• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರಿಕ್ಸ್ ಬ್ಯಾಂಕ್ ಮುಖ್ಯಸ್ಥರಾಗಿ ಕನ್ನಡಿಗ ಕಾಮತ್

By Mahesh
|

ಬೆಂಗಳೂರು, ಮೇ.11: ಸುಮಾರು 50 ಬಿಲಿಯನ್ ಯುಎಸ್ ಡಾಲರ್ ವಹಿವಾಟು ನಿರೀಕ್ಷೆ ಹೊಂದಿರುವ ಅಭಿವೃದ್ಧಿಶೀಲ 'ಬ್ರಿಕ್ಸ್ ಬ್ಯಾಂಕ್' ಮುಖ್ಯಸ್ಥರಾಗಿ ಕನ್ನಡಿಗ ಪ್ರತಿಷ್ಠಿತ ಬ್ಯಾಂಕರ್ ಕೆವಿ ಕಾಮತ್ ಸೋಮವಾರ ಆಯ್ಕೆಯಾಗಿದ್ದಾರೆ.

ಕೆವಿ ಕಾಮತ್ ಅವರ ಅಧಿಕಾರ ಅವಧಿ ಐದು ವರ್ಷಗಳಾಗಿತ್ತು ಎಂದು ಆರ್ಥಿಕ ಇಲಾಖೆ ಕಾರ್ಯದರ್ಶಿ ರಾಜೀವ್ ಮಹರ್ಷಿ ಹೇಳಿದ್ದಾರೆ. [ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ]

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ (BRICS) 2014 ರಲ್ಲಿ ತೆಗೆದುಕೊಂಡ ನಿರ್ಣಯದಂತೆ ಹೊಸ ಅಭಿವೃದ್ಧಿ ಸಮೂಹ ಬ್ಯಾಂಕ್ ಸ್ಥಾಪನೆಯಾಗಿದೆ.

ಶಾಂಘೈನಲ್ಲಿ ಇದರ ಕೇಂದ್ರ ಕಚೇರಿ ಇರಲಿದೆ. ವಿಶ್ವಕಪ್ ಫುಟ್ಬಾಲ್ 2014ರ ಸಂದರ್ಭದಲ್ಲಿ ಜಾರಿಗೆ ಬಂದ ಈ ಹೊಸ ಮೈತ್ರಿ ಕೂಟಕ್ಕೆ ಆರ್ಥಿಕ ಬಲ ತರಲು ಪ್ರಧಾನಿ ಮೋದಿ ಅವರನ್ನು ಬ್ರೆಜಿಲ್ ನ ಅಧ್ಯಕ್ಷೆ ದಿಲ್ಮಾ ಕೇಳಿ ಕೊಂಡಿದ್ದರು.

ಅದರಂತೆ ಬ್ರಿಕ್ಸ್ ಬ್ಯಾಂಕ್ ಗೆ ಮೊದಲ ಅಧ್ಯಕ್ಷರನ್ನು ಆಯ್ಕೆ ಮಾಡುವ ಜವಾಬ್ದಾರಿ ಭಾರತ ಸರ್ಕಾರಕ್ಕೆ ನೀಡಲಾಗಿತ್ತು.ಕೆವಿ ಕಾಮತ್ ಅವರನ್ನು ಬ್ಯಾಂಕ್ ಮುಖ್ಯಸ್ಥರಾಗಿ ನೇಮಿಸಲಾಗಿದೆ. ವಿಶ್ವದ ಶೇ 40ರಷ್ಟು ಜನಸಂಖ್ಯೆ ಹೊಂದಿಕೊಂಡಂತೆ ಬ್ರಿಕ್ಸ್ ರಾಷ್ಟ್ರಗಳ ಈ ಬ್ಯಾಂಕ್ 16 ಟ್ರಿಲಿಯನ್ ಜಿಡಿಪಿ ಹೊಂದಲಿದೆ.

ಕುಂದಾಪುರ ವಾಮನ ಕಾಮತ್ (ಕೆವಿ ಕಾಮತ್) : ಮಂಗಳೂರಿನ ಸೈಂಟ್ ಅಲೋಷಿಯನ್ ಕಾಲೇಜು, ಸುರತ್ಕಲ್ ನಿಟ್ಟೆ (ಕೆಆರ್ಇಸಿ)ಯಿಂದ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಪದವಿ ಪಡೆದವರು, ಐಐಎಂ ಅಹಮದಾಬಾದಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೇಲೆ ಬಹುಕಾಲ ಐಸಿಐಸಿಐನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು.

* ಐಸಿಐಸಿಐ ಬ್ಯಾಂಕ್ ನ ನಾನ್ ಎಕ್ಸಿಕ್ಯುಟೀವ್ ಡೈರೆಕ್ಟರ್, ಮ್ಯಾನೇಜಿಂಗ್ ಡೈರೆಕ್ಟರ್, ಸಿಇಒ ಆಗಿದ್ದರು.

* ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

* ಇನ್ಫೋಸಿಸ್ ಸಂಸ್ಥೆ ಚೇರ್ಮನ್ ಆಗಿ 2014ರಲ್ಲಿ ನೇಮಕಗೊಂಡರು.

* ಐಐಎಂ ಅಹಮದಾಬಾದ್, ಐಐಎಂ ಇಂದೋರ್, ಮಣಿಪಾಲ್ ಸಂಸ್ಥೆಯ MAHE, ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಆಫ್ ಬ್ಯಾಂಕ್ ಮ್ಯಾನೇಜ್ಮೆಂಟ್ ಸೇರಿದಂತೆ ಹಲವು ಸಂಸ್ಥೆಗಳ ಸಮಿತಿಯ ಸಕ್ರಿಯ ಸದಸ್ಯರಾಗಿದ್ದಾರೆ,

* ಇದಲ್ಲದೆ ಸಿಐಐ, ಜರ್ಮನಿ, ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳ ಉದ್ಯಮ ಹಾಗೂ ವಿದ್ಯಾಸಂಸ್ಥೆಗಳ ಸಮಿಸಿ ಸದಸ್ಯರು.

ಭಾರತ ಸರ್ಕಾರದ ಪದ್ಮಭೂಷಣ ಸೇರಿದಂತೆ ಉದ್ಯಮ ವಲಯದಲಿ ಅನೇಕ ಶ್ರೇಷ್ಠ ಪ್ರಶಸ್ತಿಗಳು ಕಾಮತ್ ಅವರಿಗೆ ಸಂದಿದೆ.(ಒನ್ ಇಂಡಿಯಾ ಸುದ್ದಿ)

English summary
Eminent banker K.V. Kamath was on Monday appointed as head of the USD 50 billion New Development Bank being set up by the five emerging economies of BRICS grouping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X