ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ಎಫೆಕ್ಟ್: ಮಸ್ಕ್ ಒಡೆತನದ ಮತ್ತೊಂದು ಕಂಪನಿಗೆ 10 ಲಕ್ಷಕೋಟಿ ನಷ್ಟ

|
Google Oneindia Kannada News

ನವದೆಹಲಿ, ಏ. 27: ಎಲಾನ್ ಮಸ್ಕ್ ಅವರು ಹಠಕ್ಕೆ ಬಿದ್ದವರಂತೆ ಟ್ವಿಟ್ಟರ್ ಖರೀದಿ ಮಾಡಿ ಗೆಲುವಿನ ನಗೆ ಬೀರಿದ್ದೇನೋ ಹೌದು. ಅದರ ಪರಿಣಾಮವಾಗಿ ಅವರ ಇನ್ನೊಂದು ಪ್ರಮುಖ ಕಂಪನಿ ಟೆಸ್ಲಾ ನಿನ್ನೆ ಷೇರುಪೇಟೆಯಲ್ಲಿ ಭಾರೀ ನಷ್ಟ ಅನುಭವಿಸಿತು. ಟ್ವಿಟ್ಟರ್ ಮಾರಾಟ ಅಂತಿಮಗೊಳ್ಳುತ್ತಿದ್ದಂತೆಯೇ ಅಮೆರಿಕದ ಷೇರುಪೇಟೆಯಲ್ಲಿ ಟೆಸ್ಲಾದ ಷೇರುಮೌಲ್ಯ ಶೇ. 12.2ರಷ್ಟು ಕುಸಿದಿದೆ. ಅಂದರೆ, ಕಂಪನಿ 126 ಬಿಲಿಯನ್ ಡಾಲರ್, ಅಂದರೆ ಹತ್ತಿರಹತ್ತಿರ 10 ಲಕ್ಷಕೋಟಿ ರೂಪಾಯಿ ಹಣ ಕಳೆದುಕೊಂಡಿದೆ.

ಟ್ವಿಟ್ಟರ್ ಖರೀದಿ ಪ್ರಕ್ರಿಯೆಯಲ್ಲಿ ಟೆಸ್ಲಾ ಪಾತ್ರ ಏನೂ ಇರಲಿಲ್ಲ. ಎಲಾನ್ ಮಸ್ಕ್ ವೈಯಕ್ತಿಕವಾಗಿ ಸೋಷಿಯಲ್ ಮೀಡಿಯಾ ತಾಣವನ್ನು ಖರೀದಿಸಿದ್ದರು. ಆದರೂ ಟೆಸ್ಲಾ ಷೇರುಗಳು ನಿನ್ನೆ ಕಡಿಮೆ ಬೆಲೆಗೆ ಬಿಕರಿಯಾಗಿದ್ದು ಯಾಕೆ ಎಂದು ಹಲವರು ಅಚ್ಚರಿ ಪಟ್ಟಿರಬಹುದು.

ಟ್ವಿಟ್ಟರ್ ಸಮಸ್ಯೆಗೆ ಪರಿಹಾರ ರೂಪವೇ ಹೊಸ ಮಾಲೀಕ: ಟ್ವಿಟ್ಟರ್ ಸ್ಥಾಪಕ ಟ್ವಿಟ್ಟರ್ ಸಮಸ್ಯೆಗೆ ಪರಿಹಾರ ರೂಪವೇ ಹೊಸ ಮಾಲೀಕ: ಟ್ವಿಟ್ಟರ್ ಸ್ಥಾಪಕ

