ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸದವರು ಏನು ಮಾಡಬೇಕು?

|
Google Oneindia Kannada News

2021-22 ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್‌ (ITR) ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಅಂತಿಮ ದಿನಾಂಕ ಸಮೀಪವಾಗುತ್ತಿದ್ದಂತೆ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಅನೇಕ ತೆರಿಗೆದಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದಾಯ ತೆರಿಗೆ ರಿಟರ್ನ್ ಅಂತಿಮ ದಿನಾಂಕವನ್ನು ವಿಸ್ತರಿಸಲು ಸಾಕಷ್ಟು ಮಂದಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಸರ್ಕಾರ ದಿನಾಂಕ ವಿಸ್ತರಣೆ ಮಾಡುವ ಮಾಡುವ ಸಾಧ್ಯತೆ ಕಡಿಮೆ ಇದೆ. ಜುಲೈ 31 ರ ಮೊದಲು ನೀವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ವಿಫಲವಾದರೆ ಏನಾಗುತ್ತದೆ? ಎನ್ನುವುದರ ವಿವರ ಇಲ್ಲಿದೆ.

ನಿಗದಿತ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ವಿಫಲರಾದ ತೆರಿಗೆದಾರರಿಗೆ ಮತ್ತೊಂದು ಅವಕಾಶ ಇರುತ್ತದೆ. ಡಿಸೆಂಬರ್ 31ರೊಳಗೆ ನೀವು ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಬಹುದು. ಆದರೆ ಇದಕ್ಕೆ ನೀವು ಶುಲ್ಕ ಪಾವತಿಸಬೇಕಾಗುತ್ತದೆ.

ಮೊಸರು, ಲಸ್ಸಿ ಮೇಲೆ ಜಿಎಸ್‌ಟಿ ತೆರಿಗೆ; ರಾಜ್ಯ ಸರ್ಕಾರಗಳಿಗೆ ಹೊಣೆ?ಮೊಸರು, ಲಸ್ಸಿ ಮೇಲೆ ಜಿಎಸ್‌ಟಿ ತೆರಿಗೆ; ರಾಜ್ಯ ಸರ್ಕಾರಗಳಿಗೆ ಹೊಣೆ?

ಜುಲೈ 31 ರ ನಂತರ ಸಲ್ಲಿಸುವ ಯಾವುದೇ ವಿಳಂಬವು 1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 234ಎ ಪ್ರಕಾರ ಆದಾಯ ತೆರಿಗೆ ರಿಟರ್ನ್‌ ಪಾವತಿಸಲು ಶುಲ್ಕವನ್ನು ವಿಧಿಸಲಾಗುತ್ತದೆ.

 ಅವಧಿ ಮೀರಿದರೆ ವಿಳಂಬ ಶುಲ್ಕ ಪಾವತಿ ಮಾಡಬೇಕು

ಅವಧಿ ಮೀರಿದರೆ ವಿಳಂಬ ಶುಲ್ಕ ಪಾವತಿ ಮಾಡಬೇಕು

ವಾರ್ಷಿಕ ಆದಾಯ 5 ಲಕ್ಷದವರೆಗೆ ಇರುವ ತೆರಿಗೆದಾರರಿಗೆ ವಿಳಂಬ ಶುಲ್ಕ 1,000 ರೂ. ನಿಮ್ಮ ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ 5,000 ರುಪಾಯಿ ದಂಡ ವಿಧಿಸಲಾಗುತ್ತದೆ. ನಿಮ್ಮ ಒಟ್ಟು ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಯನ್ನು ಮೀರದಿದ್ದರೆ ನೀವು ಯಾವುದೇ ದಂಡವನ್ನು ಪಾವತಿ ಮಾಡಬೇಕಿಲ್ಲ.

