ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ

|
Google Oneindia Kannada News

ಬೆಂಗಳೂರು, ಫೆಬ್ರವರಿ 08: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಗ್ರಾಹಕರೇ ಗಮನಿಸಿ, ನಿಮ್ಮ ಬ್ಯಾಂಕ್ ಖಾತೆಯ ಕನಿಷ್ಟ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ.

ಈ ನಿಯಮ ಶಾಖೆಯಿಂದ ಶಾಖೆಗೆ, ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಲಿದೆ. ಕನಿಷ್ಟ ಬ್ಯಾಲೆನ್ಸ್ ಹೊಂದಿರದ ಗ್ರಾಹಕರಿಗೆ ಎಷ್ಟು ದಂಡ ಬೀಳಲಿದೆ ಎಂಬುದು ಶೇಕಡಾವಾರು ಬ್ಯಾಲೆನ್ಸ್ ಮೇಲೆ ನಿರ್ಧರವಾಗಲಿದೆ.

ಕನಿಷ್ಟ ಬ್ಯಾಲೆನ್ಸ್ ವಿಚಾರದಲ್ಲಿ ಎಸ್ ಬಿ ಐ ತನ್ನ ಬ್ಯಾಂಕ್ ಶಾಖೆಗಳನ್ನು ನಾಲ್ಕು ಭಾಗವಾಗಿ ವಿಂಗಡಿಸಿದೆ. ಮೆಟ್ರೋ, ಗ್ರಾಮೀಣ, ನಗರ ಹಾಗೂ ಉಪನಗರವಾಗಿ ವಿಂಗಡನೆಯಾಗಿದೆ.

ಸ್ಟೇಟ್ ಬ್ಯಾಂಕ್ ಸೇವಾ ಶುಲ್ಕ ಪರಿಷ್ಕರಣೆ, ನೂತನ ದರಗಳು ಇಲ್ಲಿವೆಸ್ಟೇಟ್ ಬ್ಯಾಂಕ್ ಸೇವಾ ಶುಲ್ಕ ಪರಿಷ್ಕರಣೆ, ನೂತನ ದರಗಳು ಇಲ್ಲಿವೆ

ನಗರ ಹಾಗೂ ಮೆಟ್ರೋ ಶಾಖೆಗಳಲ್ಲಿ ಕನಿಷ್ಟ ಬ್ಯಾಲೆನ್ಸ್ 3 ಸಾವಿರ ರೂಪಾಯಿಯಾಗಿರಲಿದೆ. ಈ ಹಿಂದೆ ಎಲ್ಲ ಶಾಖೆಗಳಲ್ಲಿ ಒಂದೇ ಕನಿಷ್ಟ ಬ್ಯಾಲೆನ್ಸ್ ನಿಯಮ ಜಾರಿಗೆ ಬರಲಿದೆ, ಎಸ್ ಬಿ ಐ ಕನಿಷ್ಟ ಬ್ಯಾಲೆನ್ಸ್ ನಿಯಮವನ್ನೇ ತೆಗೆಯಲಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ, ಬ್ಯಾಂಕ್ ಯಾವುದೇ ಬದಲಾವಣೆ ಮಾಡಿಲ್ಲ. ದಂಡದ ರೂಪದಲ್ಲಿ ಬ್ಯಾಂಕ್ ಗ್ರಾಹಕರಿಂದ 20-50 ರೂಪಾಯಿ ಪಡೆಯಲಿದೆ.

ಕನಿಷ್ಟ ಠೇವಣಿ ದರ ಇಳಿಕೆ

ಕನಿಷ್ಟ ಠೇವಣಿ ದರ ಇಳಿಕೆ

ಗ್ರಾಹಕರ ಉಳಿತಾಯ ಖಾತೆ ಠೇವಣಿ ದರವನ್ನು ಇಳಿಕೆ ಮಾಡಿದೆ. ತಿಂಗಳ ಸರಾಸರಿ ಬ್ಯಾಲೆನ್ಸ್(ಎಂಎಬಿ) ಕನಿಷ್ಟ ಠೇವಣಿ ಮೊತ್ತವನ್ನು 5,000 ರು ನಿಂದ 3,000 ರು ಗಳಿಗೆ ಇಳಿಸಲಾಗಿದೆ. ಹೊಸ ನಿಯಮ ಅಕ್ಟೋಬರ್ 01, 2017ರಿಂದ ಜಾರಿಗೆ ಬರಲಿದೆ.

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ತನ್ನ ಗ್ರಾಹಕರಿಗೆ 2017ರ ಸೆಪ್ಟೆಂಬರ್ ನಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿತು.

