ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ತಿಂಗಳ ನಿಷೇಧಕ್ಕೊಳಗಾದ ಲಕ್ಷ್ಮಿ ವಿಲಾಸ್ ಬ್ಯಾಂಕ್: 25,000 ರೂ. ವಿತ್‌ಡ್ರಾ ಮಿತಿ

|
Google Oneindia Kannada News

ತಮಿಳುನಾಡು ಮೂಲದ ಖಾಸಗಿ ವಲಯದ ಬ್ಯಾಂಕ್ ಲಕ್ಷ್ಮಿ ವಿಲಾಸ್ ಬ್ಯಾಂಕನ್ನು ಕೇಂದ್ರ ಸರ್ಕಾರ ಮಂಗಳವಾರ ನಿಷೇಧಕ್ಕೆ ಒಳಪಡಿಸಿದೆ. ಜೊತೆಗೆ ಈ ಬ್ಯಾಂಕಿನ ಗ್ರಾಹಕರು ಖಾತೆಯಿಂದ ತಿಂಗಳಿಗೆ 25,000 ರೂಪಾಯಿ ಹಣವನ್ನು ಮಾತ್ರ ಹಿಂಪಡೆಯಲು ಸಾಧ್ಯವಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯ ನವೆಂಬರ್ 17ರಿಂದ ಡಿಸೆಂಬರ್ 16ರವರೆಗೆ ಬ್ಯಾಂಕ್ ನಿಷೇಧಕ್ಕೊಳಗಾಗಿದೆ.

ಆದಾಗ್ಯೂ, ವೈದ್ಯಕೀಯ ಚಿಕಿತ್ಸೆ, ಉನ್ನತ ಶಿಕ್ಷಣದ ಪಾವತಿ ಮತ್ತು ಮದುವೆ ವೆಚ್ಚಗಳಂತಹ ಉದ್ದೇಶಗಳಿಗಾಗಿ ಠೇವಣಿದಾರರಿಗೆ ರಿಸರ್ವ್ ಬ್ಯಾಂಕ್ ಅನುಮತಿಯೊಂದಿಗೆ 25,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

 Overdraft: ಅಗತ್ಯವಿರುವ ಸಮಯದಲ್ಲಿ ನೀವು ಹಣವನ್ನು ಪಡೆಯಬಹುದು, ಹೇಗೆ ಎಂದು ತಿಳಿಯಿರಿ Overdraft: ಅಗತ್ಯವಿರುವ ಸಮಯದಲ್ಲಿ ನೀವು ಹಣವನ್ನು ಪಡೆಯಬಹುದು, ಹೇಗೆ ಎಂದು ತಿಳಿಯಿರಿ

ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಲಹೆಯ ಮೇರೆಗೆ ಕೇಂದ್ರ ಸರ್ಕಾರವು ಈ ಹೆಜ್ಜೆಯನ್ನು ಇಟ್ಟಿದೆ. ಲಕ್ಷ್ಮೀ ವಿಲಾಸ್ ಬ್ಯಾಂಕ್ ಆರ್ಥಿಕ ಸ್ಥಿತಿಯು ನಿರಂತರವಾಗಿ ಕುಸಿಯುತ್ತಾ ಸಾಗಿತ್ತು. ಕಳೆದ ಮೂರು ವರ್ಷಗಳಿಂದ ಸತತವಾಗಿ ನಷ್ಟ ಆಗುತ್ತಿತ್ತು. ಯಾವುದೇ ಸರಿಯಾದ ವ್ಯೂಹಾತ್ಮಕ ಯೋಜನೆ ಇಲ್ಲದೆ, ಎನ್ ಪಿಎ (ಅನುತ್ಪಾದಕ ಸಾಲ) ಹೆಚ್ಚಾಗಿ ನಷ್ಟ ಮುಂದುವರಿದಿದೆ. ಬ್ಯಾಂಕ್ ನಲ್ಲೂ ಸತತವಾಗಿ ವಿತ್ ಡ್ರಾ ಮುಂದುವರಿದಿದೆ ಮತ್ತು ನಗದು ಕಡಿಮೆ ಆಗಿದೆ. ಜತೆಗೆ ಗಂಭೀರವಾದ ಆಡಳಿತಾತ್ಮಕ ಸಮಸ್ಯೆಗಳಿದ್ದವು. ಅದರಿಂದಾಗಿ ಬ್ಯಾಂಕ್ ಫಲಿತಾಂಶ ಇಳಿಮುಖ ಆಗುತ್ತಾ ಬಂತು. ಬ್ಯಾಂಕ್ ಅನ್ನು ಈಗ ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (ಪಿಸಿಎ) ಅಡಿಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ ನಿಂದ ಇಡಲಾಗಿತ್ತು ಎಂದು ಆರ್ ಬಿಐ ತಿಳಿಸಿದೆ.

 Lakshmi Vilas Bank Placed Under Moratorium: Withdrawal Limit Capped At Rs 25,000

ಕೇಂದ್ರ ಸರ್ಕಾರಕ್ಕೆ ಅದರ ಠೇವಣಿದಾರರ ಮತ್ತು ಹಣಕಾಸು ಮತ್ತು ಬ್ಯಾಂಕಿಂಗ್ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಅರ್ಜಿ ಸಲ್ಲಿಸುವುದನ್ನು ಬಿಟ್ಟು ಬೇರೆ ಪರ್ಯಾಯಗಳಿಲ್ಲ ಎಂದು ಆರ್‌ಬಿಐ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ. ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುಗಳು ಇಂದು ಬಿಎಸ್ಇಯಲ್ಲಿ ಶೇ. 1 ರಷ್ಟು ಇಳಿಕೆಯಾಗಿ 15.50 ರೂಪಾಯಿಗೆ ತಲುಪಿದೆ.

English summary
The Private Sector lender lalshmi vilas bank has been placed under moratorium which is effective 6 pm, november 17 till december 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X