• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ?

|

ಇಂದು ಸೋಷಿಯಲ್ ಮೀಡಿಯಾ ಅಂದ್ರೆ ಸಾಕು ಅಂಗೈ ನಲ್ಲಿಯೇ ಇಡೀ ವಿಶ್ವವನ್ನು ಮುಂದೆ ನಿಲ್ಲಿಸುವಂತ ಫವರ್ ಪುಲ್ ಮಾಧ್ಯಮವಾಗಿದೆ. ಈ ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಮುಂಚೂಣಿಯಲ್ಲಿ ವಾಟ್ಸ್ ಆಪ್, ಫೇಸ್ ಬುಕ್, ಟ್ವಿಟರ್ ಸೇರಿದಂತೆ ಅನೇಕವು ಇದ್ದರೇ, ಇದಕ್ಕೆ ಟಕ್ಕರ್ ಕೊಡುವಂತೆ ಸ್ವದೇಶಿ, ಕನ್ನಡಿಗರೇ ರಚಿಸಿದಂತ ಆಪ್ ನಿರ್ಮಾಣವಾಗಿದೆ. ಅದೇ ಕೂ ಆಪ್. ಕನ್ನಡ ಭಾಷೆಯಲ್ಲೇ ವ್ಯವಹರಿಸಬಹುದಾದ ಕನ್ನಡದ್ದೇ ಸೋಷಿಯಲ್ ಮೀಡಿಯಾ ಈ ಕೂ ಆಪ್. ಅದರ ವಿಶೇಷತೆ ಏನು..? ಹೇಗೆ ಬಳಕೆ ಮಾಡೋದು..? ಎಂಬ ಮಾಹಿತಿ ಇಲ್ಲಿದೆ.

   Oxford Covid Vaccine ಮಾನವ ಪ್ರಯೋಗದ ಪಲಿತಾಂಶ ಇಂದು | Oneindia Kannada

   ಕೇಂದ್ರ ಸರ್ಕಾರ ಚೀನಾದ 59 ಆಪ್ ಗಳನ್ನು ಬ್ಯಾನ್ ಮಾಡಿದೆ. ಇದರ ಬೆನ್ನಲ್ಲೆ ಸ್ವದೇಶಿ ನಿರ್ಮಿತ ಆಪ್ ಗಳ ಆವಿಷ್ಕಾರ ಆರಂಭಗೊಂಡಿದೆ. ಬಗೆ ಬಗೆಯ ಆಪ್ ಗಳ ಆವಿಷ್ಕಾರದ ನಡುವೆ ಕನ್ನಡಿಗರೊಬ್ಬರು ಮಾತೃಭಾಷೆಯಲ್ಲೇ ಬಳಕೆ ಮಾಡುವ ಸಲುವಾಗಿ ಟ್ವಿಟ್ಟರ್ ಗೆ ಸರಿ ಸಮಾನವಾದಂತ ಆಪ್ ಅಭಿವೃದ್ಧಿ ಪಡಿಸಿದ್ದಾರೆ.

   Vokal : ಕಲಿಕೆಯ ಹೊಸ ರೂಪ, ಎಲ್ಲಾ ಪ್ರಶ್ನೆಗೂ ಉತ್ತರಭೂಪ

   ಆ ಆಪ್ ಈಗಾಗಲೇ 3 ಲಕ್ಷಕ್ಕೂ ಅಧಿಕ ಜನರು ತಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಈ ಮೂಲಕ ಪರಸ್ಪರ ತಮ್ಮವರನ್ನು ಕನ್ನಡದ ಮಾತೃಭಾಷೆಯಲ್ಲೇ ಸಂಪರ್ಕಿತರಾಗಿದ್ದಾರೆ....ಇದರ ನಿರ್ಮಾತೃ, ಕೋ ಫೌಂಡರ್ ನಮ್ಮ ಬೆಂಗಳೂರಿನ ಅಪ್ಪಟ ಕನ್ನಡಿಗ ಅಪ್ರಮೇಯ ರಾಧಾಕೃಷ್ಣ.ಕೂ ಆಪ್ ನ ಕೋ ಫೌಂಡರ್ ಮತ್ತು ಸಿಇಒ ಆಗಿರುವ ಕನ್ನಡಿಗ ಅಪ್ರಮೇಯ ರಾಧಾಕೃಷ್ಣ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

   ಕನ್ನಡದ್ದೇ ಆದ ಸೋಷಿಯಲ್ ಮೀಡಿಯಾ

   ಕನ್ನಡದ್ದೇ ಆದ ಸೋಷಿಯಲ್ ಮೀಡಿಯಾ

   ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ಪ್ರಾದೇಶಿಕತೆಗಿಂತ ಆಂಗ್ಲ ಭಾಷೆಯ ಪ್ರಾಬಲ್ಯತೆಯೇ ತೋರಿ ಬರುತ್ತಿದೆ. ಹೀಗಾಗಿ ಕನ್ನಡಿಗರಿಗೆ, ತಮ್ಮ ಮಾತೃಭಾಷೆಯಲ್ಲಿಯೇ ವ್ಯವಹರಿಸಲು ಸೋಷಿಯಲ್ ಫ್ಲಾಟ್ ಫಾರ್ಮ್ ಕಲ್ಪಿಸಿಕೊಂಡುವಂತ ಚಿಂತನೆ ಹೊಳೆಯಿತು. ಅದರ ಭಾಗವಾಗಿಯೇ ಅಭಿವೃದ್ಧಿಗೊಂಡಿದ್ದೇ ಕೂ ಆಪ್..