ಟೆಸ್ಲಾ ಷೇರುಗಳು ಕುಸಿಯಲು ಏನು ಕಾರಣ?
ಟೆಸ್ಲಾ ಕಂಪನಿ ಎಲಾನ್ ಮಸ್ಕ್ ಒಡೆತನ ಮೊದಲ ಸಂಸ್ಥೆ. ಆದರೆ ಟ್ವಿಟ್ಟರ್ ಅನ್ನು ಮಸ್ಕ್ ವೈಯಕ್ತಿಕವಾಗಿಯೇ ಖರೀದಿ ಮಾಡಿದ್ದಾರೆ. ಅದಕ್ಕಾಗಿ 44 ಬಿಲಿಯನ್ ಡಾಲರ್, ಅಂದರೆ ಸರಿಸುಮಾರು 3.36 ಲಕ್ಷಕೋಟಿ ರೂ ಹಣಕ್ಕೆ ಈ ವ್ಯವಹಾರ ನಡೆದಿದೆ. ಇಷ್ಟು ಹಣವನ್ನು ಮಸ್ಕ್ ವೈಯಕ್ತಿಕವಾಗಿ ಹೇಗೆ ಹೊಂದಿಸುತ್ತಾರೆ? ಮಾರ್ಗನ್ ಸ್ಟಾನ್ಲೀ ಎಂಬ ಅಗ್ರಗಣ್ಯ ಹಣಕಾಸು ಸಂಸ್ಥೆ 25 ಬಿಲಿಯನ್ ಡಾಲರ್ ಹಣದ ವ್ಯವಸ್ಥೆ ಮಾಡಲಿದೆ. ಉಳಿದ 21 ಬಿಲಿಯನ್ ಡಾಲರ್ ಹಣವನ್ನು ಈಕ್ವಿಟಿ ಫೈನಾನ್ಸಿಂಗ್ ಮೂಲಕ ವ್ಯವಸ್ಥೆ ಮಾಡುವುದಾಗಿ ಮಸ್ಕ್ ಹೇಳಿದ್ದಾರೆ. ಅಂದರೆ, 1.6 ಲಕ್ಷಕೋಟಿ ರೂ ಹಣವನ್ನು ಈಕ್ವಿಟಿ ಫೈನಾನ್ಸಿಂಗ್ ಮೂಲಕ ಟ್ವಿಟ್ಟರ್‌ಗೆ ತರಲಿದ್ದಾರೆ. ಆದರೆ, ಈಕ್ವಿಟಿ ಫೈನಾನ್ಸಿಂಗ್ ಎಂದರೆ ಯಾವುದರ ಮೂಲಕ ಎಂದು ಅವರು ಸ್ಪಷ್ಟಪಡಿಸಿಲ್ಲ.

Know why Tesla lost 10 lakh crore after Elon Musks twitter deal

ಎಲಾನ್ ಮಸ್ಕ್ ಅವರ ಬಳಿ 3 ಬಿಲಿಯನ್ ಡಾಲರ್ ಹಣ ಮಾತ್ರ ಕ್ಯಾಷ್ ರೂಪದಲ್ಲಿ ಇರುವುದು. ಅದು ಬಿಟ್ಟರೆ ಟೆಸ್ಲಾ ಮೊದಲಾದ ಕಂಪನಿಗಳಲ್ಲಿನ ಷೇರುಗಳಲ್ಲಿ 257 ಬಿಲಿಯನ್ ಡಾಲರ್ (ಸುಮಾರು 20 ಲಕ್ಷಕೋಟಿ ರೂ) ಹಣ ಹೊಂದಿದ್ದಾರೆ. ಈಗ ಟ್ವಿಟ್ಟರ್ ಖರೀದಿಗೆ ಅವರು ಮಾಡಲಿರುವ 21 ಬಿಲಿಯನ್ ಡಾಲರ್ ಹಣವನ್ನು ಹೇಗೆ ವ್ಯವಸ್ಥೆ ಮಾಡುತ್ತಾರೆಂಬುದೇ ಕುತೂಹಲ. ಈ ವಿಚಾರವೇ ಟೆಸ್ಲಾ ಕಂಪನಿಯ ಷೇರುದಾರರನ್ನ ಕಾಡುತ್ತಿರುವುದು. ಮಸ್ಕ್ ಅವರು ವೈಯಕ್ತಿಕವಾಗಿ ಟ್ವಿಟ್ಟರ್‌ಗೆ ಹಣದ ವ್ಯವಸ್ಥೆ ಮಾಡಬೇಕಾದರೆ ಅವರು ಟೆಸ್ಲಾದಲ್ಲಿರುವ ತಮ್ಮ ವೈಯಕ್ತಿಕ ಷೇರುಗಳನ್ನ ಮಾರಬೇಕಾಗುತ್ತದೆ.

