ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ ಕಾಮರ್ಸ್ ಮಿಂತ್ರಾ ಸಂಸ್ಥೆ ಲೋಗೋ ಬದಲಾಗಿದೆ ಏಕೆ?

|
Google Oneindia Kannada News

ಮುಂಬೈ, ಜನವರಿ 31: ಇ ಕಾಮರ್ಸ್ ಕ್ಷೇತ್ರದ ದೈತ್ಯ ಫ್ಲಿಫ್ ಕಾರ್ಟ್ ಒಡೆತನದ ಫ್ಯಾಷನ್ ಇ ರಿಟೇಲರ್ ಮಿಂತ್ರಾ ತನ್ನ ಲೋಗೋವನ್ನು ಅಧಿಕೃತವಾಗಿ ಬದಲಾಯಿಸಿಕೊಂಡಿದೆ. ಈ ಬದಲಾವಣೆಗೆ ಕಾರಣವಾಗಿದ್ದು ಸಾಮಾಜಿಕ ಕಾರ್ಯಕರ್ತೆ ನಾಜ್ ಪಟೇಲ್.

ಈ ಹಿಂದಿನ ಮಿಂತ್ರಾ ಲೋಗೋ ಮಹಿಳೆಯರಿಗೆ ಅವಮಾನ ಮಾಡುವ ರೀತಿಯಲ್ಲಿತ್ತು ಎಂದು ಕಳೆದ ತಿಂಗಳು ಪೊಲೀಸರಿಗೆ ದೂರು ನೀಡಲಾಗಿತ್ತು. ಜೊತೆಗೆ ಮಿಂತ್ರಾ ಸಂಸ್ಥೆಗೂ ಈ ಬಗ್ಗೆ ತಿಳಿಸಲಾಗಿತ್ತು.

ಮಹಿಳಾ ಸಂಘಟನೆಗಳ ಆಕ್ಷೇಪಕ್ಕೆ ಸಮ್ಮತ ವ್ಯಕ್ತಪಡಿಸಿದ ಮಿಂತ್ರಾ ಸಂಸ್ಥೆ ತನ್ನ ಲೋಗೋದಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಈಗ ವೆಬ್ ಸೈಟ್, ಆಪ್, ಪ್ಯಾಕೇಜಿಂಗ್ ಪದಾರ್ಥ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಹೊಸ ಲೋಗೋ ಕಾಣಿಸಿಕೊಂಡಿದೆ.

Know why Myntra changed its logo brands signage after complaint

ಏನಿದು ಪ್ರಕರಣ: ಹಳೆ ಲೋಗೋ ನೋಡಿದರೆ ಮಹಿಳೆಯೊಬ್ಬರು ನಗ್ನವಾಗಿ ಕಾಲು ಚಾಚಿ ಮಲಗಿಕೊಂಡಂತೆ ಭಾಸವಾಗುತ್ತಿದ್ದು, ಈ ಬಗ್ಗೆ ದೂರುಗಳು ಕೇಳಿ ಬಂದಿದ್ದರಿಂದ ಸರ್ಕಾರೇತರ ಸಂಸ್ಥೆ ಅವೆಸ್ತಾ ಫೌಂಡೇಷನ್ ಈ ವಿಷಯವನ್ನು ಪೊಲೀಸ್ ಠಾಣೆ ತನಕ ತೆಗೆದುಕೊಂಡು ಹೋಗಬೇಕಾಯಿತು.

ಅವೆಸ್ತಾ ಸಂಸ್ಥೆಯ ನಾಜ್ ಪಟೇಲ್ ಅವರು ಡಿಸೆಂಬರ್ ತಿಂಗಳಲ್ಲಿ ಮುಂಬೈ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ, ಸೂಕ್ತ ವಿವರ ಪಡೆದುಕೊಂಡ ಪೊಲೀಸರು ಇಮೇಲ್ ಮೂಲಕವೇ ಮಿಂತ್ರಾ ಸಂಸ್ಥೆಗೆ ಚುರುಕು ಮುಟ್ಟಿಸಿದ್ದರು. ಈ ಕುರಿತಂತೆ ಮಿಂತ್ರಾ-ಫ್ಲಿಪ್ ಕಾರ್ಟ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಸಭೆ ಸೇರಿ ಚರ್ಚಿಸಿ, ಲೋಗೋ ಬದಲಾಯಿಸಲು ನಿರ್ಧರಿಸಿದರು.

ಲೋಗೋ ಬದಲಾವಣೆಗೆ ಒಪ್ಪಿ ಮಿಂತ್ರಾ ಇಮೇಲ್ ಮೂಲಕವೇ ಅಧಿಕೃತ ಪ್ರತಿಕ್ರಿಯೆ ನೀಡಿದೆ ಎಂದು ಸೈಬರ್ ಕ್ರೈಂ ವಿಭಾಗದ ಡಿಸಿಪಿ ರಶ್ಮಿ ಕರಂಡಿಕರ್ ಹೇಳಿದ್ದಾರೆ.

English summary
Fashion e-tailer Myntra is changing its logo following a complaint by a Mumbai-based activist who alleged that the brand's signage was offensive towards women. When contacted, Myntra confirmed the development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X