ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LICಯಿಂದ ಡಿಜಿಟಲ್ ಆ್ಯಪ್ 'ಆನಂದ' ಬಿಡುಗಡೆ

|
Google Oneindia Kannada News

ನವದೆಹಲಿ, ನವೆಂಬರ್ 25: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಇದೇ ಮೊದಲ ಬಾರಿಗೆ 'ಆನಂದ' ಹೆಸರಿನ ಮೊದಲ ಡಿಜಿಟಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಜೀವ ವಿಮಾ ಪಾಲಿಸಿಯನ್ನು ಪಡೆಯಲು ಆನ್‌ಬೋರ್ಡಿಂಗ್ ಏಜೆಂಟರಿಗಾಗಿ ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.

ಎಲ್‌ಐಸಿ ಅಧ್ಯಕ್ಷ ಎಂ.ಆರ್‌. ಕುಮಾರ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಈ ಆ್ಪ್ ಅನ್ನು ಬಿಡುಗಡೆಗೊಳಿಸಿದರು. ವ್ಯವಸ್ಥಾಪಕ ನಿರ್ದೇಶಕರಾದ ಟಿ.ಸಿ ಸುಶೀಲ್‌ ಕುಮಾರ್‌, ಮುಕೇಶ್‌ ಕುಮಾರ್‌ ಗುಪ್ತಾ, ರಾಜ್‌ ಕುಮಾರ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

SBI, LIC, ಬರೋಡಾ ಬ್ಯಾಂಕ್ ಮೇಲೆ ದಂಡ ವಿಧಿಸಿದ ಸೆಬಿSBI, LIC, ಬರೋಡಾ ಬ್ಯಾಂಕ್ ಮೇಲೆ ದಂಡ ವಿಧಿಸಿದ ಸೆಬಿ

"ಏಜೆಂಟ್ ಅಥವಾ ಮಧ್ಯವರ್ತಿಯ ಸಹಾಯದಿಂದ ಕಾಗದರಹಿತ ಮಾಡ್ಯೂಲ್ ಮೂಲಕ ಜೀವ ವಿಮಾ ಪಾಲಿಸಿಯನ್ನು ಪಡೆಯಲು ಆನ್‌ಬೋರ್ಡಿಂಗ್ ಪ್ರಕ್ರಿಯೆಗೆ ಡಿಜಿಟಲ್ ಅಪ್ಲಿಕೇಶನ್ ಒಂದು ಸಾಧನವಾಗಿದೆ" ಎಂದು ಎಲ್ಐಸಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಜೀವ ವಿಮಾ ಉದ್ದಿಮೆಯಲ್ಲಿ ಇಂತಹ ಒಂದು ವ್ಯವಸ್ಥೆ ಇದೇ ಮೊದಲು ಎಂದಿದೆ.

LIC Launches Digital App ANANDA For Agents

ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್‌ಐಸಿ ಐಪಿಒ ತರುವ ಪ್ರಕ್ರಿಯೆ ಕೂಡ ಚುರುಕುಗೊಂಡಿದೆ. ಭಾರತದ ಬಹುನಿರೀಕ್ಷಿತ ಬ್ಲಾಕ್‌ಬಸ್ಟರ್ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಈ ಬಾರಿ ನಿರೀಕ್ಷೆಗಿಂತ ದೊಡ್ಡದಾಗಿದೆ. ಸರ್ಕಾರಿ ವಿಮೆದಾರರಲ್ಲಿ 25 ಪ್ರತಿಶತದಷ್ಟು ಪಾಲನ್ನು ಮಾರಾಟ ಮಾಡುವ ಪ್ರಸ್ತಾಪವಿದೆ.

English summary
Life Insurance Corporation of India has launched a digital application for agents for onboarding to get a life insurance policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X