ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಪಿಸಿಎಲ್ ಮಾರಾಟ ಪ್ರಯತ್ನ ವಿಫಲ; ಸರಕಾರದ ಮುಂದಿನ ಆಯ್ಕೆ?

|
Google Oneindia Kannada News

ನವದೆಹಲಿ, ಮೇ 27: ಸರಕಾರಿ ಸ್ವಾಮ್ಯದ ತೈಲ ಸಂಸ್ಕರಣೆ ಮತ್ತು ಮಾರಾಟ ಸಂಸ್ಥೆಯಾದ ಭಾರತ್ ಪೆಟ್ರೋಲಿಯಮ್ ಕಾರ್ಪೊರೇಷನ್‌ನ (BPCL) ಖಾಸಗೀಕರಣಗೊಳಿಸುವ ಸರಕಾರದ ಪ್ರಯತ್ನಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ. ಬಿಪಿಸಿಎಲ್‌ನಲ್ಲಿ ಇರುವ ತನ್ನ ಪಾಲಿನ ಶೇ. 53ರಷ್ಟು ಪಾಲಿನ ಷೇರುಗಳನ್ನು ಸರಕಾರ ಸಂಪೂರ್ಣವಾಗಿ ಮಾರಾಟಕ್ಕಿಟ್ಟಿತ್ತು. ಅದರಲ್ಲಿ ಆಸಕ್ತಿ ತೋರಿದ್ದ ಮೂವರು ಬಿಡ್ಡರ್‌ಗಳ ಪೈಕಿ ಎರಡು ಹಿಂದಕ್ಕೆ ಸರಿದಿವೆ. ಇದರೊಂದಿಗೆ ಸರಕಾರ ಇಡೀ ಪ್ರಕ್ರಿಯೆಯನ್ನು ಸದ್ಯಕ್ಕೆ ನಿಲ್ಲಿಸಿದೆ. ಮುಂದಿನ ದಿನಗಳಲ್ಲಿ ಸಮಯ ನೋಡಿಕೊಂಡು ಬೇರೆ ಬೇರೆ ತಂತ್ರಗಾರಿಕೆಯಿಂದ ಮತ್ತೆ ಮಾರಾಟದ ಆಫರ್ ಮುಂದಿಡಲು ಸರಕಾರ ನಿರ್ಧರಿಸಿದೆ.

ಐ ಆಮ್‌ ಬ್ಯಾಕ್‌ ಎಂದು ಮತ್ತೆ ಬರುತ್ತಿದೆ ಅಂಬಾಸಿಡಾರ್‌ ಕಾರುಐ ಆಮ್‌ ಬ್ಯಾಕ್‌ ಎಂದು ಮತ್ತೆ ಬರುತ್ತಿದೆ ಅಂಬಾಸಿಡಾರ್‌ ಕಾರು

