ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಿಷ್ಯ ನಿಧಿ (EPFO) ಬಡ್ಡಿದರ ಇಳಿಕೆಗೆ ವಿತ್ತ ಸಚಿವಾಲಯ ಸಮ್ಮತಿ

ಉದ್ಯೋಗಿಗಳ ಭವಿಷ್ಯನಿಧಿ(ಇಪಿಎಫ್) ಠೇವಣಿಗಳ ಮೇಲೆ ಶೇ.8.65 ಬಡ್ಡಿದರವನ್ನು ಪ್ರಸಕ್ತ ಹಣಕಾಸು ವರ್ಷಕ್ಕೆ ಸ್ಥಿರೀಕರಿಸಲಿದೆ ಎಂದು ವಿತ್ತ ಸಚಿವಾಲಯ ಹೇಳಿದೆ. ಈ ಬಗ್ಗೆ ಕಾರ್ಮಿಕ ಸಚಿವಾಲಯಗಳ ನಡುವೆ ಭಿನ್ನಾಭಿಪ್ರಾಯಗಳು ಬಗೆಹರಿಸಲಾಗಿದೆ

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 15: ಉದ್ಯೋಗಿಗಳ ಭವಿಷ್ಯನಿಧಿ(ಇಪಿಎಫ್) ಠೇವಣಿಗಳ ಮೇಲೆ ಶೇ.8.65 ಬಡ್ಡಿದರವನ್ನು ಪ್ರಸಕ್ತ ಹಣಕಾಸು ವರ್ಷಕ್ಕೆ ಸ್ಥಿರೀಕರಿಸಲಿದೆ ಎಂದು ವಿತ್ತ ಸಚಿವಾಲಯ ಹೇಳಿದೆ. ಈ ಬಗ್ಗೆ ಕಾರ್ಮಿಕ ಸಚಿವಾಲಯಗಳ ನಡುವೆ ಭಿನ್ನಾಭಿಪ್ರಾಯಗಳು ಬಗೆಹರಿಸಲಾಗಿದೆ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಬುಧವಾರ ತಿಳಿಸಿದರು.

ದತ್ತಾತ್ರೇಯ ನೇತೃತ್ವದ ಕೇಂದ್ರೀಯ ಭವಿಷ್ಯನಿಧಿ ವಿಶ್ವಸ್ತ ಮಂಡಳಿಯು ಡಿಸೆಂಬರ್ 19ರಂದು ಶೇ.8.65 ಬಡ್ಡಿದರವನ್ನು ಅಂಗೀಕರಿಸಿತ್ತ. ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗೆ ನೀಡಲಾಗುತ್ತಿದ್ದ ಶೇ 8.8ರಷ್ಟು ಬಡ್ಡಿದರವನ್ನು 2015-16ಸಾಲಿನಂತೆ ಶೇ 8.65ಕ್ಕೆ ಇಳಿಕೆ ಮಾಡಲಾಗಿತ್ತು. ಈ ಬದಲಾವಣೆ 4ಕೋಟಿ ಗೂ ಅಧಿಕ ಚಂದಾದಾರರ ಮೇಲೆ ಪರಿಣಾಮ ಬೀರಲಿದೆ.[ನಿಷ್ಕ್ರಿಯ ಪಿಎಫ್ ಖಾತೆಗೆ ಶೇ.8.8 ರಷ್ಟು ಬಡ್ಡಿ!]

2013-14 ಮತ್ತು 2014-15 ನೇ ಸಾಲಿಗೆ ಅನುಕ್ರಮವಾಗಿ ಶೇ.8.75 ಮತ್ತು ಶೇ.8.5 ಬಡ್ಡಿದರ ನೀಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷಕ್ಕೆ ಶೇ.8.65 ಬಡ್ಡಿದರ ನೀಡಿದರೆ ಇಪಿಎಫ್ ಸಂಸ್ಥೆಯ ಬಳಿ 269 ಕೋ.ರೂ. ಮಿಗತೆ ಹಣ ಉಳಿಯಲಿದೆ.

Labour, finance ministry agree on 8.65% EPF interest: Bandaru Dattatreya

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿನ ದರವನ್ನು ಸರ್ಕಾರ ಕೊಂಚ ಇಳಿಕೆ ಮಾಡಿತ್ತು. ಇದರಿಂದ ಪಿಪಿಎಫ್, ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ ಯೋಜನೆ ಮುಂತಾದ ಉಳಿತಾಯ ಯೋಜನೆಗಳಿಂದ ಕಡಿಮೆ ರಿಟರ್ನ್ಸ್ ಬಂದಿತ್ತು. ಕಾರ್ಮಿಕ ಖಾತೆ ಕೂಡಾ ಶೇ 8.8ರ ಬಡ್ಡಿದರಕ್ಕೆ ಶಿಫಾರಸು ಮಾಡಿತ್ತು.

ಪಿಪಿಎಫ್ ನಂತಹ ಇತರ ಸಣ್ಣ ಉಳಿತಾಯ ಯೋಜನೆಗಳ ಮಟ್ಟಕ್ಕೆ ಭವಿಷ್ಯನಿಧಿ ಬಡ್ಡಿದರವನ್ನು ತಗ್ಗಿಸುವಂತೆ ವಿತ್ತ ಸಚಿವಾಲಯವು ಕಾರ್ಮಿಕ ಸಚಿವಾಲಯಕ್ಕೆ ಸೂಚಿಸುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವರ ಇಂದಿನ ಭರವಸೆ ಭವಿಷ್ಯನಿಧಿ ಚಂದಾದಾರರಿಗೆ ನೆಮ್ಮದಿಯನ್ನು ನೀಡಿದೆ.
ಏಪ್ರಿಲ್ 01, 2016ರಿಂದ ಇಪಿಎಫ್ ನ ಅಸಲು ಧನ ತೆರಿಗೆ ಮುಕ್ತವಾಗಿದೆ. ಇಪಿಎಫ್ ಗೆ ನೀಡುವ ಮೊತ್ತದ ಶೇ 60ರಷ್ಟು ಬಡ್ಡಿ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಇಪಿಎಫ್ ಒ ನಲ್ಲಿ 8.5 ಕೋಟಿಗೂ ಅಧಿಕ ಸದಸ್ಯರ 10 ಲಕ್ಷ ಕೋಟಿ ರು ಗೂ ಅಧಿಕ ಮೊತ್ತವಿದೆ. ಎನ್ ಪಿಎಸ್ ನಲ್ಲಿ 1.15 ಕೋಟಿ ಗೂ ಅಧಿಕ ಸದಸ್ಯರ 1.1 ಲಕ್ಷ ಕೋಟಿ ರು ಮೊತ್ತವಿದೆ
ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. (ಪಿಟಿಐ)

English summary
Labour minister Bandaru Dattatreya said 8.65% interest rate on EPF deposits for this fiscal will soon be ratified by the finance ministry and there is no difference of opinion on the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X