ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸ ಬಿಡುತ್ತಿರುವ ಉದ್ಯೋಗಿಗಳು: ಸಂಬಳ ಹೆಚ್ಚಳಕ್ಕೆ ಮುಂದಾದ ಐಟಿ ಕಂಪನಿಗಳು

|
Google Oneindia Kannada News

ಹಲವು ಭಾರತೀಯ ಐಟಿ ಮತ್ತು ಸಾಫ್ಟ್‌ವೇರ್ ಕಂಪನಿಗಳು ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಗಣನೀಯವಾಗಿ ಕ್ಷೀಣತೆ ದರಗಳನ್ನು ಹೊಂದಿದ್ದು, ಹೆಚ್ಚಿನ ನೌಕರರು ತಮ್ಮ ಉದ್ಯೋಗಗಳನ್ನು ತೊರೆಯುತ್ತಿದ್ದಾರೆ. ಉದ್ಯೋಗಿಗಳು ಕೆಲಸ ಬಿಡುತ್ತಿರುವುದು ಐಟಿ ಕಂಪನಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಉದ್ಯೋಗಿಗಳು ಕೆಲಸ ಬಿಡುವುದನ್ನು ತಪ್ಪಿಸಲು ಹಲವಾರು ಐಟಿ ಕಂಪನಿಗಳು ವೇತನ ಹೆಚ್ಚಳ ಮತ್ತು ಬೋನಸ್ ಪಾವತಿಯಂತಹ ಕ್ರಮಗಳನ್ನು ತೆಗೆದುಕೊಂಡಿದೆ. ಈ ಕಂಪನಿಗಳಲ್ಲಿ ವಿಪ್ರೋ, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಸೇರಿವೆ. ಸೆಪ್ಟೆಂಬರ್‌ನಲ್ಲಿ ಕಾರ್ಮಿಕರಿಗೆ ವೇತನ ಹೆಚ್ಚಳವಾಗಲಿದೆ ಎಂದು ವಿಪ್ರೋ ಘೋಷಿಸಿದೆ.

ಉದ್ಯೋಗಿಗಳಿಗೆ ಶೇಕಡ 10 ರಷ್ಟು ವೇತನ ಹೆಚ್ಚಳಕ್ಕೆ ಮುಂದಾದ ಭಾರತದ ಕಂಪನಿಗಳುಉದ್ಯೋಗಿಗಳಿಗೆ ಶೇಕಡ 10 ರಷ್ಟು ವೇತನ ಹೆಚ್ಚಳಕ್ಕೆ ಮುಂದಾದ ಭಾರತದ ಕಂಪನಿಗಳು

ವರ್ಕ್‌ ಫ್ರಂ ಹೋಂ ಮುಗಿದು ಬಹುತೇಕ ಎಲ್ಲಾ ನೌಕರರು ಕಚೇರಿಗೆ ಮರಳುತ್ತಿದ್ದು, ಈ ಸಂದರ್ಭದಲ್ಲೇ ಉದ್ಯೋಗಿಗಳು ಕೆಲಸ ತ್ಯಜಿಸುತ್ತಿದ್ದಾರೆ. ಸಂಬಳವನ್ನು ಹೆಚ್ಚಿಸುವ ಮೂಲಕ, ಬೋನಸ್‌ಗಳನ್ನು ನೀಡುವ ಮೂಲಕ ಮತ್ತು ಇತರ ಪ್ರಯೋಜನಗಳನ್ನು ಒದಗಿಸುವ ಮೂಲಕ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಭಾರತದ ಐಟಿ ಕಂಪನಿಗಳು ಪ್ರಯತ್ನ ನಡೆಸುತ್ತಿವೆ. ಮಾತ್ರವಲ್ಲದೆ ಭಾರತದ ಬಹುತೇಕ ಖಾಸಗಿ ಕಂಪನಿಗಳು 2023ರಲ್ಲಿ ತಮ್ಮ ನೌಕರರಿಗೆ ಶೇಕಡ 10ರಷ್ಟು ಸಂಬಳ ಹೆಚ್ಚಿಸುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ.

 ಉದ್ಯೋಗಿಗಳ ವೇತನ ಹೆಚ್ಚಿಸಲಿರುವ ವಿಪ್ರೋ

ಉದ್ಯೋಗಿಗಳ ವೇತನ ಹೆಚ್ಚಿಸಲಿರುವ ವಿಪ್ರೋ

ಮಿಂಟ್‌ನ ವರದಿಯ ಪ್ರಕಾರ, ವಿಪ್ರೋ ಪರಿಹಾರ ಹೆಚ್ಚಳದ ಉದ್ದೇಶಗಳು ಬದಲಾಗಿಲ್ಲ, ಸೆಪ್ಟಂಬರ್ ತಿಂಗಳಿನಿಂದ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡುವುದಾಗಿ ಹೇಳಿದೆ.

