ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಐಸಿ ಐಪಿಒ: ಮೊದಲ ದಿನವೇ ಷೇರು ಕೊಳ್ಳಲು ಪೈಪೋಟಿ

|
Google Oneindia Kannada News

ಬೆಂಗಳೂರು, ಏ 4: ಭಾರತೀಯ ಷೇರುಪೇಟೆ ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ ಆಗಿರುವ ಎಲ್‌ಐಸಿಯ ಶೇ. 3.5ರಷ್ಟು ಪಾಲು ಮಾರಾಟ ಇಂದು ಭರ್ಜರಿಯಾಗಿ ಆರಂಭಗೊಂಡಿದೆ. ಮೇ 9ರವರೆಗೆ ಮಾರಾಟ ನಡೆಯುತ್ತಿದ್ದರೂ ಮೊದಲ ದಿನವಾದ ಇಂದು ಮಧ್ಯಾಹ್ನ 4ರಷ್ಟರಲ್ಲಿ ಶೇ. 60ರಷ್ಟು ಈಕ್ವಿಟಿ ಶೇರುಗಳು ಮಾರಾಟವಾಗಿರುವುದು ತಿಳಿದುಬಂದಿದೆ.

ಇದೇ ಟ್ರೆಂಡ್ ಮುಂದುವರಿದಲ್ಲಿ ಗುರುವಾರವೇ ಮಾರಾಟ ಅಂತ್ಯಗೊಳ್ಳುವ ನಿರೀಕ್ಷೆ ಇದೆ. ಹೂಡಿಕೆದಾರರಿಗೆ ಎಲ್‌ಐಸಿ ಆಕರ್ಷಕ ವ್ಯವಹಾರವಾಗಿ ಕಂಡುಬಂದಿದೆ. ಎಲ್‌ಐಸಿಯನ್ನು ಹಂತಹಂತವಾಗಿ ಖಾಸಗಿಗೊಳಿಸಿ ಬಂಡವಾಳ ಹೆಚ್ಚಿಸುವುದು ಸದ್ಯ ಅದರ ಐಪಿಒ ಪ್ಲಾನ್ ಆಗಿದೆ.

ಏಪ್ರಿಲ್‌ನಲ್ಲಿ ರಫ್ತು ಶೇ.24 ಏರಿಕೆ, 38.19 ಬಿಲಿಯನ್ ಡಾಲರ್‌ಗೆ ಹೆಚ್ಚಳಏಪ್ರಿಲ್‌ನಲ್ಲಿ ರಫ್ತು ಶೇ.24 ಏರಿಕೆ, 38.19 ಬಿಲಿಯನ್ ಡಾಲರ್‌ಗೆ ಹೆಚ್ಚಳ

ಶೇ. 3.5ರಷ್ಟು ಪಾಲುದಾರಿಕೆಯನ್ನು ಖಾಸಗಿಗೆ ಕೊಡಲು ನಿರ್ಧರಿಸಲಾಗಿದೆ. ಅದಕ್ಕಾಗಿ 902-949 ರೂ ಮೌಲ್ಯದ ಒಂದು ಈಕ್ವಿಟಿ ಷೇರಿನಂತೆ ಒಟ್ಟು 22.13 ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟಕ್ಕಿಡಲಾಗಿದೆ. ಎಲ್ಲವೂ ಸೇಲ್ ಆದಲ್ಲಿ ಎಲ್‌ಐಸಿಗೆ ಸುಮಾರು 21 ಸಾವಿರ ಕೋಟಿ ರೂ ಬಂಡವಾಳ ಹರಿದುಬರಲಿದೆ.

