ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿನಿ ಬ್ಯಾಂಕ್ ಗಳಾದ ಫೇಸ್ ಬುಕ್, ಟ್ವಿಟ್ಟರ್

By Mahesh
|
Google Oneindia Kannada News

ಮುಂಬೈ, ಅ. 14: ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಗಳನ್ನು ಮಿನಿ ಬ್ಯಾಂಕ್ ಗಳಾಗಿ ಪರಿವರ್ತಿಸಲು ಖಾಸಗಿ ವಲಯದ ಬ್ಯಾಂಕ್ ಕೋಟಕ್ ಮಹೀಂದ್ರಾ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲೇ ಈಗಾಗಲೇ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಮೂಲಕ ಹಣ ರವಾನೆ ಮಾಡುವ ವ್ಯವಸ್ಥೆಗೆ ಬ್ಯಾಂಕ್ ಚಾಲನೆ ನೀಡಿದೆ.

ಫೇಸ್ ಬುಕ್ ಎಂದರೆ ಕಸದ ಬುಟ್ಟಿ, ಟ್ವಿಟ್ಟರ್ ಎಂದರೆ ಬರೀ ಸುದ್ದಿಗಳ ಸರಮಾಲೆ ಎಂದು ಮೂಗು ಮುರಿಯುತ್ತಿದ್ದವರೂ ಈಗ ಮೂಗಿನ ಮೇಲೆ ಬೆರಳಿಡುವಂತಾಗಿದೆ. ಗ್ರಾಹಕರಿಗೆ ಚಿರಪರಿಚಿತವಾಗಿರುವ ಆನ್ ಲೈನ್ ಬ್ಯಾಂಕಿಂಗ್ ವ್ಯವಸ್ಥೆಯ ಸುಧಾರಿತ ಯೋಜನೆಯನ್ನು ಕೋಟಕ್ ಮಹೀಂದ್ರಾ ಬ್ಯಾಂಕ್(ಕೆಎಂಬಿ) ಆರಂಭಿಸಿದೆ.

ಕೆಎಂಬಿಯ ಫೇಸ್ ಬುಕ್ ಆಧಾರಿತ ತಕ್ಷಣ ಹಣ ರವಾನೆ ಯೋಜನೆ ಜೊತೆಗೆ ಫ್ರೆಂಚ್ ಮೂಲಕ ಬ್ಯಾಂಕಿಂಗ್ ಸಮೂಹ ಬಿಪಿಸಿಎಇ ಟ್ವಿಟ್ಟರ್ ಮೂಲಕ ಹಣ ರವಾನೆಗೆ ವ್ಯವಸ್ಥೆ ಕಲ್ಪಿಸುತ್ತಿದೆ.

ಹೇಗೆ ನಡೆಯಲಿದೆ ವ್ಯವಹಾರ: ಈ ಸೌಲಭ್ಯ IMPS (immediate payment service) ಬಳಸುವವರು ಅಂದರೆ ಹಣ ಕಳುಹಿಸುವವರು ಮತ್ತು ಪಡೆಯುವವರು ಬ್ಯಾಂಕಿನ ಖಾತೆದಾರರಾಗಬೇಕಾಗೇನೂ ಇಲ್ಲ.
* ರಾಷ್ಟ್ರೀಯ ಭಾರತ ಪಾವತಿ ನಿಗಮ (ಎನ್‌ಪಿಸಿಐ)ದ ಐಎಂಪಿಎಸ್ ವೇದಿಕೆಯನ್ನು ಬಳಸಿಕೊಳ್ಳಲಾಗಿದೆ.
* ಈಗಿನ ಮಟ್ಟಿಗೆ ಐಎಂಪಿಎಸ್ ಸೌಲಭ್ಯವನ್ನು ಬಳಸಿಕೊಂಡು ಓರ್ವ ವ್ಯಕ್ತಿ ಮೊಬೈಲ್ ಫೋನ್ ಮೂಲಕ ಇನ್ನೋರ್ವ ವ್ಯಕ್ತಿಗೆ ಹಣ ಕಳುಹಿಸಬಹುದಾಗಿದೆ ಎಂದು ಕೆಎಂಬಿ ಕಾರ್ಯಕಾರಿ ಉಪಾಧ್ಯಕ್ಷ ಹಾಗೂ ಡಿಜಿಟಲ್ ಯೋಜನೆಗಳ ಮುಖ್ಯಸ್ಥ ದೀಪಕ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.
* ಐಎಂಪಿಎಸ್ ತನ್ನ ವ್ಯಾಪ್ತಿಯಲ್ಲಿ 28 ಬ್ಯಾಂಕ್‌ಗಳನ್ನು ಹೊಂದಿದೆ. ಇವುಗಳ ಪೈಕಿ ಯಾವುದೇ ಬ್ಯಾಂಕ್‌ನ ಖಾತೆದಾರರು ನೂತನ ಸೇವೆಯನ್ನು ಬಳಸಬಹುದಾಗಿದೆ.
* ಹಣವನ್ನು ಕಳುಹಿಸುವುದ ಕ್ಕಾಗಲಿ ಪಡೆದುಕೊಳ್ಳುವುದಕ್ಕಾಗಲಿ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಹೀಗಾಗಿ ಇದು ಉಚಿತ ಸೇವೆಯಾಗಿದೆ.