ಬಿಪಿಸಿಎಲ್‌ನಲ್ಲಿ ಸರಕಾರದ ಷೇರುಗಳು ಶೇ. 52.98 ಇದೆ. ಬಂಡವಾಳ ಹಿಂತೆಗೆತ ಅಥವಾ ಖಾಸಗೀಕರಣದ ತನ್ನ ನೀತಿಯ ಪ್ರಕಾರವಾಗಿ ಬಿಪಿಸಿಎಲ್ ಮಾರಾಟಕ್ಕೆ 2020 ಮಾರ್ಚ್ ತಿಂಗಳಲ್ಲಿ ಬಿಡ್ಡರ್‌ಗಳಿಂದ ಆಸಕ್ತಿ ತೋರ್ಪಡಿಕೆ (EoI- Expression of Interest) ಆಹ್ವಾನಿಸಿತು. ಐದಾರು ತಿಂಗಳಲ್ಲಿ ಮೂರು ಬಿಡ್ ಬಂದಿದ್ದವು. ಅನಿಲ್ ಅಗರ್ವಾಲ್ ಮಾಲಕತ್ವದ ವೇದಾಂತ ಗ್ರೂಪ್, ಅಮೆರಿಕದ ಹೂಡಿಕೆ ಸಂಸ್ಥೆ ಅಪೋಲೊ ಗ್ಲೋಬಲ್ ಮ್ಯಾನೇಜ್ಮೆಂಟ್ ಮತ್ತು ಐ ಸ್ಕ್ವಯರ್ಡ್ ಕ್ಯಾಪಿಟಲ್ ಅಡ್ವೈಸರ್ಸ್ (I Squared Capital Advisors) ಸಂಸ್ಥೆಗಳು ಬಿಪಿಸಿಎಲ್ ಖರೀದಿಗೆ ಆಸಕ್ತಿ ತೋರಿ ಬಿಡ್ ಸಲ್ಲಿಸಿದ್ದವು. ಆದರೆ, ಎರಡು ಕಂಪನಿಗಳು ಈಗ ತಮ್ಮ ಬಿಡ್‌ನಿಂದ ಹಿಂದಕ್ಕೆ ಸರಿದಿರುವ ಕಾರಣ ಬಿಡ್ ಪ್ರಕ್ರಿಯೆಯನ್ನೇ ನಿಲ್ಲಿಸಲಾಗಿದೆ.

ಖರೀದಿಯಿಂದ ವಿಮುಖವಾಗಲು ಕಾರಣ?

ಖರೀದಿಯಿಂದ ವಿಮುಖವಾಗಲು ಕಾರಣ?

ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ಪರಿಣಾಮವಾಗಿ ಸದ್ಯ ಜಾಗತಿಕವಾಗಿ ತೈಲ ಬೆಲೆಯಲ್ಲಿ ಸ್ಥಿರತೆ ಇಲ್ಲ. ರಷ್ಯಾ ಉಕ್ರೇನ್ ಯುದ್ಧ ಮೊದಲಾದ ಕಾರಣದಿಂದ ಭವಿಷ್ಯವೂ ಕೂಡ ಅನಿಶ್ಚಿತ ಸ್ಥಿತಿಯಲ್ಲಿದೆ. ಭಾರತದಲ್ಲಿ ಆಂತರಿಕವಾಗಿಯೂ ಇಂಧನ ದರದಲ್ಲಿ ಸ್ಪಷ್ಟತೆ ಇಲ್ಲ. ಹಲವು ಕಡೆ ಪರಿಸರ ಮಾಲಿನ್ಯದ ನಿರ್ಬಂಧಗಳಿವೆ. ಮುಂದಿನ ದಿನಗಳಲ್ಲಿ ತೈಲಕ್ಕೆ ಪರ್ಯಾಯವಾದ ಶಕ್ತಿಗೆ ಪ್ರಾಧಾನ್ಯತೆ ನೀಡುವ ನಿರೀಕ್ಷೆ ಇದೆ. ಇಂಥ ಸ್ಥಿತಿಯಲ್ಲಿ ಬಿಪಿಸಿಎಲ್ ಮೇಲೆ ದೊಡ್ಡ ಮೊತ್ತದ ಬಂಡವಾಳ ಹೂಡುವುದು ಹೇಗೆ ಎಂಬ ಸಂದಿಗ್ಧತೆಯಲ್ಲಿ ಸಂಸ್ಥೆಗಳು ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ: ಸಚಿವ ಮುರುಗೇಶ್ ನಿರಾಣಿರಾಜ್ಯದಲ್ಲಿ 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ: ಸಚಿವ ಮುರುಗೇಶ್ ನಿರಾಣಿ

ಬಿಪಿಸಿಎಲ್ ಕಂಪನಿ ಷೇರುದಾರರು ಯಾರು?

ಬಿಪಿಸಿಎಲ್ ಕಂಪನಿ ಷೇರುದಾರರು ಯಾರು?

