ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ಮಾರಾಟ: ವಿವಾದದಲ್ಲಿ ವಿನೀತಾ ಹೆಸರು- ಯಾರು ಈ ಭಾರತೀಯ ಮೂಲದ ಮಹಿಳೆ?

|
Google Oneindia Kannada News

ನವದೆಹಲಿ, ಮೇ 8: ಎಲಾನ್ ಮಸ್ಕ್ 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂ) ಹಣಕ್ಕೆ ಟ್ವಿಟ್ಟರ್ ಖರೀದಿಸುತ್ತಿರುವುದು ಗೊತ್ತಿರುವ ವಿಚಾರ. ಈ ಖರೀದಿಯಲ್ಲಿ ವಿವಿಧ ಸಂಸ್ಥೆಗಳಿಂದ ಮಸ್ಕ್ ಅವರು ಹಣ ಹೊಂದಿಸುತ್ತಿದ್ಧಾರೆ. ತಮ್ಮ ಸ್ವಂತ ಹಣವನ್ನೂ ಹೂಡುತ್ತಿದ್ಧಾರೆ. ಈಗ ಹೊಸದಾಗಿ 7.5 ಬಿಲಿಯನ್ ಡಾಲರ್ (ಸುಮಾರು 57 ಸಾವಿರ ಕೋಟಿ ರೂಪಾಯಿ) ಹಣ ಹೊಂದಿಸುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಅಮೆರಿಕದ ಬಂಡವಾಳ ಹೂಡಿಕೆ ಸಂಸ್ಥೆಯಾದ ಆಂಡ್ರೀಸೆನ್ ಹೋರೋವಿಜ್ (Andreessen Horowitz) 400 ಮಿಲಿಯನ್ ಡಾಲರ್ (3 ಸಾವಿರ ಕೋಟಿ ರೂಪಾಯಿ) ಹಣ ಹೂಡಲು ಒಪ್ಪಿಕೊಂಡಿದೆ. ವಿನೀತಾ ಅಗರ್ವಾಲ್ ಈ ಕಂಪನಿಗೆ ಜನರಲ್ ಪಾರ್ಟ್ನರ್ ಆಗಿದ್ಧಾರೆ. ಈಗ ಈಕೆಯ ಮೇಲೆ ಹಿತಾಸಕ್ತಿ ಘರ್ಷಣೆ (Conflict of Interest) ಆರೋಪ ಎದುರಾಗಿದೆ. ಟ್ವಿಟ್ಟರ್ ಜೊತೆಗೆ ಈಕೆಯ ಹೆಸರೂ ಟ್ರೆಂಡಿಂಗ್‌ನಲ್ಲಿದೆ.

ವಿನೀತಾ ಅಗರ್ವಾಲ್ ಹೆಸರು ಟ್ರೆಂಡಿಂಗ್‌ನಲ್ಲಿ ಇರಲು ಇದೊಂದೇ ಕಾರಣವಲ್ಲ. ಈಕೆ ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಪತ್ನಿ. ಇದೇ ಕಾರಣಕ್ಕೆ ಹಿತಾಸಕ್ತಿ ಘರ್ಷಣೆಯ ಪ್ರಶ್ನೆ ಉದ್ಭವವಾಗುತ್ತಿದೆಯಾ ಎಂಬುದು ಸ್ಪಷ್ಟವಾಗಿಲ್ಲ. ಥೆರಪ್ಯೂಟಿಕ್ಸ್, ಲೈಫ್ ಸೈನ್ಸ್ ಟೂಲ್‌ಗಳು, ಡಿಜಿಟಲ್ ಹೆಲ್ತ್ ಇತ್ಯಾದಿ ಕ್ಷೇತ್ರಗಳಲ್ಲಿ ಆಂಡ್ರೀಸೆನ್ ಹೊರೋವಿಜ್ ಸಂಸ್ಥೆಯ ಹೆಲ್ತ್ ಫಂಡ್‌ನಲ್ಲಿ ವಿನೀತಾ ಅಗರ್ವಾಲ್ ವೈಯಕ್ತಿಕವಾಗಿ ಸಾಕಷ್ಟು ಹೂಡಿಕೆ ಹಾಕಿದ್ದಾರೆ. ಇದು ಹಿತಾಸಕ್ತಿ ಘರ್ಷಣೆಗೆ ಎಡೆ ಮಾಡಿಕೊಟ್ಟಿದೆಯಾ ಎಂದು ವರದಿಗಳಲ್ಲಿ ಸ್ಪಷ್ಟವಾಗಿಲ್ಲ.

