ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

52 ವಾರಗಳ ಕನಿಷ್ಠ ಮಟ್ಟಕ್ಕಿಳಿದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರು

|
Google Oneindia Kannada News

ಮುಂಬೈ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಲಕ್ಷ್ಮಿ ವಿಲಾಸ್ ಬ್ಯಾಂಕಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಬ್ಯಾಂಕ್ ಷೇರುಗಳ ಮೌಲ್ಯ ಶುಕ್ರವಾರ ತೀವ್ರವಾಗಿ ಕುಸಿದು, 52 ವಾರಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧವನ್ನು ಹೇರಿದ ನಂತರ, ಷೇರುಗಳ ಕುಸಿತವು ಶುಕ್ರವಾರವೂ ಮುಂದುವರೆಯಿತು.

ಶೇಕಡಾ 10 ರಷ್ಟು ಕುಸಿತ ದಾಖಲಿಸಿರುವ ಲಕ್ಷ್ಮಿ ವಿಲಾಸ್ ಬ್ಯಾಂಕ್‌ನ ಪ್ರತಿ ಷೇರು ಬೆಲೆ 9 ರೂಪಾಯಿಗೆ ತಲುಪಿದೆ. ಗುರುವಾರ ಮುಕ್ತಾಯಕ್ಕೆ ಹೋಲಿಸಿದರೆ, ಷೇರು ಬೆಲೆ ಶೇ. 0.55 ರಷ್ಟು ಕುಸಿಯಿತು.

ಲಕ್ಷ್ಮಿ ವಿಲಾಸ್ ಬ್ಯಾಂಕ್ ಠೇವಣಿದಾರರ ಹಣ ಸುರಕ್ಷಿತವಾಗಿದೆ: ಆರ್‌ಬಿಐಲಕ್ಷ್ಮಿ ವಿಲಾಸ್ ಬ್ಯಾಂಕ್ ಠೇವಣಿದಾರರ ಹಣ ಸುರಕ್ಷಿತವಾಗಿದೆ: ಆರ್‌ಬಿಐ

ಮುಂಬೈ ಷೇರು ಪೇಟೆ ಸೆನ್ಸೆಕ್ಸ್‌ನಲ್ಲಿ ಮಧ್ಯಾಹ್ನ 1.20 ಕ್ಕೆ, ಲಕ್ಷ್ಮಿ ವಿಲಾಸ್ ಬ್ಯಾಂಕ್ ಪ್ರತಿ ಷೇರಿಗೆ 9 ರೂ. ತಲುಪಿತು, ನಂತರದ ದಿನದ ಮುಕ್ತಾಯಕ್ಕೆ ಅಷ್ಟೇ ಬೆಲೆಗೆ ವಹಿವಾಟು ಮುಗಿಸಿತು.

Lakshmi Vilas Bank Shares Hit 52 Week Low Value

ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಪ್ರಕಾರ, ಲಕ್ಷ್ಮಿ ವಿಲಾಸ್ ಬ್ಯಾಂಕ್ 97,245 ವೈಯಕ್ತಿಕ ಷೇರುದಾರರನ್ನು ಹೊಂದಿದೆ. ಎಲ್‌ವಿಬಿ ಹೋಲ್ಡಿಂಗ್ಸ್ ಶೇ. 46.73ರಷ್ಟು ಷೇರುಗಳನ್ನು ಹೊಂದಿದೆ. ಡಿಬಿಎಸ್‌ನೊಂದಿಗೆ ವಿಲೀನಗೊಂಡ ನಂತರ ಎಲ್ಲವನ್ನೂ ಆ ಬ್ಯಾಂಕ್‌ಗೆ ವರ್ಗಾಯಿಸಲಾಗುತ್ತದೆ. ಗ್ರಾಹಕರು ಠೇವಣಿಗೆ ಯಾವುದೇ ಭಯಪಡಬೇಕಿಲ್ಲ ಎಂದು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಭರವಸೆ ನೀಡಿದೆ.

ಡಿಸೆಂಬರ್ 16ರವರೆಗಿನ ಒಂದು ತಿಂಗಳ ನಿಷೇಧದ ಅವಧಿಯಲ್ಲಿ ಗ್ರಾಹಕರು 25 ಸಾವಿರ ರೂ.ಗಳನ್ನು ಮಾತ್ರ ಹಿಂಪಡೆಯಲು ಅವಕಾಶವಿದೆ. ಮದುವೆ ಮತ್ತು ವೈದ್ಯಕೀಯ ವೆಚ್ಚಗಳಿಗಾಗಿ ರಿಸರ್ವ್ ಬ್ಯಾಂಕಿನ ಅನುಮತಿಯೊಂದಿಗೆ 25 ಸಾವಿರಕ್ಕೂ ಹೆಚ್ಚು ಹಣ ತೆಗೆದುಕೊಳ್ಳಬಹುದು.

English summary
Shares of Lakshmi Vilas Bank slumped further and fell 10 per cent to hit a new 52-week low value in early trade on Friday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X