ಇಂಡಿಯನ್ ಆಯಿಲ್ ಬಿಟ್ಟರೆ ಬಿಪಿಸಿಎಲ್ ಭಾರತದ ಅತಿದೊಡ್ಡ ತೈಲ ಮಾರಾಟ ಸಂಸ್ಥೆ ಎನಿಸಿದೆ. ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಇದರ ತೈಲಸಂಸ್ಕರಣ ಘಟಕಗಳಿವೆ. ರಿಲಾಯನ್ಸ್, ಇಂಡಿಯನ್ ಆಯಿಲ್ ಬಿಟ್ಟರೆ ಅತಿಹೆಚ್ಚು ತೈಲಸಂಸ್ಕರಣ ಸಾಮರ್ಥ್ಯ ಇರುವುದು ಬಿಪಿಸಿಎಲ್‌ಗೆಯೇ.
ಇದರ ಒಟ್ಟು ಆಸ್ತಿಮೌಲ್ಯ 1.41 ಲಕ್ಷಕೋಟಿ ಇದೆ. ಒಟ್ಟು ಆದಾಯ ಒಂದು ವರ್ಷದಲ್ಲಿ 3 ಲಕ್ಷಕೋಟಿ ಇದೆ. ಆದರೆ, ನಿವ್ವಳ ಆದಾಯ ಸುಮಾರು 19 ಸಾವಿರ ಕೋಟಿ ರೂ ಇದೆ.

ಸರಕಾರಿ ಸ್ವಾಮ್ಯದ ಈ ಸಂಸ್ಥೆಯಲ್ಲಿ ಭಾರತ ಸರಕಾರ ಶೇ. 52.98ರಷ್ಟು ಪಾಲು ಹೊಂದಿದೆ. ವಿವಿಧ ವಿದೇಶಿ ಹೂಡಿಕೆದಾರರು (FPI- Foreign Portfolio Investors) ಶೇ. 17ರಷ್ಟು ಪಾಲು ಹೊಂದಿವೆ. ಇನ್ನುಳಿದ ಷೇರುಗಳು ಮ್ಯೂಚುವಲ್ ಫಂಡ್, ಇನ್ಷೂರೆನ್ಸ್ ಕಂಪನಿಗಳು ಹಾಗೂ ವೈಯಕ್ತಿಕ ಷೇರುದಾರರ ಮಾಲಿಕತ್ವದಲ್ಲಿವೆ. ಷೇರುಪೇಟೆಯಲ್ಲಿ ಬಿಪಿಸಿಎಲ್‌ನ ಒಂದು ಷೇರಿನ ಬೆಲೆ ಸದ್ಯಕ್ಕೆ 325 ರೂ ಇದೆ.

ಬಿಪಿಸಿಎಲ್ ಬಿಡ್ಡಿಂಗ್ ಟೈಮ್‌ಲೈನ್

ಬಿಪಿಸಿಎಲ್ ಬಿಡ್ಡಿಂಗ್ ಟೈಮ್‌ಲೈನ್

2019 ನವೆಂಬರ್: ಬಿಪಿಸಿಎಲ್‌ನ ಖಾಸಗೀಕರಣಕ್ಕೆ ಕೇಂದ್ರ ಸಂಪುಟ ಅನುಮೋದನೆ
2020 ಮಾರ್ಚ್: ಬಿಡ್ಡರ್‌ಗಳಿಂದ ಆಸಕ್ತಿ ತೋರ್ಪಡಿಕೆಗೆ ಸರಕಾರ ಆಹ್ವಾನ
2020 ನವೆಂಬರ್: ಮೂರು ಸಂಸ್ಥೆಗಳಿಂದ ಬಿಪಿಸಿಎಲ್ ಖರೀದಿಗೆ ಆಸಕ್ತಿ ತೋರ್ಪಡಿಕೆ.
2021 ಏಪ್ರಿಲ್: ಬಿಪಿಸಿಎಲ್‌ನ ಹಣಕಾಸು ಪರಿಸ್ಥಿತಿ ಇತ್ಯಾದಿ ಮಾಹಿತಿ ಬಿಡ್ಡರ್‌ಗಳಿಗೆ ನೀಡಲಾಯಿತು.
2021 ಜುಲೈ: ಬಿಪಿಸಿಎಲ್‌ನಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅನುವಾಗಲು ಸಹಾಯವಾಗುವಂತೆ ಎಫ್‌ಡಿಎ ಮಿತಿಯನ್ನು ಹೆಚ್ಚಿಸಲಾಯಿತು.
2022 ಮೇ: ಎರಡು ಬಿಡ್ಡರ್‌ಗಳು ತಮ್ಮ ಬಿಡ್ ಹಿಂಪಡೆದುಕೊಂಡಿದ್ದರಿಂದ ಸರಕಾರ ಬಿಡಿಂಗ್ ಪ್ರಕ್ರಿಯೆಯನ್ನೇ ಸದ್ಯ ರದ್ದು ಮಾಡಿದೆ.

