ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಸಂಖ್ಯೆಗಳ ಅಂಕಿ 10 ರಿಂದ 13ಕ್ಕೇರಿಕೆ ಏಕೆ?

By Mahesh
|
Google Oneindia Kannada News

Recommended Video

ಮೊಬೈಲ್ ನಂಬರ್ 10 ಅಂಕಿಯಿಂದ 13 ಅಂಕಿಗೆ ಬದಲಾಗುತ್ತಾ? | Oneindia Kannada

ಬೆಂಗಳೂರು, ಫೆಬ್ರವರಿ 21: ನೆಟ್‌ವರ್ಕ್ ಕಂಪನಿಗಳಿಗೆ ಮೊಬೈಲ್ ಸಂಖ್ಯೆಗಳನ್ನು 13ಕ್ಕೆ ಏರಿಸಲು ದೂರಸಂಪರ್ಕ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಈಗಿರುವ ಮೊಬೈಲ್ ಸಂಖ್ಯೆಗೆ ಹೆಚ್ಚುವರಿಯಾಗಿ ಮೂರು ಅಂಕಿಗಳನ್ನು ಸೇರಿಸಲು ಟೆಲಿಕಾಂ ಇಲಾಖೆ ನಿರ್ದೇಶನ ನೀಡಲು ಮುಂದಾಗಿರುವ ಸುದ್ದಿ ಬಂದಿದೆ.

ಮೊಬೈಲ್ ಸಂಖ್ಯೆಗಳ 10 ಅಂಕಿಗಳನ್ನು 13ಕ್ಕೆ ಏರಿಸಲು ಭಾರತೀಯ ದೂರವಾಣಿ ಇಲಾಖೆ(DoT) ನಿರ್ಧರಿಸಿದೆ. ಮುಂದಿನ ಜುಲೈ 1ರಿಂದ ಈಗಿರುವ 10 ಸಂಖ್ಯೆಗಳ ಬದಲಾಗಿ 13 ಅಂಕಿಗಳ ಮೊಬೈಲ್ ಸಂಖ್ಯೆ ಜಾರಿಗೆ ಬರಲಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಸುತ್ತೋಲೆ ಹೊರಡಿಸಿಲ್ಲ.

ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ ನಿಗಮ ನಿಯಮಿತ(ಬಿಎಸ್‌ಎನ್ಎಲ್) ಕೂಡಾ 2018ರ ಡಿಸೆಂಬರೊಳಗೆ 13 ಸಂಖ್ಯೆಗಳನ್ನು ನೀಡಲು ಮುಂದಾಗಿದೆ. ಅಕ್ಟೋಬರ್ 1ರಿಂದ ಡಿಸೆಂಬರ್ 31ರೊಳಗೆ ಈ ಬದಲಾವಣೆ ಪ್ರಕ್ರಿಯೆ ನಡೆಯಿದೆ ಎಂದು ಹಿರಿಯ ಆಧಿಕಾರಿಯೊಬ್ಬರು ತಿಳಿಸಿದರು.

Know Why Will have a 13-digit mobilephone number

ಬೃಹತ್ ನೆಟ್‌ವರ್ಕ್ ಜಾಲ ಹೊಂದಿರುವ ವೊಡಾಫೋನ್, ಜಿಯೋ, ಐಡಿಯಾ ಕಂಪನಿಗಳಿಗೂ ಈ ಬಗ್ಗೆ ಐಡಿಯಾ ಇಲ್ಲ ಎಂದು ಹೇಳಿವೆ. ಪ್ರಸಾರ ಖಾತೆ ಸಚಿವಾಲಯಯಿಂದ ಟ್ರಾಯ್ ಗೆ ಬರೆದಿರುವ ಪತ್ರದಲ್ಲಿ ಸಿಮ್ ಆಧಾರಿತ ಎಂ2ಎಂ ಸಾಧನಗಳಿಗೆ 13 ಅಂಕಿಗಳ ಮೊಬೈಲ್ ಸಂಖ್ಯೆ ಬಳಸಲು ಅನುಮತಿ ನೀಡಲು ಸೂಚನೆ ಇದೆ.

ಚೀನಾದಲ್ಲಿ ಸದ್ಯ 11 ಅಂಕಿಗಳ ಮೊಬೈಲ್ ಸಂಖ್ಯೆ ಬಳಸಲಾಗುತ್ತಿದೆ. ಉಳಿದಂತೆ ಫ್ರೆಂಚ್ ನ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಅಂಕಿಗಳುಳ್ಳ ಮೊಬೈಲ್ ಸಂಖ್ಯೆ ಬಳಕೆಯಲ್ಲಿದೆ. ಈಗ ಭಾರತ ಕೂಡಾ ಈ ಸಾಲಿಗೆ ಸೇರಲಿದೆ.

English summary
The Department of Telecom (DoT) had reportedly issued a directive to all the telecom operators in India, asking them to start issuing 13-digit mobile numbers to customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X