ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಚ್ಚಿ-ಬೆಂಗಳೂರು ನಡುವಿನ ಗ್ಯಾಸ್‌ ಪೈಪ್‌ಲೈನ್‌ ಯೋಜನೆ ಶೀಘ್ರದಲ್ಲೇ ಪೂರ್ಣ

|
Google Oneindia Kannada News

ಮುಂಬೈ, ನವೆಂಬರ್ 23: ಕೊಚ್ಚಿ-ಮಂಗಳೂರು ನಡುವಿನ ಗ್ಯಾಸ್ ಪೈಪ್‌ ಲೈನ್ ಅನ್ನು ದೀರ್ಘ ವಿಳಂಬದ ಬಳಿಕ ಪೂರ್ಣಗೊಳಿಸಿದ್ದ ರಾಷ್ಟ್ರೀಯ ಪ್ರಮುಖ ಅನಿಲ ಸಂಸ್ಥೆ ಗೇಲ್ ಇಂಡಿಯಾ, ಕೊಚ್ಚಿ-ಬೆಂಗಳೂರು ನಡುವಿನ ಮಾರ್ಗದ ಮೊದಲ ಹಂತವನ್ನು ಜನವರಿಯಲ್ಲಿ ಪೂರ್ಣಗೊಳಿಸುವ ಭರವಸೆ ಇದೆ ಎಂದು ಹೇಳಿದೆ.

ಕಳೆದ ವಾರವಷ್ಟೇ ಮಂಗಳೂರು-ಕೊಚ್ಚಿ ಮಾರ್ಗದ ಪೈಪ್‌ಲೈನ್ ಪೂರ್ಣಗೊಳಿಸಲಾಗಿತ್ತು. 620 ಕಿ.ಮೀ ಉದ್ದದ ಕೊಚ್ಚಿ-ಬೆಂಗಳೂರು ಗ್ಯಾಸ್‌ ಪೈಪ್‌ಲೈನ್‌ ಯೋಜನೆಯನ್ನು ವಲಯಾರ್‌ಗೆ ವಿಸ್ತರಿಸಲಾಗಿದ್ದು, ಇದರ 95 ಕಿ.ಮೀ ಉದ್ದದ ಪೈಪ್‌ಲೈನ್‌ ಯೋಜನೆಯು ಪ್ರಗತಿಯಲ್ಲಿದೆ ಎಂದು ಗೇಲ್‌ನ ದಕ್ಷಿಣ ಪ್ರಾಂತೀಯ ಉಸ್ತುವಾರಿ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಮುರುಗೇಸನ್‌ ತಿಳಿಸಿದ್ದಾರೆ.

ಕೊಚ್ಚಿ-ಬೆಂಗಳೂರು ಯೋಜನೆಗೆ ಆರಂಭದಲ್ಲಿ 2,500 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ವಿಳಂಬ ಮತ್ತು ಇತರೆ ಕಾರಣಗಳಿಂದ ವೆಚ್ಚ ದುಪ್ಪಟ್ಟಾಗಿದೆ. ಆದರೆ ಕುಟ್ಟನಾಡ್-ಪಾಲಕ್ಕಾಡ್ ನಡುವಿನ ವಿಸ್ತರಣೆಯು ಈಗಿನಿಂದ ಯಾವಾಗ ಬೇಕಾದರೂ ಪೂರ್ಣಗೊಳ್ಳಲಿದ್ದು, ಜನವರಿ ವೇಳೆಗೆ ವಲಯಾರ್‌ವರೆಗೆ ಮತ್ತು ಮಾರ್ಚ್‌ ವೇಳೆಗೆ ಕೊಯಮತ್ತೂರಿನಲ್ಲಿ 280 ಕಿ.ಮೀ. ಉದ್ದದವರೆಗೆ ಪೂರ್ಣಗೊಳ್ಳಲಿದೆ.

Kochi To Banglore Gail Gas Pipeline To Be Ready By Jan

ಈ ಮಾರ್ಗವು ತಮಿಳುನಾಡಿನ ಏಳು ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಕೊಚ್ಚಿಯಿಂದ ಶುರುವಾಗಿ ಕೊಯಮತ್ತೂರು, ಈರೋಡ್, ಸೇಲಂ, ತಿರುಪುರ್, ಕೃಷ್ಣಗಿರಿ, ಧರ್ಮಗಿರಿ ಮತ್ತು ಹೊಸೂರು ಮೂಲಕ ಬೆಂಗಳೂರಿಗೆ ತಲುಪುತ್ತದೆ. ಕೃಷ್ಣಗಿರಿ ವಿಸ್ತರಣೆಯು ಬಹುತೇಕ ಪೂರ್ಣಗೊಂಡಿದ್ದರೆ, ವಲಯಾರ್-ಕೊಯಮತ್ತೂರು ನಡುವೆ ಅಂತಿಮ ಕೆಲಸ ನಡೆಯುತ್ತಿದೆ ಎಂದು ಮುರುಗೇಶನ್ ಹೇಳಿದ್ದಾರೆ.

English summary
Gail India, which completed the Kochi-Mangalore gas pipeline last week after long delays, is hopeful of completing the first leg of the Kochi-Bengaluru line in January
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X