ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಪರ್ ಸ್ಟಾರ್ ರಜನಿ ಸಿನ್ಮಾ ವಿರುದ್ಧ ತಿರುಗಿಬಿದ್ದ ಟೆಲಿಕಾಂ ಆಪರೇಟರ್ಸ್

|
Google Oneindia Kannada News

ಬೆಂಗಳೂರು, ನವೆಂಬರ್ 28: ಸೂಪರ್​ ಸ್ಟಾರ್ ರಜನಿಕಾಂತ್​ ಹಾಗೂ ಬಾಲಿವುಡ್​ ಸ್ಟಾರ್​ ಅಕ್ಷಯ್​ ಕುಮಾರ್​ ಅಭಿನಯದ 2.0 ಸಿನಿಮಾ ಬಿಡುಗಡೆಗೂ ಮುನ್ನ ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರದಿಂದ ಸಾರ್ಜಜನಿಕರಿಗೆ ಕೆಟ್ಟ ಸಂದೇಶ ರವಾನೆಯಾಗಲಿದೆ, ಈ ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ ಟೆಲಿಕಾಂ ಟವರ್ ಕಂಪನಿಗಳು, ಸೆನ್ಸಾರ್​ ಮಂಡಳಿ ಮೊರೆ ಹೋಗಿವೆ.

ಈ ಸಿನಿಮಾದಲ್ಲಿ ಮೊಬೈಲ್​ಗಳು ಹಾಗೂ ಸಿಗ್ನಲ್​ ಟವರ್​ನಿಂದ ವಿಕಿರಣಗಳು ಹೊರಹೊಮ್ಮಿ ಅದು ಮನುಷ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಟೆಲಿಕಾಂ ಟವರ್ ಕಂಪನಿಗಳು ಆರೋಪಿಸಿವೆ.

ಈ ಚಿತ್ರಕ್ಕೆ ನೀಡಿರುವ ಸೆನ್ಸಾರ್ ಪ್ರಮಾಣ ಪತ್ರವನ್ನು ಹಿಂಪಡೆಯಬೇಕು. ಈ ಸಮಸ್ಯೆ ಇತ್ಯರ್ಥವಾಗುವ ತನಕ ಸಿನಿಮಾ ಬಿಡುಗಡೆ ಮಾಡಬಾರದು ಎಂದು Cellular Operators Association of India (COAI) ಆಗ್ರಹಿಸಿದೆ.

ಟೆಲಿಕಾಂ ಆಪರೇಟರ್ಸ್ ಗಳ ವಿರೋಧ

ಟೆಲಿಕಾಂ ಆಪರೇಟರ್ಸ್ ಗಳ ವಿರೋಧ

ಸಿನಿಮಾಟೋಗ್ರಾಫ್ ಕಾಯ್ದೆ 1952 ಉಲ್ಲಂಘನೆಯಾಗಿದೆ, ಐಪಿಸಿ ಸೆಕ್ಷನ್ 268, 505, 499 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸಿಒಎಐ ಆಗ್ರಹಿಸಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ಪಾತ್ರವು ಸೆಲ್ ಫೋನ್ ಗಳ ವಿರುದ್ಧ ಸಮರ ಸಾರುವುದನ್ನು ಕಾಣಬಹುದು. ರಜನಿಕಾಂತ್ ಅವರು ಚಿಟ್ಟಿ ಹೆಸರಿನ ರೋಬೋ ಹಾಗೂ ಡಾ. ವಸೀಗರನ್ ಆಗಿ ಕಾಣಿಸಿಕೊಂಡಿದ್ದಾರೆ. ಶಂಕರ್ ನಿರ್ದೇಶನದ ಚಿತ್ರವು ನವೆಂಬರ್ 28ರಂದು ತೆರೆ ಕಾಣಲು ಸಿದ್ಧವಾಗಿದೆ.

