• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಜಯ್ ಮಲ್ಯ ಆಸ್ತಿ ಹರಾಜಿಗೆ ಮುಹೂರ್ತ ಫಿಕ್ಸ್

By Mahesh
|

ಬೆಂಗಳೂರು, ನ.22: ಉದ್ಯಮಿ ವಿಜಯ್ ಮಲ್ಯ ಅವರಿಗೆ ಸಾಲ ಕೊಟ್ಟಿರುವ 17ಕ್ಕೂ ಅಧಿಕ ಆರ್ಥಿಕ ಸಂಸ್ಥೆಗಳು ಮಲ್ಯ ಅವರ ಆಸ್ತಿ ಹರಾಜಿಗೆ ದಿನಾಂಕ ನಿಗದಿಪಡಿಸಿಕೊಂಡಿವೆ. ಮಲ್ಯ ಅವರು ಸುಮಾರು 8,000 ಕೋಟಿ ರು ಗೂ ಅಧಿಕ ಸಾಲದ ಹೊರೆ ಹೊತ್ತಿದ್ದಾರೆ.

ಏರ್​ಲೈನ್ಸ್​ಗೆ ಸಂಬಂಧಿ ಸಿದ ಆಸ್ತಿ ಮತ್ತು ವಾಹನಗಳ ಹರಾಜಿಗೆ ಡಿ.7ರಿಂದ ಬಿಡ್ ಶುರುವಾಗಲಿದೆ. ಕಿಂಗ್​ಫಿಷರ್​ಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ವಿವಿಧ ಬ್ಯಾಂಕ್​ಗಳಿಂದ ಮಲ್ಯ 7 ಸಾವಿರ ಕೋಟಿ ರೂ. ಸಾಲ ಪಡೆದಿದ್ದಾರೆ.

ಇ ಹರಾಜು: ಮುಂಬೈ ಏರ್​ಪೋರ್ಟ್​ನಲ್ಲಿರುವ 17 ಸಾವಿರ ಚದರ ಅಡಿಯ ಕಿಂಗ್​ಫಿಷರ್ ಹೌಸ್ ಕಟ್ಟಡವನ್ನು ಈಗಾಗಲೇ ಬ್ಯಾಂಕ್​ಗಳು ವಶಕ್ಕೆ ಪಡೆದಿವೆ. ಆದರೆ ಇನ್ನೂ ಮಾರಾಟ ಮಾಡಲಾಗಿಲ್ಲ. ಇದರ ಮೌಲ್ಯ 150 ಕೋಟಿ ರು ಎಂದು ಅಂದಾಜಿಸಲಾಗಿದೆ. ಗೋವಾದಲ್ಲಿರುವ 90 ಕೋಟಿ ರು ಮೌಲ್ಯದ ವಿಲ್ಲಾ ಕೂಡಾ ಬ್ಯಾಂಕ್ ಪಾಲಾಗಿದೆ.

ಏರ್​ಲೈನ್ಸ್​ಗೆ ಸೇರಿದ ಟೆಂಪೊ, ಟ್ರ್ಯಾಕ್ಟರ್, ಕಾರುಗಳು, ಎಸ್​ಯುುವಿ, ಏರ್​ಕ್ರಾಫ್ಟ್ ಪುಲ್ಲರ್ಸ್, ಲಗೇಜ್ ಟ್ರಾಲಿ ಮತ್ತಿತರ ಚರ ಆಸ್ತಿಗಳನ್ನು ಡಿ.7ರಂದು ಇ ಹರಾಜು ಹಾಕಲು ನಿರ್ಧರಿಸಲಾಗಿದೆ. ಹರಾಜಿನ ಆರಂಭಿಕ ಮೊತ್ತವನ್ನು ಕನಿಷ್ಠ 65 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ.

ಮಲ್ಯಗೆ ನೀಡಲಾಗಿರುವ ಸಾಲದ ಮೊತ್ತದಲ್ಲಿ 1,100 ಕೋಟಿ ರು ಮಾತ್ರ ಬ್ಯಾಂಕ್ ಗಳು ರಿಕೆವರಿ ಮಾಡಿಕೊಂಡಿವೆ. ಸಾಲದ ಮೇಲಿನ ಚಕ್ರ ಬಡ್ಡಿ 15.5 ರಷ್ಟಿದ್ದು, ಮಲ್ಯ ಅವರು ಪದೇ ಪದೇ ಉದ್ದೇಶಪೂರ್ವಕ ಸುಸ್ತಿದಾರರಾಗಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 17 lenders to the grounded Kingfisher Airlines, led by State Bank of India, on Saturday decided to auction assets of the defunct carrier in their latest bid to recover part of their dues of about Rs 8,000 crore, which have not been serviced since January 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more