ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಭಾಷೆಗಳಿಗಾಗಿ ಕೂನಿಂದ ಟಾಕ್ ಟು ಟೈಪ್ ಫೀಚರ್

|
Google Oneindia Kannada News

ಬೆಂಗಳೂರು, ಮೇ 4: ಭಾರತೀಯ ಭಾಷೆಗಳಿಗಾಗಿ ಕೂನಿಂದ "ಟಾಕ್ ಟು ಟೈಪ್" ಫೀಚರನ್ನು ಘೋಷಿಸಲಾಗಿದೆ. ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಬಯಸುವ ಯಾರಾದರೂ ಈಗ ಟೈಪ್ ಮಾಡದೆಯೇ ಸುಲಭವಾಗಿ ಮಾತನಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಬಳಕೆದಾರರು ಕೇವಲ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಫೋನ್‌ನಲ್ಲಿ ಅವರ ಆಲೋಚನೆಗಳಿಗೆ ಧ್ವನಿಗೂಡಿಸಿದರೆ ಸಾಕು ಕೀಬೋರ್ಡ್ ಬಳಸದೆ ಪದಗಳು ಪರದೆಯಲ್ಲಿ ಸ್ವಯಂಚಾಲಿತವಾಗಿ ಮೂಡುತ್ತವೆ. ಕೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಭಾರತೀಯ ಭಾಷೆಗಳಲ್ಲಿ ಈ ಫೀಚರ್ ಲಭ್ಯವಿದೆ. ಸ್ಥಳೀಯ ಭಾರತೀಯ ಭಾಷೆಗಳಲ್ಲಿ ಜನರೊಂದಿಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇದು ಸುಲಭವಾದ ಮಾರ್ಗವಾಗಿದೆ.

ಇಂಗ್ಲಿಷ್ ಸೇರಿದಂತೆ ಭಾರತದ ಪ್ರಾದೇಶಿಕ ಭಾಷೆಗಳಲ್ಲೂ ಕೂಡ "ಟಾಕ್ ಟು ಟೈಪ್ " ಫೀಚರನ್ನು ಬಳಕೆಗೆ ತಂದ ವಿಶ್ವದ ಮೊಟ್ಟ ಮೊದಲ ಸಾಮಾಜಿಕ ಜಾಲತಾಣ ವೇದಿಕೆ ಎಂಬ ಹೆಗ್ಗಳಿಕೆಗೆ ಕೂ ಪಾತ್ರವಾಗಿದೆ, ಇದು ಲಕ್ಷಾಂತರ ಕೂ ಬಳಕೆದಾರರಿಗೆ ಸುಲಭವಾದ ರೀತಿಯಲ್ಲಿ ಪ್ರಾದೇಶಿಕ ಭಾಷೆಯಲ್ಲಿನ ಬರಹಗಳಿಗೆ ಅನುವು ಮಾಡಿಕೊಡುತ್ತದೆ. ಕೀಬೋರ್ಡ್ ಬಳಸಲು ಅನಾನುಕೂಲತೆ ಎದುರಿಸುವ ಅನೇಕ ಬಳಕೆದಾರರನ್ನು ಕೂನಲ್ಲಿ ಸಕ್ರಿಯಗೊಳಿಸಲು ಈ ಫೀಚರ್ ನೆರವಾಗುತ್ತದೆ.

