ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.1ರಿಂದ ಎಲ್ಐಸಿಯ ಜನಪ್ರಿಯ ವಿಮೆ ಯೋಜನೆ ಸ್ಥಗಿತ

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 30: ಭಾರತೀಯ ಜೀವ ವಿಮಾ ನಿಗಮ(ಎಲ್ ಐಸಿ) ದ ಜನಪ್ರಿಯ ಯೋಜನೆ ಜೀವನ್ ಅಕ್ಷಯ್ VI ಪಾಲಿಸಿ ಡಿಸೆಂಬರ್ 01ರಿಂದ ಸ್ಥಗಿತಗೊಳ್ಳಲಿದ್ದು, ಹೊಸ ರೂಪದೊಂದಿಗೆ, ಕಡಿಮೆ ದರದಲ್ಲಿ ಈ ಪಾಲಿಸಿಯನ್ನು ಮರು ಮತ್ತೆ ಪ್ರಾರಂಭಿಸಲು ಚಿಂತಿಸಲಾಗಿದೆ.

ಬಡ್ಡಿದರ ಕುಸಿತ, ಸುಸ್ಥಿರ ರಿಟರ್ನ್ಸ್ ಸಲ್ಲಿಕೆ ಕಾರಣದಿಂದ ಜೀವನ್ ಅಕ್ಷಯ್ ಮಾರಾಟ ನಿಲ್ಲಿಸಲಾಗಿದೆ. ಜೀವನ್ ಅಕ್ಷಯ್ ಗೆ ವಾರ್ಷಿಕ ಶೇ. 7.5 ರಷ್ಟು ಬಡ್ಡಿ ನೀಡಲಾಗುತ್ತಿದ. ಈ ಪಾಲಿಸಿಯಿಂದಲೇ ಎಲ್.ಐ.ಸಿ.ಗೆ ಪ್ರಸಕ್ತ ಸಾಲಿನಲ್ಲಿ ಸುಮಾರು 10,000 ಕೋಟಿ ರೂ. ಬಂದಿದೆ.

LIC Jeevan Akshay VI closes on December 1

ಬ್ಯಾಂಕಿನ ನಿಶ್ಚಿತ ಠೇವಣಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಅಂಚೆ ಕಚೇರಿಯ ತಿಂಗಳ ಅದಾಯ ಯೋಜನೆ ಅಥವಾ ಪ್ರಧಾನ್ ಮಂತ್ರಿ ವಯ ವಂದನ ಯೋಜನೆ(PMVVY) ನಿವೃತ್ತಿ ಯೋಜನೆಗೆ ಹೋಲಿಸಿದ ಜೀವನ್ ಅಕ್ಷಯ್ ಯೋಜನೆಯಲ್ಲಿ ನಿಶ್ಚಿತ ಅವಧಿ ಎಂದು ಇರುವುದಿಲ್ಲ. ಜೀವತಾವಧಿ ತನಕ ನಿರೀಕ್ಷಿತ ರಿಟರ್ನ್ಸ್ ಬಯಸುವವರು ಹೂಡಿಕೆ ಮಾಡಬಹುದು.

LIC Jeevan Akshay VI closes on December 1

ಎಲ್.ಐ.ಸಿ ಈ ಯೋಜನೆಯಿಂದ ಕಳೆದ 2 ವರ್ಷಗಳಲ್ಲಿ 22,000 ಕೋಟಿ ರೂ. ಸಂಗ್ರಹಿಸಿದೆ. ಡಿಸೆಂಬರ್ 1 ರಿಂದ ಶೇ. 7.5 ಬಡ್ಡಿ ದರದ ಜೀವನ್ ಅಕ್ಷಯ್ ಯೋಜನೆ ಸ್ಥಗಿತಗೊಳಿಸಲಿದ್ದು, ಮುಂದೆ ಹೊಸ ಬಡ್ಡಿದರ ಯೋಜನೆಯೊಂದಿಗೆ ಮರು ಪ್ರಾರಂಭಿಸಲಾಗುವುದು ಎಂದು ಎಲ್ ಐಸಿ ಪ್ರಕಟಿಸಿದೆ.

English summary
Reportedly, the Life Insurance Corporation of India (LIC) will stop selling one of its most popular annuity products, Jeevan Akshay VI, from December 1, 2017, and is expected to introduce a new version of the plan with revised rates soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X