ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಟಕ್ ಮಹೀಂದ್ರಾ ಬ್ಯಾಂಕ್ ಎಂಡಿ & ಸಿಇಒ ಆಗಿ ಉದಯ್ ಕೋಟಕ್ ಮರು ಆಯ್ಕೆಗೆ RBI ಒಪ್ಪಿಗೆ

|
Google Oneindia Kannada News

ನವದೆಹಲಿ, ಡಿಸೆಂಬರ್ 15: ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಆಗಿ ಉದಯ್ ಕೊಟಕ್ ಮರು ಆಯ್ಕೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಒಪ್ಪಿಗೆ ಸೂಚಿಸಿದೆ.

ಕೊಟಕ್ ಮಹೀಂದ್ರಾ ಬ್ಯಾಂಕಿನ ಸಂಸ್ಥಾಪಕ ಉದಯ್ ಕೋಟಕ್ ಅವರನ್ನು 2021 ರ ಜನವರಿ 1 ರಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮರು ನೇಮಕ ಮಾಡಲು, ರಿಸರ್ವ್ ಬ್ಯಾಂಕ್ ಸೋಮವಾರ ಅನುಮೋದನೆ ನೀಡಿದೆ ಎಂದು ಕೊಟಕ್ ಮಹೀಂದ್ರಾ ಬ್ಯಾಂಕ್ ಸ್ಟಾಕ್‌ ಫೈಲಿಂಗ್‌ನಲ್ಲಿ ತಿಳಿಸಿದೆ.

ತನ್ನ ಉದ್ಯೋಗಿಗಳಿಗೆ ಫಿಟ್ನೆಸ್ ಭತ್ಯೆ ನೀಡಲಿರುವ ಕೊಟಕ್ ಮಹೀಂದ್ರಾ ಬ್ಯಾಂಕ್ತನ್ನ ಉದ್ಯೋಗಿಗಳಿಗೆ ಫಿಟ್ನೆಸ್ ಭತ್ಯೆ ನೀಡಲಿರುವ ಕೊಟಕ್ ಮಹೀಂದ್ರಾ ಬ್ಯಾಂಕ್

ಇದರ ಜೊತೆಗೆ ಅರೆಕಾಲಿಕ ಅಧ್ಯಕ್ಷರಾಗಿ ಪ್ರಕಾಶ್ ಆಪ್ಟೆ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ದೀಪಕ್ ಗುಪ್ತಾ ಅವರನ್ನು ಮರು ನೇಮಕ ಮಾಡಲು ಆರ್‌ಬಿಐ ಅನುಮೋದನೆ ನೀಡಿದೆ.

Kotak Mahindra Bank: RBI Approves Re-Appointment Of Uday Kotak As Banks MD & CEO

"ಕೊಟಕ್ ಮಹೀಂದ್ರಾ ಬ್ಯಾಂಕಿನ ನಿರ್ದೇಶಕರ ಮಂಡಳಿಯು 2020 ರ ಮೇ 13 ಮತ್ತು 2020 ರ ಆಗಸ್ಟ್ 18 ರಂದು ನಡೆದ ಆಯಾ ಸಭೆಗಳಲ್ಲಿ ಆರ್‌ಬಿಐ ಅನುಮೋದನೆಗೆ ಒಳಪಟ್ಟು ಮರು ನೇಮಕಾತಿಗಳನ್ನು ಅನುಮೋದಿಸಿತ್ತು" ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಬೆಳವಣಿಗೆಯ ಹಿನ್ನಲೆಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಬಿಎಸ್‌ಇನಲ್ಲಿ ಶೇಕಡಾ 0.53ರಷ್ಟು ಏರಿಕೆಗೊಂಡು 1,950.45ಕ್ಕೆ ತಲುಪಿದ್ದು, ಎನ್‌ಎಸ್‌ಇನಲ್ಲಿ ಶೇಕಡಾ 0.61ರಷ್ಟು ಹೆಚ್ಚಳಗೊಂಡು 1,951.15 ರೂಪಾಯಿಗೆ ಮುಟ್ಟಿದೆ.

English summary
RBI approved re-appointment of Kotak Mahindra Bank's founder Uday Kotak as MD & CEO of the bank for a period of three years
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X