ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಇನ್ಮುಂದೆ WeTransfer ಬಳಕೆ ನಿಷೇಧ ಏಕೆ?

|
Google Oneindia Kannada News

ನವದೆಹಲಿ, ಮೇ 31: ದೇಶದ ಭದ್ರತಾ ಹಿತಾಸಕ್ತಿಯಿಂದ ಜನಪ್ರಿಯ ಫೈಲ್ ಹಂಚಿಕೆ ತಾಣ ವೀ ಟ್ರಾನ್ಸ್ ಫರ್ ಡಾಟ್ ಕಾಂ ಬಳಕೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಭಾರತೀಯ ದೂರ ಸಂಪರ್ಕ ಇಲಾಖೆಯ ಸೂಚನೆ ಮೇರೆಗೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಜನಪ್ರಿಯ ಫೈಲ್ ಶೇರಿಂಗ್ ತಾಣಕ್ಕೆ ನಿಷೇಧ ಹೇರಲಾಗಿದೆ.

ಜೋರಾಯ್ತು ಟಿಕ್ ಟಾಕ್ ಬ್ಯಾನ್ ಸದ್ದು: ಇಳಿಕೆಯಾಯ್ತು ರೇಟಿಂಗ್ಜೋರಾಯ್ತು ಟಿಕ್ ಟಾಕ್ ಬ್ಯಾನ್ ಸದ್ದು: ಇಳಿಕೆಯಾಯ್ತು ರೇಟಿಂಗ್

ವಿ ಟ್ರಾನ್ಸ್ ಫರ್ ಯುಆರ್ ಎಲ್ ಅನ್ನು ಸಂಪೂರ್ಣ ನಿಷೇಧಿಸಿ, ಇನ್ನೆರಡು ಯುಆರ್ ಎಲ್ ಬಳಕೆಯಲ್ಲಿ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿದೆ.

Know why Indian Govt banned popular file-sharing site WeTransfer

ವಿಶ್ವದೆಲ್ಲೆಡೆ ಲಕ್ಷಾಂತರ ಬಳಕೆದಾರರನ್ನು ಹೊಂದಿರುವ ವಿಟ್ರಾನ್ಸ್ ಫರ್ ವೆಬ್ ತಾಣ ಹಾಗೂ ಆಪ್ ಬಳಕೆಯಿಂದ . ಆದರೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟಾಗುತ್ತದೆ, ಈ ವೆಬ್ ತಾಣ ಬಳಕೆ ಸುರಕ್ಷಿತವಾಗಿಲ್ಲ ಎಂಬ ವರದಿಗಳು ಬಂದಿವೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಸರಿ ಸುಮಾರು 2 ಜಿಬಿ ತನಕ ಫೋಟೊ, ವಿಡಿಯೋ ಡೇಟಾ ಹಂಚಿಕೆ ಮಾಡಲು ವೀಟ್ರಾನ್ಸ್ ಫರ್ ಬಳಕೆ ಮಾಡಬಹುದಾಗಿದೆ. ಯಾರಿಗೆ ಕಳಿಸಬೇಕೋ ಅವರ ಇಮೇಲ್ ಐಡಿ ಹಾಕಿದರೆ ಸಾಕು, ಪ್ರತ್ಯೇಕ ಖಾತೆ ಹೊಂದುವ ಅಗತ್ಯವಿಲ್ಲ ಹಾಗೂ ಉಚಿತ ಸೌಲಭ್ಯವಾಗಿದೆ.

ವೀಟ್ರಾನ್ಸ್ ಫರ್ ಬಳಸಿ ಪೋರ್ನೋಗ್ರಾಫಿ, ಮಾಲ್ವೇರ್, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಡೇಟಾ ಹಂಚಿಕೆಯಾಗುತ್ತಿದೆ ಎಂಬ ದೂರು ಬಂದಿದೆ. ಆದರೆ, ವಿ ಟ್ರಾನ್ಸ್ ಫರ್ ಕೇವಲ ವಾಹಕವಷ್ಟೇ ಅಲ್ಲಿ ಹಂಚಿಕೆಯಾಗುವ ಡೇಟಾಗೂ ಸಂಸ್ಥೆಗೂ ಸಂಬಂಧವಿಲ್ಲ ಎಂದು ಸಮಜಾಯಿಷಿ ಸಿಕ್ಕಿದೆ.

English summary
The Department of Telecommunications (DoT) has banned the popular file-sharing site WeTransfer.com.Know why.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X