ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒತ್ತಡದಲ್ಲಿ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುದಾರರು: ಷೇರು ಬೆಲೆ ತೀವ್ರ ಕುಸಿತ

|
Google Oneindia Kannada News

ತಮಿಳುನಾಡು ಮೂಲದ ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕನ್ನು ಆರ್‌ಬಿಐ ಮಂಗಳವಾರ ನಿಷೇಧಕ್ಕೊಳಪಡಿಸಿದ ಬಳಿಕ ಬುಧವಾರ ಎಲ್‌ವಿಪಿ ಷೇರುಗಳು ಒತ್ತಡಕ್ಕೆ ಸಿಲುಕಿವೆ.

ಮುಂದುವರಿದ ಆರ್ಥಿಕ ಒತ್ತಡದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ (ನವೆಂಬರ್ 17, 2020) ಖಾಸಗಿ ವಲಯದ ಸಾಲಗಾರ ಲಕ್ಷ್ಮಿ ವಿಲಾಸ್ ಬ್ಯಾಂಕ್ (ಎಲ್ವಿಬಿ) ಯನ್ನು ಒಂದು ತಿಂಗಳ ಅವಧಿಗೆ ನಿಷೇಧಕ್ಕೆ ಒಳಪಡಿಸಿತು. ಬ್ಯಾಂಕಿನಲ್ಲಿ ಠೇವಣಿದಾರರ ಆಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಲಾಗುವುದು, ಜೊತೆಗೆ 25,000 ವಿತ್‌ಡ್ರಾ ಮಿತಿಯನ್ನು ಹೇರಲಾಯಿತು.

ಒಂದು ತಿಂಗಳ ನಿಷೇಧಕ್ಕೊಳಗಾದ ಲಕ್ಷ್ಮಿ ವಿಲಾಸ್ ಬ್ಯಾಂಕ್: 25,000 ರೂ. ವಿತ್‌ಡ್ರಾ ಮಿತಿಒಂದು ತಿಂಗಳ ನಿಷೇಧಕ್ಕೊಳಗಾದ ಲಕ್ಷ್ಮಿ ವಿಲಾಸ್ ಬ್ಯಾಂಕ್: 25,000 ರೂ. ವಿತ್‌ಡ್ರಾ ಮಿತಿ

ಹೀಗೆ ಬ್ಯಾಂಕ್‌ ನಿಷೇಧಕ್ಕೊಳಗಾದ ಪರಿಣಾಮ ಬ್ಯಾಂಕಿನ ಷೇರುದಾರರು ಕಠಿಣ ಪರಿಸ್ಥಿತಿಯಲ್ಲಿ ಎದುರಿಸುವಂತಾಗಿದೆ. ಬುಧವಾರ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುಗಳು ಶೇಕಡಾ 3ಕ್ಕಿಂತ ಹೆಚ್ಚು ಕುಸಿತ ಕಂಡಿದ್ದು ಆರಂಭಿಕ ವಹಿವಾಟಿನಲ್ಲಿ ಕನಿಷ್ಠ 12.45 ರೂಪಾಯಿಗೆ ತಲುಪಿದೆ.

 Lakshmi Vilas Bank Shareholders In A Difficult Position: Share Price Down by 3%

ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಲಹೆಯ ಮೇರೆಗೆ ಕೇಂದ್ರ ಸರ್ಕಾರವು ಬ್ಯಾಂಕ್ ಮೇಲೆ ನವೆಂಬರ್ 17ರಿಂದ ಡಿಸೆಂಬರ್ 16ರವರೆಗೆ ನಿಷೇಧ ಹೇರಿದೆ.

English summary
After one month ban against Lakshmi Vilas Bank, shareholders worry about bank future. Wednesday bank Share Price down more than 3 Percent
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X