ಬೇರೆ ತಂತ್ರ

ಬೇರೆ ತಂತ್ರ

ಬಿಪಿಸಿಎಲ್‌ನಲ್ಲಿ ಸರಕಾರ ಹೊಂದಿರುವ ಶೇ. 53ರಷ್ಟು ಪಾಲನ್ನು ಖರೀದಿಸಲು ದೊಡ್ಡ ಮೊತ್ತದ ಬಂಡವಾಳ ಹಾಕಬೇಕಾಗುತ್ತದೆ. ಸದ್ಯದ ಅನಿಶ್ಚಿತ ಸ್ಥಿತಿಯಲ್ಲಿ ಅಷ್ಟು ಬಂಡವಾಳ ಹೂಡಲು ಯಾವುದೇ ಸಂಸ್ಥೆಯಾದರೂ ಹಿಂಜರಿಯುವುದು ಸಹಜ. ಎರಡು ಸಂಸ್ಥೆಗಳು ಬಿಡ್‌ನಿಂದ ಹೊರಬೀಳಲು ಇದೂ ಕಾರಣವಿರಬಹುದು ಎಂಬುದು ಸರಕಾರದ ಅಂದಾಜು. ಹೀಗಾಗಿ. ಸರಕಾರ ತನ್ನ ಎಲ್ಲಾ ಪಾಲನ್ನೂ ಮಾರುವುದರ ಬದಲು ಅರ್ಧದಷ್ಟು ಮಾತ್ರ ಮಾರಾಟ ಮಾಡಲು ಮುಂದಾಗಬಹುದು. ಅಂದರೆ ಶೇ. 26ರಷ್ಟು ಪಾಲನ್ನು ಮಾರುವ ನಿರ್ಧಾರಕ್ಕೆ ಸರಕಾರ ಬರಬಹುದು. ಶೇ. 26ರಷ್ಟು ಪಾಲು ಖರೀದಿಸಿದರೆ ಸಂಸ್ಥೆಯ ಮಾಲಿಕತ್ವವನ್ನೂ ವಹಿಸಲಾಗುತ್ತದೆ. ಅಂದರೆ, ಕಡಿಮೆ ಮೊತ್ತಕ್ಕೆ ಬಿಪಿಸಿಎಲ್‌ನ ಮಾಲಿಕತ್ವ ಪಡೆಯಲು ಸಾಧ್ಯವಾಗುತ್ತದೆ. ಸರಕಾರದ ಕೈಯಲ್ಲೂ ಶೇ.. 26ರಷ್ಟು ಪಾಲು ಇರುವುದರಿಂದ ಸಂಸ್ಥೆಯ ಕೆಲ ಪ್ರಮುಖ ನಿರ್ಧಾರಗಳಲ್ಲಿ ಸರಕಾರ ತುಸು ಹಸ್ತಕ್ಷೇಪ ಮಾಡುವ ಅವಕಾಶ ಇರುತ್ತದೆ.

