ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮಿ ವಿಲಾಸ್ ಬ್ಯಾಂಕ್ ಠೇವಣಿದಾರರ ಹಣ ಸುರಕ್ಷಿತವಾಗಿದೆ: ಆರ್‌ಬಿಐ

|
Google Oneindia Kannada News

ನವದೆಹಲಿ, ನವೆಂಬರ್ 18: ಲಕ್ಷ್ಮಿ ವಿಲಾಸ್ ಬ್ಯಾಂಕ್ ಠೇವಣಿದಾರರ ಹಣ ಸುರಕ್ಷಿತವಾಗಿದೆ. ಹೆಣಗಾಡುತ್ತಿರುವ ಬ್ಯಾಂಕ್‌ ಠೇವಣಿದಾರರಿಗೆ ಮರುಪಾವತಿ ಮಾಡಲು ಸಾಕಷ್ಟು ದ್ರವ್ಯತೆ ಹೊಂದಿದೆ. ಜೊತೆಗೆ ಆರ್‌ಬಿಐ ನಿಗದಿಪಡಿಸಿದ ಗಡುವಿನೊಳಗೆ ಡಿಬಿಎಸ್ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಆರ್‌ಬಿಐ ನೇಮಕ ಮಾಡಿರುವ ಲಕ್ಷ್ಮಿ ವಿಲಾಸ್ ಬ್ಯಾಂಕಿನ ಆಡಳಿತಾಧಿಕಾರಿ ಟಿ.ಎನ್. ಮನೋಹರನ್ ಹೇಳಿದ್ದಾರೆ.

ಕೆನರಾ ಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಟಿ.ಎನ್ ಮನೋಹರನ್ ಅವರನ್ನು ಲಕ್ಷ್ಮಿ ವಿಲಾಸ್ ಬ್ಯಾಂಕಿನ ನಿರ್ವಾಹಕರನ್ನಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ನೇಮಕ ಮಾಡಿತು.

 ಭಾರೀ ಪ್ರಮಾಣದಲ್ಲಿ ಇಳಿಕೆಗೊಂಡಿದೆ ಗೃಹ ಸಾಲ ಬಡ್ಡಿ ದರ: ದಶಕದಲ್ಲಿ ಕನಿಷ್ಠ ಮಟ್ಟ ಭಾರೀ ಪ್ರಮಾಣದಲ್ಲಿ ಇಳಿಕೆಗೊಂಡಿದೆ ಗೃಹ ಸಾಲ ಬಡ್ಡಿ ದರ: ದಶಕದಲ್ಲಿ ಕನಿಷ್ಠ ಮಟ್ಟ

ಡಿಸೆಂಬರ್ 16ರ ಗಡುವಿನ ಮೊದಲು ಬ್ಯಾಂಕ್ ಅನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾದೊಂದಿಗೆ ಸಮಯೋಚಿತವಾಗಿ ವಿಲೀನಗೊಳಿಸುವ ವಿಶ್ವಾಸವಿದೆ ಎಂದು ಹೇಳಿದರು. ನವೆಂಬರ್ 17ರಿಂದ ಡಿಸೆಂಬರ್ 16ರವರೆಗೆ ಬ್ಯಾಂಕ್ ನಿಷೇಧಕ್ಕೊಳಗಾಗಿದ್ದು, ಬ್ಯಾಂಕಿನ ಗ್ರಾಹಕರು ಖಾತೆಯಿಂದ ತಿಂಗಳಿಗೆ 25,000 ರೂಪಾಯಿ ಹಣವನ್ನು ಮಾತ್ರ ಹಿಂಪಡೆಯಲು ಸಾಧ್ಯವಿದೆ.

Lakshmi Vilas Bank Moratorium: Depositors Money Safe

ವೈದ್ಯಕೀಯ ಚಿಕಿತ್ಸೆ, ಉನ್ನತ ಶಿಕ್ಷಣದ ಪಾವತಿ ಮತ್ತು ಮದುವೆ ವೆಚ್ಚಗಳಂತಹ ಉದ್ದೇಶಗಳಿಗಾಗಿ ಠೇವಣಿದಾರರಿಗೆ ರಿಸರ್ವ್ ಬ್ಯಾಂಕ್ ಅನುಮತಿಯೊಂದಿಗೆ 25,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

English summary
'Lakshmi Vilas Bank depositors’ money is safe and expressed confidence of completing its merger with DBS Bank India within the deadline set by the central bank says RBI appointed TN Manoharan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X