ಐಪಿಒ ಅಂದರೆ ಇನಿಷಿಯಲ್ ಪಬ್ಲಿಕ್ ಆಫರಿಂಗ್ (IPO- Initial Public Offering). ಅಂದರೆ ಆರಂಭಿಕ ಷೇರು ಮಾರಾಟ ಎಂದು ಕರೆಯಬಹುದು. ಯಾವುದೇ ಕಂಪನಿಯು ಸಾರ್ವಜನಿಕವಾಗಿ ಬಂಡವಾಳ ಸಂಗ್ರಹಿಸಲು ಐಪಿಒ ಮಾರ್ಗ ಹಿಡಿಯುತ್ತವೆ. ನಂತರ ಈ ಕಂಪನಿಯು ಷೇರುಪೇಟೆಯಲ್ಲಿ ಲಿಸ್ಟ್ ಆಗುತ್ತದೆ.

200 ರೂ ಅಗ್ಗವಾಯ್ತು ಬಂಗಾರ: ಮೇ 4ರಂದು ನಿಮ್ಮ ನಗರದಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ದರ?200 ರೂ ಅಗ್ಗವಾಯ್ತು ಬಂಗಾರ: ಮೇ 4ರಂದು ನಿಮ್ಮ ನಗರದಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ದರ?

ಪೇಟಿಎಂನ ಐಪಿಒ

ಪೇಟಿಎಂನ ಐಪಿಒ

ಪೇಟಿಎಂ ಸಂಸ್ಥೆ ಕೆಲ ತಿಂಗಳ ಹಿಂದೆ ಐಪಿಒಗೆ ತೆರೆದುಕೊಂಡಿತ್ತು. ಅಗ ಅದು ನಿಗದಿಪಡಿಸಿದ ಈಕ್ವಿಟಿ ಷೇರು ಮೌಲ್ಯ 2 ಸಾವಿರ ರೂಗಿಂತ ಹೆಚ್ಚು ಇತ್ತು. ಎನ್‌ಎಸ್‌ಇ, ಬಿಎಸ್‌ಇ ಸೂಚ್ಯಂಕದಲ್ಲಿ ಲಿಸ್ಟ್ ಆಗಿರುವ ಪೇಟಿಎಂನ ಷೇರು ಮೌಲ್ಯ ಈಗ 500-600 ರೂ ಆಸುಪಾಸಿನಲ್ಲಿವೆ. ಪೇಟಿಎಂ ನಂಬಿಕೊಂಡು ಬಂಡವಾಳ ಹಾಕಿದವರಿಗೆ ಸುಮಾರು ಒಂದು ಲಕ್ಷ ಕೋಟಿ ರೂ ನಷ್ಟವಾದ ಅಂದಾಜಿದೆ. ಎಲ್‌ಐಸಿಯ ಐಪಿಒ 18,300 ಕೋಟಿ ರೂ ಇದ್ದರೆ, ಕೋಲ್ ಇಂಡಿಯಾ ಸಂಸ್ಥೆ 2010ರಲ್ಲಿ ಇಷ್ಟೇ ಮೊತ್ತದ ಐಪಿಒ ಬಿಡುಗಡೆ ಮಾಡಿತ್ತು.

ನಂಬಿಕೆ ಉಳಿಸಿಕೊಳ್ಳುತ್ತಾ ಎಲ್‌ಐಸಿ?

ನಂಬಿಕೆ ಉಳಿಸಿಕೊಳ್ಳುತ್ತಾ ಎಲ್‌ಐಸಿ?