ಸರಕಾರದ ಖಾಸಗೀಕರಣ ಪ್ರಕ್ರಿಯೆಯಲ್ಲಿ ಭಾಗಶಃ ಪಾಲನ್ನು ಮಾರಾಟ ಮಾಡುವ ತಂತ್ರ ಆರಂಭದಲ್ಲಿ ಅನುಸರಿಸಲಾಗುತ್ತಿತ್ತು. ಹಿಂದೂಸ್ತಾನ್ ಜಿಂಕ್ ಸಂಸ್ಥೆಯಲ್ಲಿ ತನ್ನ ಶೇ. 75 ಪಾಲು ಪೈಕಿ ಶೇ. 45ರಷ್ಟು ಪಾಲನ್ನು ವೇದಾಂತ ಸಂಸ್ಥೆಗೆ ಮಾರಿತ್ತು. ಸಂಸ್ಥೆಯ ಆಡಳಿತವನ್ನು ವೇದಾಂತಕ್ಕೆ ವಹಿಸಿದರೂ ಶೇ. 30ರಷ್ಟು ಪಾಲು ಸರಕಾರದ ಬಳಿಯೇ ಇದೆ. ಈಗ ಅದರ ಮೌಲ್ಯ 40 ಸಾವಿರ ಕೋಟಿ ರೂ ಗೂ ಹೆಚ್ಚಿದೆ.

ಈ ಪ್ರಯೋಗ ಏರ್ ಇಂಡಿಯಾ ಸಂಸ್ಥೆಯ ಮಾರಾಟ ವಿಚಾರದಲ್ಲಿ ಕೆಲಸ ಮಾಡಲಿಲ್ಲ. ತನ್ನ ಪಾಲಿನ ಎಲ್ಲಾ ಷೇರುಗಳನ್ನೂ ಮಾರಾಟಕ್ಕಿಟ್ಟ ಬಳಿಕವಷ್ಟೇ ವ್ಯವಹಾರ ಕುದುರಿದ್ದು, ಟಾಟಾ ಗ್ರೂಪ್ ಸಂಸ್ಥೆ ಏರ್ ಇಂಡಿಯಾಗೆ ಬಿಡ್ ಮಾಡಿ ಖರೀದಿಸಿದ್ದು.

ಮುಂದಿನ ದಾರಿ

ಮುಂದಿನ ದಾರಿ

ಭಾರತ್ ಪೆಟ್ರೋಲಿಯಂ ನಿಗಮ ಸಂಸ್ಥೆಯ ಖಾಸಗಿಕರಣ ಪ್ರಯತ್ನವನ್ನು ಸರಕಾರ ನಿಲ್ಲಿಸುವ ಸಂಭವ ಇಲ್ಲ. ಯಾವ ತಂತ್ರದಲ್ಲಿ ಮತ್ತೆ ಬಿಡ್ ಪ್ರಕ್ರಿಯೆ ಜಾರಿ ಮಾಡಬಹುದು ಎಂದು ಸಮಗ್ರವಾಗಿ ಅಧ್ಯಯನ ನಡೆಸಿದ ಬಳಿಕ ಸರಕಾರ ನಿರ್ಧಾರಕ್ಕೆ ಬರಲಿದೆ. ಸದ್ಯ ಇರುವ ಸಂಸ್ಥೆಯ ವಿವಿಧ ಹೂಡಿಕೆದಾರರು ಮತ್ತು ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಶೇ. 26ರಷ್ಟು ಪಾಲನ್ನು ಮಾತ್ರ ಮಾರಾಟಕ್ಕಿಟ್ಟು ಆಡಳಿತವನ್ನು ಒಪ್ಪಿಸುವ ನಿರೀಕ್ಷೆ ಇದೆ.

(ಒನ್ಇಂಡಿಯಾ ಸುದ್ದಿ)

English summary
The Centre has called off the privatisation process of BPCL for now after two of the three companies that had shown interest in acquiring withdrew their bids.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X