ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿನಿಂದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಶಾಖೆಗಳು, ಡಿಬಿಎಸ್‌ ಬ್ಯಾಂಕ್ ಆಗಿ ಕಾರ್ಯನಿರ್ವಹಣೆ

|
Google Oneindia Kannada News

ನವದೆಹಲಿ, ನವೆಂಬರ್ 27: ದೇಶಾದ್ಯಂತ ಲಕ್ಷ್ಮಿ ವಿಲಾಸ್ ಬ್ಯಾಂಕ್‌ನ ಎಲ್ಲಾ ಶಾಖೆಗಳು ಇಂದಿನಿಂದ ಸಿಂಗಾಪುರ ಮೂಲದ ಡಿಬಿಎಸ್‌ ಬ್ಯಾಂಕ್‌ ಆಗಿ ಕಾರ್ಯ ನಿರ್ವಹಿಸಲಿವೆ. ಅಲ್ಲದೆ ಈ ಹಿಂದೆ ಗ್ರಾಹಕರಿಗೆ ಆರ್‌ಬಿಐ ವಿಧಿಸಿದ್ದ 25,000 ರೂಪಾಯಿಗಳ ವಿತ್‌ಡ್ರಾ ಮಿತಿಯನ್ನು ಸಹ ತೆಗೆದು ಹಾಕಲಾಗಿದೆ.

ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಎಲ್‌ವಿಬಿಯನ್ನು ನವೆಂಬರ್ 17ರಿಂದ ಡಿಸೆಂಬರ್ 16ರವರೆಗೆ ಆರ್‌ಬಿಐ ನಿಷೇಧಕ್ಕೊಳಪಡಿಸಿತ್ತು. ಬ್ಯಾಂಕಿನ ಗ್ರಾಹಕರು ಖಾತೆಯಿಂದ ತಿಂಗಳಿಗೆ 25,000 ರೂಪಾಯಿ ಹಣವನ್ನು ಮಾತ್ರ ಹಿಂಪಡೆಯಲು ಮಿತಿ ಹೇರಲಾಗಿತ್ತು.

ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುಗಳ ವಹಿವಾಟು ಅಮಾನತುಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುಗಳ ವಹಿವಾಟು ಅಮಾನತು

ಎಲ್‌ವಿಬಿಯನ್ನು ಸಿಂಗಾಪುರದ ಮೂಲದ ಬಹುದೊಡ್ಡ ಬ್ಯಾಂಕ್ ಡಿಬಿಎಸ್ ಗ್ರೂಪ್‌ನೊಂದಿಗೆ ವಿಲೀನಗೊಳಿಸುವ ಕಾರ್ಯಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದ ಬಳಿಕ, ಗ್ರಾಹಕರಿಗೆ ಠೇವಣಿ ಹಿಂಪಡೆಯುವ ನಿರ್ಬಂಧಗಳನ್ನು ತೆಗೆದುಹಾಕಿದೆ.

Lakshmi Vilas Bank Branches To Operate As DBS Bank From Today

ಒಪ್ಪಂದದ ಪ್ರಕಾರ, ನವೆಂಬರ್ 27ರಿಂದ ಡಿಬಿಎಸ್‌ಗೆ 563 ಶಾಖೆಗಳು, 974 ಎಟಿಎಂಗಳು ಮತ್ತು ಚಿಲ್ಲರೆ ಹೊಣೆಗಾರಿಕೆಗಳಲ್ಲಿ 1.6 ಬಿಲಿಯನ್ ಫ್ರ್ಯಾಂಚೈಸ್ ದೊರೆತಿದೆ. ಈ ಮೂಲಕ ಮೊದಲ ದೇಶೀಯ ಬ್ಯಾಂಕ್‌ ಸಂಪೂರ್ಣವಾಗಿ ವಿದೇಶಿ ಬ್ಯಾಂಕ್‌ವೊಂದರಲ್ಲಿ ವಿಲೀನಗೊಂಡಿದೆ.

English summary
All the branches of Lakshmi Vilas Bank (LVB) will start functioning as branches of Indian arm of Singapore-based DBS Bank from today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X