ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಐಸಿ ಐಪಿಒ: ಶೇಕಡಾ 25ರಷ್ಟು ಪಾಲು ಮಾರಾಟಕ್ಕೆ ಸಿದ್ಧತೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 08: ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್‌ಐಸಿ ಐಪಿಒ ತರುವ ಪ್ರಕ್ರಿಯೆ ಮತ್ತಷ್ಟು ಚುರುಕುಗೊಂಡಿದೆ. ಭಾರತದ ಬಹುನಿರೀಕ್ಷಿತ ಬ್ಲಾಕ್‌ಬಸ್ಟರ್ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಈ ಬಾರಿ ನಿರೀಕ್ಷೆಗಿಂತ ದೊಡ್ಡದಾಗಿದೆ.

ಸರ್ಕಾರಿ ವಿಮೆದಾರರಲ್ಲಿ 25 ಪ್ರತಿಶತದಷ್ಟು ಪಾಲನ್ನು ಮಾರಾಟ ಮಾಡುವ ಪ್ರಸ್ತಾಪವಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹೂಡಿಕೆ ಮಾಡುವ ಮೂಲಕ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹಿಸುವ ಗುರಿ ಹೊಂದಿದೆ.

ಎಲ್‌ಐಸಿಗೆ 65ನೇ ಹುಟ್ಟುಹಬ್ಬದ ಸಂಭ್ರಮ: ಕೊರೊನಾ ನಡುವೆಯೂ ದಾಖಲೆಯ ಪ್ರಗತಿಎಲ್‌ಐಸಿಗೆ 65ನೇ ಹುಟ್ಟುಹಬ್ಬದ ಸಂಭ್ರಮ: ಕೊರೊನಾ ನಡುವೆಯೂ ದಾಖಲೆಯ ಪ್ರಗತಿ

ಈ ಮೊದಲು ಎಲ್‌ಐಸಿಯಲ್ಲಿ ಶೇಕಡಾ 100ರಷ್ಟು ಪಾಲನ್ನು ಹೊಂದಿರುವ ಸರ್ಕಾರುವ ಶೇಕಡಾ 10ರಷ್ಟನ್ನು ಮಾತ್ರ ಮಾರುತ್ತದೆ ಎನ್ನಲಾಗಿತ್ತು. ಆದರೆ ಇದನ್ನು ಶೇಕಡಾ 25 ರಷ್ಟಕ್ಕೆ ತೆಗೆದುಕೊಂಡು ಹೋಗಿದೆ.

LIC IPO: Govt May Sell Up To 25 Percent Stake

ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಹಣಕಾಸು ಸೇವಾ ಇಲಾಖೆ ಎಲ್ ಐಸಿಯಲ್ಲಿನ ಷೇರು ಮಾರಾಟಕ್ಕೆ ಸಂಪುಟ ತಿರ್ಮಾನದ ಕರಡು ಸಿದ್ಧಪಡಿಸಿದೆ. ಅದನ್ನು ಸೆಬಿ, ಐಆರ್ ಡಿಎ ಹಾಗೂ ನೀತಿ ಆಯೋಗಕ್ಕೂ ಸಲ್ಲಿಸಲಾಗುತ್ತದೆ.

ಈಗಾಗಲೇ ಜಿಎಸ್‌ಟಿ ಸೇರಿದಂತೆ ಸರ್ಕಾರದ ಅನೇಕ ಆದಾಯ ಮೂಲಗಳ ಸಂಗ್ರಹ ಕಡಿಮೆಯಾಗಿದೆ. ಹೀಗಾಗಿ ಈ ಹಿಂದೆ ಶೇ.10 ರಷ್ಟು ಪಾಲನ್ನು ಮಾರಾಟ ಮಾಡಬೇಕೆಂದುಕೊಂಡಿದ್ದ ಕೇಂದ್ರವು ಶೇಕಡಾ 25ರಷ್ಟು ಪಾಲನ್ನು ಮಾರಾಟಕ್ಕೆ ಮುಂದಾಗಿದೆ.

English summary
Indian Govt planning to sell up to 25 Percent stake in the state-run insurer LIC
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X