ಉಳಿತಾಯ ಖಾತೆ ಸ್ಥಗಿತಗೊಳಿಸುವುದಕ್ಕೆ ಶುಲ್ಕ

ಉಳಿತಾಯ ಖಾತೆ ಸ್ಥಗಿತಗೊಳಿಸುವುದಕ್ಕೆ ಶುಲ್ಕ

ಉಳಿತಾಯ ಖಾತೆ ಸ್ಥಗಿತಗೊಳಿಸುವುದಕ್ಕೆ ವಿಧಿಸುತ್ತಿದ್ದ ದುಬಾರಿ ಶುಲ್ಕವನ್ನು ರದ್ದು ಮಾಡಿರುವುದಾಗಿ ಅಕ್ಟೋಬರ್ 2017ರಲ್ಲಿ ಘೋಷಿಸಿತ್ತು.

ಖಾತೆ ಆರಂಭಿಸಿ ಕನಿಷ್ಟ ಒಂದು ವರ್ಷವಾದರೂ ಆಗಿರಬೇಕು. ಖಾತೆ ತೆರೆದ 14 ದಿನಗಳ ನಂತರ ಮತ್ತು ಖಾತೆಗೆ ಒಂದು ವರ್ಷ ಪೂರ್ಣವಾಗುವ ಮೊದಲೇ ಸ್ಥಗಿತಗೊಳಿಸಿದರೆ 500 ರು ಮತ್ತು ಜಿಎಸ್‌ಟಿ ಶುಲ್ಕ ವಸೂಲಿ ಅನ್ವಯವಾಗಲಿದೆ.

ಒಂದು ವರ್ಷದಷ್ಟು ಹಳೆಯದಾಗಿದ್ದರೆ ಮಾತ್ರ ಶುಲ್ಕ ರದ್ದತಿ ವಿಧಿಸಲಾಗುವುದಿಲ್ಲ. ಮೂಲ ಉಳಿತಾಯ ಬ್ಯಾಂಕ್‌ ಖಾತೆಗಳನ್ನು (ಬಿಎಸ್‌ಬಿಡಿ) ಸ್ಥಗಿತಗೊಳಿಸಿದರೂ ಅದಕ್ಕೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಬ್ಯಾಂಕ್ ಪ್ರಕಟಿಸಿದೆ.

ನಿರ್ವಹಣಾ ಶುಲ್ಕ

ನಿರ್ವಹಣಾ ಶುಲ್ಕ

ನಗರ ಪ್ರದೇಶ, ಗ್ರಾಮಾಂತರ ಪ್ರದೇಶಗಳಿಗೆ ಬೇರೆ ಬೇರೆ ದರಗಳನ್ನು ನಿಗದಿಪಡಿಸಲಾಗಿದೆ. ಹಾಲಿ ನಿರ್ವಹಣಾ ಶುಲ್ಕ 25 ರಿಂದ 75ರು ದರವನ್ನು 20 ರಿಂದ 40 ರು ಗಳಿಗೆ ಇಳಿಸಲಾಗಿದೆ. ಪ್ರಧಾನಿ ಅವರ ಜನಧನ ಯೋಜನೆಗೆ ಅನುಗುಣವಾಗಿ ಸಣ್ಣ ಖಾತೆ, ಮಕ್ಕಳ ಖಾತೆ, ಹಿರಿಯ ನಾಗರಿಕರ ಖಾತೆ, ಪಿಂಚಣಿದಾರರಿಗೆ non-maintenance of Monthly Average Balance ಶುಲ್ಕದಿಂದ ಮುಕ್ತಿ ಸಿಕ್ಕಿದೆ.

ಐಎಂಪಿಎಸ್ ಮೂಲಕ ಹಣ ರವಾನೆ ಶುಲ್ಕ

ಐಎಂಪಿಎಸ್ ಮೂಲಕ ಹಣ ರವಾನೆ ಶುಲ್ಕ

ಆನ್ ಲೈನ್ ನಲ್ಲಿ ಐಎಂಪಿಎಸ್ ಮೂಲಕ ಹಣ ರವಾನಿಸುವ ಗ್ರಾಹಕರ ಮೇಲೆ ವಿಧಿಸಲಾಗುತ್ತಿದ್ದ ಶುಲ್ಕಕ್ಕೆ ಕಡಿವಾಣ ಹಾಕಲಾಗಿದೆ. ಇನ್ಮುಂದೆ 1000 ರೂಪಾಯಿ ತನಕ ಕಳಿಸುವ ಹಣಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಎಸ್ ಬಿಐ ಹೇಳಿದೆ.ಇದಕ್ಕೂ ಮುನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಮೂಹದ ಬ್ಯಾಂಕುಗಳಿಂದ ಐಪಿಎಂಎಸ್ ಮಾಡುವಾಗ 5 ರು ಸೇವಾ ತೆರಿಗೆ ವಿಧಿಸಲಾಗುತ್ತಿತ್ತು. ಇದು 1,000ರು ತನಕ ಅನ್ವಯವಾಗುತ್ತಿತ್ತು.

English summary
State Bank of India(SBI) customers holding savings bank accounts with the country's largest bank are required to maintain a certain minimum balance every month. SBI, which has specified different monthly average balances (MAB) for accounts held in different types of branches, charges a penalty for non-compliance depending on the degree of shortfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X