ಜಿಯೋ, ವೋಡಾಫೋನ್, ಏರ್ಟೆಲ್ ನಿಂದ ವಿರೋಧ

ಜಿಯೋ, ವೋಡಾಫೋನ್, ಏರ್ಟೆಲ್ ನಿಂದ ವಿರೋಧ

ರಿಲಯನ್ಸ್ ಜಿಯೋ, ಭಾರ್ತಿ ಏರ್ ಟೆಲ್ ಹಾಗೂ ವೋಡಾಫೋನ್ ಐಡಿಯಾ ಕೂಡಾ ಈ ಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸೂಪರ್ ಸ್ಟಾರ್ ಸಿನಿಮಾವು ಸಾರ್ವಜನಿಕರ ಮೇಲೆ ಭಾರಿ ಪರಿಣಾಮ ಬೀರುವ ನಿರೀಕ್ಷೆ ಇದ್ದೇ ಇರುತ್ತೆ. ಸೆಲ್ ಫೋನ್, ಮೊಬೈಲ್ ಟವರ್ ನಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಪ್ಪು ಸಂದೇಶ ಸಾರುವುದು ಎಷ್ಟು ಸರಿ ಎಂದು ವಕ್ತಾರರು ಹೇಳಿದ್ದಾರೆ.

ಚಿತ್ರದ ಟ್ರೇಲರ್ ನೋಡಿ ಬೆಚ್ಚಿದ ಕಂಪನಿಗಳು

ಚಿತ್ರದ ಟ್ರೇಲರ್ ನೋಡಿ ಬೆಚ್ಚಿದ ಕಂಪನಿಗಳು

ಮೊಬೈಲ್​ ಟವರ್​ಗಳು ಹಾಗೂ ಮೊಬೈಲ್​ನಿಂದ ಹೊರಹೊಮ್ಮುವ ವಿಕಿರಣಗಳು ಪಕ್ಷಿಗಳಿಗೆ, ಮಕ್ಕಳಿಗೆ ಹಾಗು ಇನ್ನು ಕೆಲವು ಮಾನವ ಚಟುವಟಿಕೆಗಳಿಗೆ ಅಪಾಯಕಾರಿ ಎಂಬ ತಪ್ಪು ಕಲ್ಪನೆ ಇದೆ. 2.0 ಸಿನಿಮಾ ಅದನ್ನೇ ಪ್ರತಿಪಾದಿಸುತ್ತಿದೆ ಹಾಗಾಗಿ ನಾವು ಸೆನ್ಸಾರ್​ ಮಂಡಳಿ ಮೊರೆ ಹೋಗಿದ್ದೇವೆ ಎಂದು ಮಾಥಿವ್​ ಅವರು ತಿಳಿಸಿದ್ದಾರೆ.

ಸೆಲ್ಯುಲಾರ್​ ಆಪರೇಟರ್ಸ್​ ಅಸೋಸಿಯೇಷನ್​ ಆಫ್​ ಇಂಡಿಯಾ

ಸೆಲ್ಯುಲಾರ್​ ಆಪರೇಟರ್ಸ್​ ಅಸೋಸಿಯೇಷನ್​ ಆಫ್​ ಇಂಡಿಯಾ

2.0 ಸಿನಿಮಾ ಬಿಡುಗಡೆಗೆ ತಡೆ ಕೋರಲಾಗಿದೆ. ಚಿತ್ರಕ್ಕೆ ನೀಡಿರುವ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ಹಿಂಪಡೆಯಬೇಕು, ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟ್ರೇಲರ್​ನ ಲಿಂಕ್​ಗಳನ್ನು ಅಂತರ್ಜಾಲದಿಂದ ತೆಗೆದುಹಾಕಬೇಕು ಎಂದು ಸೆಲ್ಯುಲಾರ್​ ಆಪರೇಟರ್ಸ್​ ಅಸೋಸಿಯೇಷನ್​ ಆಫ್​ ಇಂಡಿಯಾ (ಸಿಒಎಐ) ಮಹಾ ನಿರ್ದೇಶಕ ರಂಜನ್​ ಮಾಥಿವ್​ ಅವರು ಆಗ್ರಹಿಸಿದ್ದಾರೆ.

English summary
The Cellular Operators Association of India (COAI) raised objections on Tuesday and said that the promotional videos of the big-budget movie show mobile phones and towers in a bad light.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X