆದುಕೊಳ್ಳಲು ಯೋಜಿಸುತ್ತಿರುವುದು ಇದೇ ಕಾರಣಕ್ಕಾಗಿ.

ಎಲ್‌ಐಸಿ ಐಪಿಒ ಆರಂಭಕ್ಕೆ ವಿರೋಧ: ನೌಕರರ ಪ್ರತಿಭಟನೆಎಲ್‌ಐಸಿ ಐಪಿಒ ಆರಂಭಕ್ಕೆ ವಿರೋಧ: ನೌಕರರ ಪ್ರತಿಭಟನೆ

ನೀವೂ ಕೂಡ ಪಿಂಚಣಿ ಪಡೆಯಲು ಯೋಚಿಸುತ್ತಿದ್ದರೆ, ಅಂತಹ ಎಲ್‌ಐಸಿಯ ಯೋಜನೆಯ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಎಲ್ಐಸಿ ಜೀವನ್ ಅಕ್ಷಯ್ ಪಾಲಿಸಿಯಡಿಯಲ್ಲಿ, ಪಾಲಿಸಿದಾರರಿಗೆ ಒಂದು ಬಾರಿ ಮಾತ್ರ ಕಂತು ಪಾವತಿಸಿದ ನಂತರ ಜೀವಮಾನದ ಪಿಂಚಣಿ ಪಡೆಯಲು ಅವಕಾಶ ಸಿಗುತ್ತದೆ. ಹೌದು, ಒಮ್ಮೆ ನೀವು ಈ ಪಾಲಿಸಿಯಲ್ಲಿ ಕನಿಷ್ಠ 1 ಲಕ್ಷ ರೂ. ಠೇವಣಿ ಇಟ್ಟರೆ, ನಿಮ್ಮ ಜೀವನದುದ್ದಕ್ಕೂ ಪಿಂಚಣಿ ಪಡೆಯಬಹುದು.

ಪ್ರತಿ ತಿಂಗಳು ಒಂದು ಬಾರಿ ಹೂಡಿಕೆ

ಪ್ರತಿ ತಿಂಗಳು ಒಂದು ಬಾರಿ ಹೂಡಿಕೆ

ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಭಾರತದ ಅತಿದೊಡ್ಡ ಮತ್ತು ಸರ್ಕಾರಿ ವಿಮಾ ಕಂಪನಿಯಾಗಿದೆ. ಗ್ರಾಹಕರಿಗೆ, ಎಲ್ಐಸಿ ಜೀವನ್ ಅಕ್ಷಯ್ ಯೋಜನೆಯನ್ನು ತಂದಿದೆ, ಇದರಲ್ಲಿ ನೀವು ಅಥವಾ ಕುಟುಂಬದ ಸದಸ್ಯರಿಗಾಗಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಲು ಬಯಸಿದರೆ, ನೀವು ವಾರ್ಷಿಕವಾಗಿ, ಅರ್ಧ ವಾರ್ಷಿಕ, ತ್ರೈಮಾಸಿಕ ಅಥವಾ ಪ್ರತಿ ತಿಂಗಳು ಪಿಂಚಣಿ ತೆಗೆದುಕೊಳ್ಳಬಹುದು.

ಕನಿಷ್ಠ 1 ಲಕ್ಷ ರೂಪಾಯಿ ಹೂಡಿಕೆ, ಗರಿಷ್ಠ ಮಿತಿಯಿಲ್ಲ

ಕನಿಷ್ಠ 1 ಲಕ್ಷ ರೂಪಾಯಿ ಹೂಡಿಕೆ, ಗರಿಷ್ಠ ಮಿತಿಯಿಲ್ಲ

ಕನಿಷ್ಠ 1,00,000 ರೂ.ಗಳನ್ನು ಹೂಡಿಕೆ ಮಾಡುವ ಮೂಲಕ ಪಾಲಿಸಿಯನ್ನು ಪ್ರಾರಂಭಿಸಬಹುದು. ಈ ನೀತಿಯಲ್ಲಿ ಗರಿಷ್ಠ ಹೂಡಿಕೆ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಈ ಪಾಲಿಸಿಯಲ್ಲಿ ಒಬ್ಬ ವ್ಯಕ್ತಿಯು ಕನಿಷ್ಠ ಒಂದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಅವರಿಗೆ ವಾರ್ಷಿಕವಾಗಿ 12,000 ರೂ.ಗಳ ಪಿಂಚಣಿ ಸಿಗುತ್ತದೆ. ಅಂದರೆ ಪ್ರತಿ ವರ್ಷವೂ ಕೂಡ ತಮ್ಮ ಒಂದು ಬಾರಿಯ 1 ಲಕ್ಷ ರೂಪಾಯಿಗಳ ಹೂಡಿಕೆಯ ಮೇಲೆ 12,000 ರೂಪಾಯಿಗಳನ್ನು ಪಿಂಚಣಿಯಾಗಿ ಸ್ವೀಕರಿಸಲಾಗುತ್ತದೆ. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ

ಲ್ಯಾಪ್ಸ್‌ ಆದ LIC ಪಾಲಿಸಿಯನ್ನು ಪುನರಾರಂಭಿಸುವುದು ಹೇಗೆ?ಲ್ಯಾಪ್ಸ್‌ ಆದ LIC ಪಾಲಿಸಿಯನ್ನು ಪುನರಾರಂಭಿಸುವುದು ಹೇಗೆ?

ಎಲ್ಐಸಿಯ ಐಪಿಒ ಅಕ್ಟೋಬರ್ ನಂತರ ಬರಬಹುದು

ಎಲ್ಐಸಿಯ ಐಪಿಒ ಅಕ್ಟೋಬರ್ ನಂತರ ಬರಬಹುದು

ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್‌ಐಸಿಯ ಐಪಿಒ ತರಲಿದೆ. ಇದರೊಂದಿಗೆ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಸಿಐ) ಮತ್ತು ಐಡಿಬಿಐ ಬ್ಯಾಂಕ್ ಜೊತೆಗೆ ಇತರ 2 ಪಿಎಸ್‌ಯು ಬ್ಯಾಂಕುಗಳಲ್ಲಿನ ತನ್ನ ಪಾಲನ್ನು ಮಾರಾಟ ಮಾಡಲು ಸರ್ಕಾರ ಯೋಜಿಸಿದೆ. ಎಲ್‌ಐಸಿಯ ಐಪಿಒ 2021 ರ ಅಕ್ಟೋಬರ್ ನಂತರ ಬರಲಿದೆ ಎಂದು ಡಿಐಪಿಎಂ ಕಾರ್ಯದರ್ಶಿ ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಬಿಪಿಸಿಎಲ್ ಮತ್ತು ಏರ್ ಇಂಡಿಯಾದಲ್ಲಿ ಷೇರುಗಳ ಮಾರಾಟ ಪ್ರಕ್ರಿಯೆಯು ಮುಂದಿನ ಹಣಕಾಸು ವರ್ಷದ ಮೊದಲಾರ್ಧದ (ಸೆಪ್ಟೆಂಬರ್)ಮೊದಲು ಪೂರ್ಣಗೊಳ್ಳುತ್ತದೆ.

English summary
LIC has introduced various schemes for customers. You can get a lifetime pension by investing in the policy once.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X