ಪೇಟಿಎಂ ಸಂಸ್ಥೆ ಐಪಿಒ ಮೂಲಕ 18 ಸಾವಿರ ಕೋಟಿ ರೂ. ಗೂ ಹೆಚ್ಚು ಬಂಡವಾಳ ಸಂಗ್ರಹಿಸಿತ್ತು. ಈಗ ಎಲ್‌ಐಸಿ ಅದಕ್ಕೂ ಹೆಚ್ಚು ಬಂಡವಾಳ ಪಡೆಯುವ ನಿರೀಕ್ಷೆ ಇದೆ. ಜೀವ ವಿಮೆ ಕ್ಷೇತ್ರದಲ್ಲಿ ಎಲ್‌ಐಸಿ ಅತ್ಯಂತ ಹಳೆಯ ಹಾಗೂ ಭದ್ರ ತಳಪಾಯ ಇರುವ ಸಂಸ್ಥೆಯಾಗಿದೆ. 1956ರಲ್ಲಿ ಆರಂಭಗೊಂಡ ಎಲ್‌ಐಸಿಗೆ 30 ಕೋಟಿಗೂ ಹೆಚ್ಚು ಗ್ರಾಹಕ ಶಕ್ತಿ ಇದೆ. ನಮ್ಮ ದೇಶದ ವಿಮಾ ಮಾರುಕಟ್ಟೆಯಲ್ಲಿ ಎಲ್‌ಐಸಿ ಶೇ. 60ಕ್ಕಿಂತ ಹೆಚ್ಚು ಪಾಲು ಹೊಂದಿದೆ. ವೈಯಕ್ತಿಕ ವಿಮೆ ಪಾಲಿಸಿ ಮತ್ತು ಗ್ರೂಪ್ ಪಾಲಿಸಿಗಳಲ್ಲಿ ಜನರು ಈಗಲೂ ಎಲ್‌ಐಸಿಗೇ ಹೆಚ್ಚು ಒಲವು ತೋರುತ್ತಾರೆ. ಆದರೆ, ಈಗ ಬಜಾಜ್ ಅಲಯನ್ಸ್ ಲೈಫ್, ಮ್ಯಾಕ್ಸ್ ಲೈಫ್, ಎಸ್‌ಬಿಐ ಲೈಫ್, ಹೆಚ್‌ಡಿಎಫ್‌ಸಿ ಲೈಫ್, ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇತ್ಯಾದಿ ದೇಶೀಯ ಮತ್ತು ಬಹುದೇಶೀಯ ವಿಮಾ ಕಂಪನಿಗಳು ಎಲ್‌ಐಸಿಗೆ ತೀವ್ರ ಪೈಪೋಟಿ ನೀಡಲು ಕಸರತ್ತು ನಡೆಸುತ್ತಿವೆ. ಅದರೂ ಎಲ್‌ಐಸಿಯ ಪಾರಮ್ಯ ಮುರಿಯಲು ಸಾಧ್ಯವಾಗಿಲ್ಲ.

ಪಾಲಿಸಿದಾರರಿಗೂ ಡಿಸ್ಕೌಂಟ್

ಪಾಲಿಸಿದಾರರಿಗೂ ಡಿಸ್ಕೌಂಟ್

ಎಲ್‌ಐಸಿಯ ಐಪಿಒನಲ್ಲಿ ಸಂಸ್ಥೆಯ ಉದ್ಯೋಗಿಗಳು, ಏಜೆಂಟ್‌ಗಳು, ಪಾಲಿಸಿದಾರರು, ರೀಟೇಲ್ ಹೂಡಿಕೆದಾರರು, ಸಾಂಸ್ಥಿಕ ಹೂಡಿಕೆದಾರರಿಗೆ ಷೇರುಗಳನ್ನು ಮೀಸಲಿರಿಸಿದೆ. ಪಾಲಿಸಿದಾರರಿಗೆ ಪ್ರತೀ ಈಕ್ವಿಟಿ ಷೇರಿಗೆ 60 ರೂ ಡಿಸ್ಕೌಂಟ್ ಕೊಡಲಾಗಿದೆ. ಅರ್ಹ ಉದ್ಯೋಗಿಗಳು ಮತ್ತು ರೀಟೇಲ್ ಹೂಡಿಕೆದಾರರಿಗೆ ೪೫ ರೂ ರಿಯಾಯಿತಿ ಕೊಡಲಾಗಿದೆ.