   ಇನ್ನೂ ಇದೇ ಯೋಜನೆಯಿಂದಲೇ ಕನ್ನಡಿಗರು ಕನ್ನಡದಲ್ಲಿಯೇ ವ್ಯವಹರಿಸುವಂತ ಸೋಷಿಯಲ್ ಮೀಡಿಯಾ ರಚನೆಯನ್ನು ಮಾಡಲಾಯ್ತು. ಇಲ್ಲಿ ಕೇವಲ ಮಾತೃಭಾಷೆಯಾದಂತ ಕನ್ನಡಲ್ಲಿಯೇ ವ್ಯವಹರಿಸುವಂತ ಆಯ್ಕೆಗಳನ್ನು ನೀಡಲಾಗಿದೆ. ಟ್ವಿಟರ್ ಮಾದರಿಯಲ್ಲಿಯೇ ಪೋಸ್ಟ್, ವೀಡಿಯೋ, ಪೋಟೋ ಕೂ ಆಪ್ ನಲ್ಲಿ ಬಳಕೆದಾರರು ಮಾಡಬಹುದಾಗಿದೆ.‌

   ಕ್ರಿಕೆಟರ್ಸ್, ಸೆಲೆಬ್ರಿಟಿಗಳು ಮೆಚ್ಚಿರುವ ಆಪ್

   ಕ್ರಿಕೆಟರ್ಸ್, ಸೆಲೆಬ್ರಿಟಿಗಳು ಮೆಚ್ಚಿರುವ ಆಪ್

   ಕಳೆದ ಮೂರು ತಿಂಗಳ ಹಿಂದೆ ಅಭಿವೃದ್ಧಿ ಪಡಿಸಲಾಗಿರುವಂತ ಕೂ ಆಪ್ ಅನ್ನು ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಅನಿಲ್‌ಕುಂಬ್ಳೆ, ಸ್ಯಾಂಡಲ್ ವುಡ್ ನಟರು, ರಾಜಕೀಯ ಮುಖಂಡರು ಇನ್ಸ್ಟಾಲ್ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ. ಇವರನ್ನು ಅನೇಕ ಅವರ ಅಭಿಮಾನಿಗಳು ಫಾಲೋ ಕೂಡ ಮಾಡುತ್ತಿದ್ದಾರೆ.

   10 ನಿಮಿಷದವರೆಗಿನ ವೀಡಿಯೋ ಅಪ್ ಲೋಡ್ ಸಾಧ್ಯ

   10 ನಿಮಿಷದವರೆಗಿನ ವೀಡಿಯೋ ಅಪ್ ಲೋಡ್ ಸಾಧ್ಯ

   ಟ್ವಿಟರ್ ಗಿಂತ ಭಿನ್ನ-ವಿಭಿನ್ನವಾಗಿರುವ ಕೂ ಆಪ್ ಟ್ವಿಟರ್ ನಲ್ಲಿ ಕೇವಲ 2 ನಿಮಿಷಗಳ ವರೆಗೆ ಮಾತ್ರ ವೀಡಿಯೋ ಅಪ್ ಲೋಡ್ ಮಾಡಬಹುದಾದರೇ, ಕೂ ಆಪ್ ನಲ್ಲಿ 10 ನಿಮಿಷದವರೆಗಿನ ವೀಡಿಯೋವನ್ನು ಅಪ್ ಲೋಡ್ ಮಾಡಬಹುದಾಗಿದೆ. ಈಗ ಮೊದಲ ಬಾರಿಗೆ ಆಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್ ವರ್ಷನ್ ಬಿಡುಗಡೆ ಮಾಡಲಾಗಿದ್ದು, ಮುಂದಿನ ವಾರದಲ್ಲಿ ಐಒಎಸ್ ವರ್ಷನ್ ಕೂಡ ಆಪಲ್ ಪೋನ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂಬುದಾಗಿ ಕೂ ಆಪ್ ಕೋ ಫೌಂಡರ್ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ ತಿಳಿಸಿದ್ದಾರೆ.

   ಮೂರು ಲಕ್ಷಕ್ಕೂ ಹೆಚ್ಚು ಕನ್ನಡಿಗರು ಬಳಕೆ

   ಮೂರು ಲಕ್ಷಕ್ಕೂ ಹೆಚ್ಚು ಕನ್ನಡಿಗರು ಬಳಕೆ

   ಕೂ ಆಪ್ ಬಿಡುಗಡೆಯಾದ ಮೂರೇ ತಿಂಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಕನ್ನಡಿಗರು ಬಳಕೆ ಮಾಡಲು ಆರಂಭಿಸಿದ್ದಾರೆ. ಕನ್ನಡಲ್ಲಿಯೇ ಎಲ್ಲಾ ಕೆಟಗರಿಯನ್ನು ಹೊಂದಿರುವ ಕೂ ಆಪ್, ಕನ್ನಡ ತನವನ್ನು, ಕನ್ನಡಿಗರಿಗೆ ಕನ್ನಡದಲ್ಲಿಯೇ ವ್ಯವಹರಿಸುವ ಸೌಲಭ್ಯ ಒದಗಿಸಿದೆ.

   ಇಂತಹ Koo App ನೀವು ಕೂಡ ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರಿನಿಂದ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಡೌನ್ ಲೋಡ್ ಮಾಡಿಕೊಂಡು ಬಳಕೆ ಮಾಡಬಹುದು.

   English summary
   A Made in India app Koo- a micro blogging app focussed on non-English speakers in India is available in 12 languages including Kannada.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X