ಟ್ವೀಟ್‌ಗೆ ಬೆಲೆ ಕಟ್ಟಲಿರುವ ಮಸ್ಕ್; ಟ್ವಿಟ್ಟರ್ ಎಲ್ಲರಿಗೂ ಫ್ರೀ ಇರಲ್ಲಟ್ವೀಟ್‌ಗೆ ಬೆಲೆ ಕಟ್ಟಲಿರುವ ಮಸ್ಕ್; ಟ್ವಿಟ್ಟರ್ ಎಲ್ಲರಿಗೂ ಫ್ರೀ ಇರಲ್ಲ

ವಿನೀತಾ ಪಾರ್ಟ್ನರ್ ಆಗಿರುವ ಆಂಡ್ರೀಸೆನ್ ಹೋರೋವಿಜ್ ಸಂಸ್ಥೆ ಫೇಸ್‌ಬುಕ್‌ನಲ್ಲಿ ಬಹಳಷ್ಟು ಹೂಡಿಕೆ ಮಾಡಿದೆ. ಓಕುಲಸ್ ವಿಆರ್ (Oculus VR) ಸೇರಿದಂತೆ ಹಲವು ಕಂಪನಿಗಳಲ್ಲಿ ಇದು ಹೂಡಿಕೆ ಮಾಡಿದ್ದು ಈ ಹಿಂದೆ ಫೇಸ್‌ಬುಕ್‌ನಲ್ಲಿ ಹಿತಾಸಕ್ತಿ ಘರ್ಷಣೆಯ ಕಾನೂನು ಸಮಸ್ಯೆಗೆ ಕಾರಣವಾಗಿತ್ತು. ಯಾಕೆಂದರೆ, ಈ ಸಂಸ್ಥೆ ಹೂಡಿಕೆ ಮಾಡಿದ ಓಕುಲಸ್ ವಿಆರ್ ಆನ್ನು ಫೇಸ್‌ಬುಕ್ ಖರೀದಿ ಮಾಡಿದ್ದು ಇದಕ್ಕೆ ಕಾರಣವಾಗಿತ್ತೆನ್ನಲಾಗಿದೆ. ಇದೀಗ ಟ್ವಿಟ್ಟರ್ ವಿಚಾರದಲ್ಲಿ ಹಿತಾಸಕ್ತಿ ಘರ್ಷಣೆಗೆ ಕಾರಣವಾಗುವ ಅಂಶಗಳೇನಾದರೂ ಇದೆಯಾ ಎಂದು ಆಂಡ್ರೀಸನ್ ಹೋರೋವಿಜ್ ಸಂಸ್ಥೆ ತನ್ನ ಕಾನೂನು ಸಲಹೆಗಾರರೊಂದಿಗೆ ಸಮಾಲೋಚಿಸುತ್ತಿದೆ. ಟ್ವಿಟ್ಟರ್‌ನಲ್ಲಿ ಹೂಡಿಕೆ ವಿಚಾರದಲ್ಲಿ ಆಂಡ್ರೀಸನ್ ಹೋರೋವಿಜ್ ಸಂಸ್ಥೆಗೆ ಹಿತಾಸಕ್ತಿ ಘರ್ಷಣೆ ಸಮಸ್ಯೆ ಎದುರಾಗುತ್ತಿರುವ ಕಾರಣಕ್ಕೆ ಆ ಸಂಸ್ಥೆಯ ಜನರಲ್ ಪಾರ್ಟ್ನರ್ ವಿನೀತಾ ಅವರಿಗೂ ಕಾನ್‌ಫ್ಲಿಕ್ಟ್ ಆಫ್ ಇಂಟರೆಸ್ಟ್ ಎದುರಾಗಿರಬಹುದು.