ಐಪಿಒಗೆ ತೆರೆದುಕೊಳ್ಳುವ ಮುನ್ನ ಎಲ್‌ಐಸಿ ಸಂಸ್ಥೆಯು ಆಂಕರ್ ಇನ್ವೆಸ್ಟರ್ಸ್‌ಗಳಿಂದ 5,626 ಕೋಟಿ ರೂಗೂ ಹೆಚ್ಚು ಬಂಡವಾಳ ಕಲೆಹಾಕಿತ್ತು. ಆಂಕರ್ ಇನ್ವೆಸ್ಟರ್ಸ್ ಎಂದರೆ ಸಾಂಸ್ಥಿಕ ಹೂಡಿಕೆದಾರರಾಗಿದ್ದಾರೆ. ಇವರು 949 ರೂನಂತೆ ಈಕ್ವಿಟಿ ಷೇರುಗಳನ್ನ ಖರೀದಿ ಮಾಡಿದ್ದಾರೆ. 5.93 ಕೋಟಿ ಈಕ್ವಿಟಿ ಷೇರುಗಳನ್ನ ಆಂಕರ್ ಹೂಡಿಕೆದಾರರಿಗೆ ಮೀಸಲಿರಿಸಲಾಗಿದೆ.

ಶೇ. 96ರಷ್ಟು ಖರೀದಿಯಾಗಿದೆ

ಶೇ. 96ರಷ್ಟು ಖರೀದಿಯಾಗಿದೆ

ಎಲ್‌ಐಸಿ ಪಾಲಿಸಿದಾರರು ತಮ್ಮ ಕೋಟಾಗಿಂತ ಹೆಚ್ಚು ಷೇರುಗಳನ್ನು ಖರೀದಿ ಮಾಡಿರುವುದು ತಿಳಿದುಬಂದಿದೆ. ಹಾಗೆಯೇ ಉದ್ಯೋಗಿಗಳಿಗೆ ಮೀಸಲಿಸಿರುವ ಷೇರು ಪೈಕಿ ಶೇ. 96 ಖರೀದಿಯಾಗಿದೆ. ರೀಟೇಲ್ ಹೂಡಿಕೆದಾರರು ಶೇ. 53ರಷ್ಟು ಷೇರು ಖರೀದಿ ಮಾಡಿದ್ದಾರೆ. ಸಾಂಸ್ಥಿಕ ಅಥವಾ ಆಂಕರ್ ಹೂಡಿಕೆದಾರರು ಶೇ. 22ರಷ್ಟು ಷೇರುಗಳನ್ನ ಪಡೆದಿದ್ದಾರೆ. ಸಾಂಸ್ಥಿಕವಲ್ಲದ ಹೂಡಿಕೆದಾರರು ತಮ್ಮ ಪಾಲಿನ ಷೇರುಗಳ ಪೈಕಿ ಶೇ. 22 ಖರೀದಿ ಮಾಡಿದ್ದಾರೆ. ಇದು ಬುಧವಾರ ಸಂಜೆ 4ರವರೆಗೆ ಬಂದಿರುವ ಮಾಹಿತಿ.

ಇದೀಗ ಐಪಿಒ ಪ್ರಕ್ರಿಯೆ ಮುಗಿದ ಬಳಿಕ ಮೇ 17ರಂದು ಎಲ್‌ಐಸಿಯು ಷೇರುಪೇಟೆಯಲ್ಲಿ ಲಿಸ್ಟ್ ಆಗುವ ನಿರೀಕ್ಷೆ ಇದೆ. ಅದಾದ ಬಳಿಕ ಹೂಡಿಕೆದಾರರ ವಿಶ್ವಾಸವನ್ನು ಎಲ್‌ಐಸಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾ ಕಾದುನೋಡಬೇಕು.


(ಒನ್ಇಂಡಿಯಾ ಸುದ್ದಿ)

English summary
LIC IPO Updates: 61% issue booked; policyholders portion subscribed 1.78 times, staff 97%, retail investors 54% in few hours of first day of opening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X