Know why Tesla lost 10 lakh crore after Elon Musks twitter deal

ಈ ಹಿನ್ನೆಲೆಯಲ್ಲಿ ಟೆಸ್ಲಾ ಷೇರುದಾರರು ಆತಂಕಕ್ಕೊಳಗಾಗಿ ಕಂಪನಿಯ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಅನಿಶ್ಚಿತವಾಗಬಹುದು ಎಂದು ಹೆದರಿ ಕಡಿಮೆ ಬೆಲೆಗೆ ಷೇರುಗಳನ್ನ ಮಾರಿದ್ದಿರಬಹುದು. ನಿನ್ನೆ ಷೇರುಪೇಟೆಯಲ್ಲಿ ಟೆಸ್ಲಾ ಷೇರುಗಳು 126 ಬಿಲಿಯನ್ ಡಾಲರ್‌ನಷ್ಟು ಮೌಲ್ಯ ಕುಸಿತ ಕಂಡಿವೆ. ಇದರಲ್ಲಿ ಎಲಾನ್ ಮಸ್ಕ್ ಅವರಿಗೆ ಸೇರಿದ ಷೇರುಗಳನ್ನ ಗಣಿಸಿದರೆ ಅವರಿಗೆ 21 ಬಿಲಿಯನ್ ಡಾಲರ್ ನಷ್ಟವಾಗಿದೆ. ಕಾಕತಾಳೀಯವೋ ಎಂಬಂತೆ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಗೆ ವೈಯಕ್ತಿಕವಾಗಿ ವ್ಯವಸ್ಥೆ ಮಾಡಬೇಕೆಂದಿರುವ ಹಣದ ಪ್ರಮಾಣ ಕೂಡ 21 ಬಿಲಿಯನ್ ಡಾಲರ್ ಆಗಿದೆ.

Know why Tesla lost 10 lakh crore after Elon Musks twitter deal

ಬಿದ್ದಿರುವುದು ಟೆಸ್ಲಾ ಷೇರು ಮಾತ್ರ ಅಲ್ಲ:
ಅಮೆರಿಕದ ಷೇರುಪೇಟೆ ನಾಸ್‌ಡಾಕ್‌ನಲ್ಲಿ ಟೆಸ್ಲಾ ಕಂಪನಿಯ ಷೇರುಗಳು ಮಾತ್ರವಲ್ಲ ಹಲವು ತಂತ್ರಜ್ಞಾನ ಕಂಪನಿಗಳ ಷೇರುಗಳೂ ಕುಸಿತ ಕಂಡಿವೆ. ರಷ್ಯಾ ಉಕ್ರೇನ್ ಯುದ್ಧ, ಜಾಗತಿಕ ಆರ್ಥಿಕ ಹಿಂಜರಿತ ಇತ್ಯಾದಿ ಕಾರಣಕ್ಕೆ ಜನರು ತಮ್ಮ ಹೂಡಿಕೆಯನ್ನ ಹಿಂಪಡೆಯುವ ತರಾತುರಿ ತೋರುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲೇ ನಾಸ್ಡಾಕ್ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಆದರೆ, ಎಲ್ಲಾ ಕಂಪನಿಗಳಿಗಿಂತ ಟೆಸ್ಲಾ ಕಂಪನಿಯ ಷೇರುಗಳು ಪ್ರಪಾತಕ್ಕೆ ಧುಮುಕಿದಂತೆ ವೇಗವಾಗಿ ಕುಸಿದಿರುವುದು ಗಮನಾರ್ಹ.

(ಒನ್ಇಂಡಿಯಾ ಸುದ್ದಿ)

English summary
Tesla Inc lost $126 billion in value on Tuesday amid investor concerns that Chief Executive Elon Musk may have to sell shares to fund his $21 billion equity contribution to his $44 billion buyout of Twitter Inc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X