"ಸಂಬಳ ಹೆಚ್ಚಳದ ಕುರಿತು ನಾವು ಈ ಮೊದಲು ನೀಡಿದ್ದ ಹೇಳಿಕೆಯಲ್ಲಿಯಾವುದೇ ಬದಲಾವಣೆ ಇಲ್ಲ, ಸೆಪ್ಟೆಂಬರ್ 1, 2022 ರಿಂದ ನಮ್ಮ ಉದ್ಯೋಗಿಗಳಿಗೆ ಹೆಚ್ಚಳವು ಜಾರಿಗೆ ಬರಲಿದೆ. ನಾವು ಜುಲೈ 1, 2022 ರಿಂದ ಜಾರಿಗೆ ಬರುವ ತ್ರೈಮಾಸಿಕ ಪ್ರಗತಿಗಳ ಮೊದಲ ಅವಧಿಯನ್ನು ಸಹ ಪೂರ್ಣಗೊಳಿಸಿದ್ದೇವೆ. ಕ್ವಾಂಟಮ್ ಆಫ್ ವೇರಿಯಬಲ್ ಪೇ ಕುರಿತು ನಾವು ಯಾವುದೇ ಹೆಚ್ಚಿನ ದೂರುಗಳನ್ನು ಹೊಂದಿಲ್ಲ", ಎಂದು ವಿಪ್ರೋ ಪತ್ರಿಕೆಯು ಉಲ್ಲೇಖಿಸಿದೆ.

 7th Pay Commission: ಸರ್ಕಾರಿ ನೌಕರರ ಕಾಯುವಿಕೆ ಶೀಘ್ರದಲ್ಲೇ ಅಂತ್ಯ! 7th Pay Commission: ಸರ್ಕಾರಿ ನೌಕರರ ಕಾಯುವಿಕೆ ಶೀಘ್ರದಲ್ಲೇ ಅಂತ್ಯ!

 ಎಲ್ಲಾ ನೌಕಕರನ್ನು ಗಣನೆಗೆ ತೆಗೆದುಕೊಳ್ಳಲಿ

ಎಲ್ಲಾ ನೌಕಕರನ್ನು ಗಣನೆಗೆ ತೆಗೆದುಕೊಳ್ಳಲಿ

ವೇತನ ಹೆಚ್ಚು ಮಾಡುವ ವೇಳೆ ಕೆಲವು ನಿರ್ದಿಷ್ಟ ನೌಕರರ ಗುಂಪುಗಳನ್ನುಗಣನೆಗೆ ತೆಗೆದುಕೊಳ್ಳುವುದಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.

"ವಿಪ್ರೋ ತನ್ನ ಉದ್ಯೋಗಿಗಳಿಗೆ ಜುಲೈನಿಂದ ಹಲವಾರು ಬಡ್ತಿಗಳನ್ನು ನೀಡಲಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮಧ್ಯಮ-ನಿರ್ವಹಣೆ ಮಟ್ಟದ ನೌಕರರಿಗೆ ತ್ರೈಮಾಸಿಕ ಬಡ್ತಿಗಳನ್ನು ನೀಡಲು ನಿರ್ಧರಿಸಿದೆ. ವಿಪ್ರೋ ಸೆಪ್ಟೆಂಬರ್‌ನಲ್ಲಿ ವೇತನ ಹೆಚ್ಚಿಸುವ ನಿರೀಕ್ಷೆಯಿದೆ" ಎಂದು ಐಟಿ ಮೇಜರ್ ಈ ಹಿಂದೆ ಹೇಳಿದ್ದರು.

 ಇನ್ಫೋಸಿಸ್ ತೊರೆಯುತ್ತಿರುವ ನೌಕರರು

ಇನ್ಫೋಸಿಸ್ ತೊರೆಯುತ್ತಿರುವ ನೌಕರರು

ಇನ್ಫೋಸಿಸ್ ಸಂಸ್ಥೆಯಲ್ಲಿ ಕ್ಷೀಣತೆ ದರವು ಇನ್ನೂ ಹೆಚ್ಚಿದೆ, ಆದರೆ ಪ್ರಮುಖ ಐಟಿ ಸಂಸ್ಥೆಯಾದ ಇನ್ಫೋಸಿಸ್ ಸಂಬಳವನ್ನು ಹೆಚ್ಚಿಸುತ್ತಿದೆ ಮತ್ತು ನೇಮಕಾತಿಯನ್ನು ಸಹ ಹೆಚ್ಚಿಸಬಹುದು, ಇದು ಕಂಪನಿಯ ಅಲ್ಪಾವಧಿಯ ಲಾಭದ ಪ್ರಮಾಣದ ಮೇಲೆ ಪರಿಣಾಮ ಬೀರಬಹುದು. ಜೂನ್ 2022 ರಲ್ಲಿ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಉದ್ಯೋಗಿಗಳು ಕೆಲಸ ಬಿಡುವ ಪ್ರಮಾಣ ಶೇಕಡ 27.7 ರಿಂದ ಶೇಕಡ 28.4 ಕ್ಕೆ ಏರಿತು. ಇನ್ಫೋಸಿಸ್ ಅಟ್ರಿಷನ್ ದರವನ್ನು ಕಡಿಮೆ ಮಾಡಲು ಯೋಜಿಸಿದೆ.