Koo launches Talk to Type feature for Indian languages

ಅಪ್ರಮೇಯ ರಾಧಾಕೃಷ್ಣ ಕೂ ಸಹ ಸಂಸ್ಥಾಪಕರು , ಹೇಳುವಂತೆ ಈ ''ಟಾಕ್ ಟು ಟೈಪ್'' ಫೀಚರ್ ಅತ್ಯದ್ಭುತವಾಗಿದೆ, ಅಲ್ಲದೆ ಪ್ರಾದೇಶಿಕ ಭಾಷಾ ಬಳಕೆದಾರರ ಬರಹಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಬಳಕೆದಾರರು ಇನ್ನು ಮುಂದೆ ತಮ್ಮ ಸುದೀರ್ಘ ಆಲೋಚನೆಗಳನ್ನು ವ್ಯಕ್ತಪಡಿಸಲು ಕೀಬೋರ್ಡ್ ಬಳಸಬೇಕಾಗಿಲ್ಲ. ಭಾರತೀಯ ಭಾಷೆಗಳನ್ನು ಮಾತನಾಡುವ ಜನರು ಈಗ ತಮ್ಮ ಮನಸ್ಸಿನ ಮಾತನ್ನು ಆಡಿದರೆ ಸಾಕು ಆ ಪದಗಳು ಪರದೆಯ ಮೇಲೆ ಮಾಂತ್ರಿಕವಾಗಿ ಮೂಡುತ್ತವೆ! ಸ್ಥಳೀಯ ಭಾಷೆಗಳಲ್ಲಿ ಟೈಪ್ ಮಾಡಲು ಕಷ್ಟಪಡುವ ಬಳಕೆದಾರರಿಗೆ ಈ ಫೀಚರ್ ಆ ಎಲ್ಲ ನೋವನ್ನು ಇಲ್ಲವಾಗಿಸುತ್ತದೆ. ನಾವು ಭಾರತೀಯರ ಅಭಿವ್ಯಕ್ತಿಗೆ ಮೌಲ್ಯಗಳನ್ನ ಸೇರಿಸುವುದರ ಮೂಲಕ ಅವರ ಅಭಿಪ್ರಾಯಗಳನ್ನು ಅವರದೇ ಸ್ಥಳೀಯ ಭಾಷೆಗಳಲ್ಲಿ ಉತ್ತಮ ರೀತಿಯಲ್ಲಿ ವ್ಯಕ್ತಪಡಿಸಲು ಸಹಾಯ ಮಾಡುತ್ತೇವೆ.

Recommended Video

Corona ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ | Oneindia Kannada

ಕೂ ಬಗ್ಗೆ: ಕೂ ಮಾರ್ಚ್ 2020 ರಲ್ಲಿ ಭಾರತೀಯ ಭಾಷೆಗಳನ್ನೊಳಗೊಂಡ ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾಯಿತು, ಇಲ್ಲಿ ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿ ತಮ್ಮ ಮನದಾಳವನ್ನು ವ್ಯಕ್ತಪಡಿಸಿಕೊಳ್ಳಬಹುದು. ಭಾರತದಲ್ಲಿ ಕೇವಲ 10% ಜನರು ಇಂಗ್ಲಿಷ್ ಮಾತನಾಡುತ್ತಾರೆ. 90% ಜನ ಭಾರತೀಯ ಭಾಷೆಗಳಿಗೆ ಮಾತ್ರ ಆದ್ಯತೆ ನೀಡುತ್ತಾರೆ. ತಮ್ಮ ಸ್ಥಳೀಯ ಭಾಷೆಯಲ್ಲಿ ತಮ್ಮ ಮನದಾಳವನ್ನು ತಾವು ವ್ಯಕ್ತಪಡಿಸಲು ಮತ್ತು ಅದೇ ಸಮೂಹದ ಇತರರನ್ನು ಹುಡುಕಲು ಅವರಿಗೆ ಅಂತರ್ಜಾಲದಲ್ಲಿ ಯಾವುದೇ ಸ್ಥಳವಿಲ್ಲ. ಈಗ ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರಿಗೆ ಕೂ ಧ್ವನಿಯಾಗುತ್ತಿದೆ. ಪ್ರಸ್ತುತ ಹಿಂದಿ, ಕನ್ನಡ, ತೆಲುಗು, ಬಂಗಾಳಿ, ಮುಂತಾದ ಅನೇಕ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂ ಹೊಸ ಭರವಸೆಗಳನ್ನು ಹುಟ್ಟಿಸಿದೆ.

English summary
Koo on Tuesday announced the launch of 'Talk to Type' feature through which users can leverage voice assistant to share their thoughts without having to type.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X