know why Vineeta Agarwala is in news in Twitter deal

ಯಾರು ಈ ವಿನೀತಾ ಅಗರ್ವಾಲ್?
ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಪತ್ನಿ ವಿನೀತಾ ಮೂಲತಃ ವೈದ್ಯೆ ಮತ್ತು ವಿಜ್ಞಾನಿ ಮತ್ತು ಬಂಡವಾಳ ಹೂಡಿಕೆಗಾರ್ತಿ. ಸ್ಟಾನ್‌ಫೋರ್ಡ್ ವಿವಿಯಲ್ಲಿ ಬಯೋಫಿಸಿಕ್ಸ್‌ನಲ್ಲಿ ಬಿಎಸ್ ಮಾಡಿದ್ದಾರೆ. ಹಾರ್ವರ್ಡ್, ಎಂಐಟಿಯಲ್ಲಿ ಎಂಡಿ ಮತ್ತು ಪಿಎಚ್‌ಡಿ ಮಾಡಿದ್ಧಾರೆ. ಕಂಪ್ಯೂಟೇಶನಲ್ ಬಯೋಲಜಿ ಮತ್ತು ಹ್ಯೂಮನ್ ಜೆನೆಟಿಕ್ಸ್‌ನಲ್ಲಿ ಪದವಿ ಮಾಡಿದ್ದಾರೆ.

ಟ್ವಿಟ್ಟರ್‌ನಿಂದ ಸಿಇಒ ಪರಾಗ್ ಹೊರಕ್ಕೆ; ಮಸ್ಕ್ ರಹಸ್ಯ ಪ್ಲಾನ್ ಸೋರಿಕೆಟ್ವಿಟ್ಟರ್‌ನಿಂದ ಸಿಇಒ ಪರಾಗ್ ಹೊರಕ್ಕೆ; ಮಸ್ಕ್ ರಹಸ್ಯ ಪ್ಲಾನ್ ಸೋರಿಕೆ

ಕೈರೂಸ್‌ನಲ್ಲಿ ಡಾಟಾ ಸೈಂಟಿಸ್ಟ್‌ನಿಂದ ಆರಂಭಗೊಂಡ ಗೂಗಲ್ ವೆಂಚರ್ಸ್ ಲೈಫ್ ಸೈನ್ಸಸ್ ತಂಡದಲ್ಲಿ ಬಂಡವಾಳ ಹೂಡಿಕೆಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕೆಲವೊಂದಿಷ್ಟು ಲ್ಯಾಬ್ ಕಂಪನಿಗಳಲ್ಲಿ ಅಕಾಡೆಮಿಕ್ ಸಂಶೋಧಕರೊಂದಿಗೆ ಸೇರಿ ಕೆಲಸ ಮಾಡಿದ್ದಾರೆ.

know why Vineeta Agarwala is in news in Twitter deal

ಇದೀಗ ಇವರ ಪತಿ ಪರಾಗ್ ಅಗರ್ವಾಲ್ ಟ್ವಿಟ್ಟರ್ ಸಿಇಒ ಆಗಿದ್ದು, ಎಲಾನ್ ಮಸ್ಕ್ ಬಂದ ನಂತರ ಅವರು ಸ್ಥಾನ ತ್ಯಜಿಸಬೇಕಾಗಬಹುದು ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಎಲಾನ್ ಮಸ್ಕ್ ಟ್ವಿಟ್ಟರ್ ಕಾರ್ಯನಿರ್ವಹಣೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಯೋಜಿಸಿದ್ಧಾರೆ. ಟ್ವಿಟ್ಟರ್ ಮ್ಯಾನೇಜ್ಮೆಂಟ್ ಬಗ್ಗೆ ಮೊದಲಿಂದಲೂ ಅವರು ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದ್ಧಾರೆ. ಹೀಗಾಗಿ, ಸಿಇಒ ಬದಲಾವಣೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
With world's richest man Elon Musk taking over the microblogging site Twitter, one name that has emerged prominently is that of Vineeta Agarwala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X