ಇನ್ಫೋಸಿಸ್‌ನ ಮುಖ್ಯ ಹಣಕಾಸು ಅಧಿಕಾರಿ ನಿಲಂಜನ್ ರಾಯ್, "ನಾವು ನೇಮಕಾತಿ ಮತ್ತು ಸ್ಪರ್ಧಾತ್ಮಕ ಪರಿಹಾರ ಪರಿಷ್ಕರಣೆಗಳ ಮೂಲಕ ಗುಣಮಟ್ಟದ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಬೆಳವಣಿಗೆಯನ್ನು ಹೆಚ್ಚಿಸಲು ಯೋಜನೆ ರೂಪಿಸಿದ್ದೇವೆ. ಇದು ತಕ್ಷಣದ ಅವಧಿಯಲ್ಲಿ ಕಂಪನಿ ಮೇಲೆ ಪರಿಣಾಮ ಬೀರುತ್ತದೆಯಾದರೂ, ಇದು ಕ್ಷೀಣತೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಭವಿಷ್ಯದ ಬೆಳವಣಿಗೆಗೆ ಉತ್ತಮ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ." ಎಂದು ಹೇಳಿದರು.

 ವೇತನ ಹೆಚ್ಚಳಕ್ಕೆ ಮುಂದಾದ ಟಿಸಿಎಸ್‌

ವೇತನ ಹೆಚ್ಚಳಕ್ಕೆ ಮುಂದಾದ ಟಿಸಿಎಸ್‌

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು ಶೇಕಡ 19.7 ನಷ್ಟು ಹೆಚ್ಚಿನ ಕ್ಷೀಣತೆ ದರವನ್ನು ಹೊಂದಿರುವುದರಿಂದ, ಭಾರತದ ಅತಿದೊಡ್ಡ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಸಿಬ್ಬಂದಿ ವೇತನವನ್ನು ಶೇಕಡ 5 ರಿಂದ 8 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ.

ಟಿಸಿಎಸ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಾಡ್ 8 ಪ್ರತಿಶತದವರೆಗೆ ವೇತನ ಹೆಚ್ಚಿಸುವುದಾಗಿ ಘೋಷಿಸಿದರು. "ನಮ್ಮ ವಾರ್ಷಿಕ ಪರಿಹಾರ ಪರಿಶೀಲನೆಯನ್ನು ಅನುಸರಿಸಿ, ಉದ್ಯೋಗಿಗಳು ಶೇಕಡಾ 5 ರಿಂದ 8 ರಷ್ಟು ವೇತನ ಹೆಚ್ಚಳವನ್ನು ಪಡೆಯುತ್ತಾರೆ, ಉತ್ತಮವಾಗಿ ಕೆಲಸ ಮಾಡಿದವರು ಇನ್ನೂ ದೊಡ್ಡ ಹೆಚ್ಚಳವನ್ನು ಪಡೆಯುತ್ತಾರೆ. ನಮ್ಮ ಸಬಲೀಕರಣ, ಕಾರ್ಯಕ್ಷಮತೆ-ಚಾಲಿತ ಕೆಲಸದ ಸಂಸ್ಕೃತಿಯು ನಮ್ಮ ಎಲ್ಲಾ ಪ್ರಮುಖ ಮಾರುಕಟ್ಟೆಗಳಲ್ಲಿ ಸ್ಥಳೀಯ ಪ್ರತಿಭಾವಂತ ಉದ್ಯೋಗಿಗಳನ್ನು ಆಕರ್ಷಿಸಲು ನಮಗೆ ಸಹಾಯ ಮಾಡುತ್ತಿದೆ", ಎಂದು ಹೇಳಿದ್ದಾರೆ.

Recommended Video

KL Rahul ಮಾಡಿದ ತ್ಯಾಗದಿಂದ ಟೀಂ‌ ಇಂಡಿಯಾ ಗೆದ್ದಿದ್ದು ಹೇಗೆ ಗೊತ್ತಾ? | *Cricket | OneIndia Kannada

English summary
With more individuals leaving their jobs In Many Indian IT and software companies, attrition rates will increasing. Numerous IT companies have made measures to solve this issue, including wage increases and bonus payments to retain employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X