Kotak Mahindra Bank offer, Send Money through Facebook, Twitter

ಹಣ ಕಳಿಸುವವರ ಗಮನಕ್ಕೆ: ಹಣ ಕಳುಹಿಸುವವರು 'KayPay' ಎಂಬ ವ್ಯವಸ್ಥೆಯುಳ್ಳ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
* ನೋಂದಾವಣೆಯ ವೇಳೆ ಆತ ತನ್ನ ಬ್ಯಾಂಕ್ ಖಾತೆಯ ವಿವರಗಳು, ಬ್ಯಾಂಕ್‌ನ ಎಂಎಂಐಡಿ((mobile money identification number) ಹಾಗೂ ವೈಯಕ್ತಿಕ ಮಾಹಿತಿಗಳನ್ನು ಒದಗಿಸಬೇಕು.
* ನೋಂದಾವಣೆಯಾದ ಮೇಲೆ ಹಣ ಕಳುಹಿಸುವವರು ಹಣ ವರ್ಗಾವಣೆ ಪ್ರಕ್ರಿಯೆ ಆರಂಭಿಸಬಹುದು.
* ಹಣ ಪಡೆಯುವವರು 'ಕೇಪೇ'ಯಲ್ಲಿ ನೋಂದಾಯಿತರಾಗಿಲ್ಲದಿದ್ದರೆ ಅವರ ಎದುರು ಒಂದು ಪುಟ ತೆರೆದುಕೊಳ್ಳುವುದು. ಅಲ್ಲಿ ಅವರು ಬೇಕಾದ ವಿವರಗಳನ್ನು ಭರ್ತಿ ಮಾಡಿದರೆ ವ್ಯವಹಾರ ತಕ್ಷಣವೇ ಪೂರ್ಣಗೊಳ್ಳುವುದು.
* ಹಣ ಪಡೆಯುವವರು ಹಾಗೂ ಕಳುಹಿಸುವವರು ಈ ಮೊದಲೇ 'ಕೇಪೇ'ಯಲ್ಲಿ ನೋಂದಾಯಿಸಿಕೊಂಡಿದ್ದರೆ ಹಣ ವರ್ಗಾವಣೆ ಪ್ರಕ್ರಿಯೆ ಶೀಘ್ರವಾಗಿ ನಡೆಯುವುದು.

ಸುರಕ್ಷಿತವೇ?: ಹಣ ವರ್ಗಾವಣೆ ಪ್ರಕ್ರಿಯೆ ಸುರಕ್ಷಿತವಾಗಿರುತ್ತದೆ. ಫೇಸ್‌ಬುಕ್ ಖಾತೆಗೆ ಯಾರಾದರೂ ಕನ್ನ ಹಾಕಿದರೂ ಯಾವುದೇ ಅಪಾಯವಿಲ್ಲ, ಹಣ ವರ್ಗಾವಣೆ ಪ್ರಕ್ರಿಯೆಯೊಂದು ಪೂರ್ಣಗೊಳ್ಳುವ ಮುನ್ನ ಎರಡು ಅಂಶಗಳ ದೃಢೀಕರಣ ವ್ಯವಸ್ಥೆಯಿದೆ. ವ್ಯವಹಾರವೊಂದು ಪೂರ್ಣಗೊಳ್ಳಲು ಸಮಯ ಮಿತಿಯಿದೆ, ಹಣ ವರ್ಗಾವಣೆಗೆ ಬ್ಯಾಂಕ್ ಮಿತಿಯನ್ನೂ ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್‌ನ ಉನ್ನತಾಧಿಕಾರಿ ಹೇಳಿದ್ದಾರೆ.

* ಒಂದು ವ್ಯವಹಾರದಲ್ಲಿ ಗರಿಷ್ಠ 2,500 ರೂ.ಯನ್ನು ಹಾಗೂ ತಿಂಗಳಿಗೆ ಗರಿಷ್ಠ 25,000 ರೂ. ಕಳುಹಿಸಬಹುದು. ಹಣ ಪಡೆಯುವವರೂ ತಿಂಗಳಿಗೆ 25,000ಕ್ಕಿಂತ ಹೆಚ್ಚಿನ ಮೊತ್ತವನ್ನು ಪಡೆಯುವಂತಿಲ್ಲ. ಸದ್ಯಕ್ಕೆ ಕೋಟಕ್ ಮಹೀಂದ್ರಾ ಬ್ಯಾಂಕ್ ಬಿಟ್ಟರೆ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಫೇಸ್ ಬುಕ್ ಮೂಲಕ ಹಣ ರವಾನೆ ವ್ಯವಸ್ಥೆ ಕಲ್ಪಿಸಿದೆ. ಇನ್ನೂ ಅನೇಕ ಬ್ಯಾಂಕ್ ಗಳು ಈ ವ್ಯವಸ್ಥೆಯನ್ನು ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

English summary
Kotak Mahindra Bank (KMB) has launched a Facebook-based instant fund transfer service in India. KMB’s service will enable users to send money to friends on the social media network real-time, absolutely free!French banking major Groupe BPCE is teaming up with Twitter to allow its customers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X