ಆದರೆ ಮೂಲ ವಿನಾಯಿತಿ ಮಿತಿಯು ಆದಾಯ ತೆರಿಗೆ ಆಡಳಿತವನ್ನು ಅವಲಂಬಿಸಿರುತ್ತದೆ. ಹೊಸ ಆಡಳಿತದಲ್ಲಿ, ಎಲ್ಲಾ ವಯೋಮಾನದವರಿಗೆ ವಿನಾಯಿತಿ ಮಿತಿಯು 2.5 ಲಕ್ಷ ರುಪಾಯಿ ಇದೆ. 2.5 ಲಕ್ಷ ರುಪಾಯಿಗಳಿಗಿಂತ ಕಡಿಮೆ ಆದಾಯ ಹೊಂದಿರುವ ಯಾವುದೇ ವಯೋಮಾನದವರು ತಡವಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ದಂಡ ಪಾವತಿ ಮಾಡುವಂತಿಲ್ಲ.

ತೆರಿಗೆ ಪಾವತಿಯಲ್ಲೂ ರಜನಿಕಾಂತ್ ಸೂಪರ್ ಸ್ಟಾರ್!: ತೆರಿಗೆ ಇಲಾಖೆಯಿಂದ ಸನ್ಮಾನತೆರಿಗೆ ಪಾವತಿಯಲ್ಲೂ ರಜನಿಕಾಂತ್ ಸೂಪರ್ ಸ್ಟಾರ್!: ತೆರಿಗೆ ಇಲಾಖೆಯಿಂದ ಸನ್ಮಾನ

 ತೆರಿಗೆ ಜೊತೆ ಬಡ್ಡಿಯನ್ನು ಪಾವತಿಸಬೇಕು

ತೆರಿಗೆ ಜೊತೆ ಬಡ್ಡಿಯನ್ನು ಪಾವತಿಸಬೇಕು

ಜುಲೈ 31, 2022 ರೊಳಗೆ ನೀವು ತೆರಿಗೆಯನ್ನು ಪಾವತಿಸದಿದ್ದರೆ ಬಾಕಿ ಇರುವ ಮೊತ್ತದ ಮೇಲೆ ಶೇಕಡಾ 1 ರಷ್ಟು ಬಡ್ಡಿ ವಿಧಿಸಲಾಗುತ್ತದೆ. ತೆರಿಗೆ ಮೊತ್ತವನ್ನು ತಪ್ಪಾಗಿ ಸಲ್ಲಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಗಣನೆಗೆ ಬರುವುದಿಲ್ಲ.

ಆದ್ದರಿಂದ, ಜುಲೈ 31 ರಿಂದ ಹಿಂದಿನಂತೆ, ತೆರಿಗೆದಾರರು ಬಾಕಿ ಇರುವ ತೆರಿಗೆಯನ್ನು ಬಡ್ಡಿಯೊಂದಿಗೆ ಠೇವಣಿ ಮಾಡಬೇಕಾಗುತ್ತದೆ. ಅಲ್ಲದೆ, ಬಾಕಿ ಇರುವ ತೆರಿಗೆಯನ್ನು ಯಾವುದೇ ತಿಂಗಳ 5 ನೇ ತಾರೀಖಿನಂದು ಅಥವಾ ನಂತರ ಪಾವತಿಸಿದರೆ, ಪೂರ್ಣ ತಿಂಗಳ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

 ಮುಂದಿನ ವರ್ಷಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ

ಮುಂದಿನ ವರ್ಷಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ

ನಿಗದಿತ ದಿನಾಂಕದೊಳಗೆ ನಿಮ್ಮ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸದಿದ್ದರೆ, ಪ್ರಸಕ್ತ ವರ್ಷದ ನಿಮ್ಮ ಆದಾಯದ ನಷ್ಟಗಳನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ವ್ಯಾಪಾರದ ಆದಾಯದ ಅಡಿಯಲ್ಲಿ ಉಂಟಾಗುವ ಯಾವುದೇ ನಷ್ಟ ಅಥವಾ ಬಂಡವಾಳ ಲಾಭ ಅಥವಾ ಮನೆ ಆಸ್ತಿಯ ಅಡಿಯಲ್ಲಿ ರೂ 2 ಲಕ್ಷಕ್ಕಿಂತ ಹೆಚ್ಚಿನ ನಷ್ಟವಾದರೆ ಅದನ್ನು ಮುಂದಿನ ವರ್ಷಕ್ಕೆ ಕೊಂಡೊಯ್ಯುವುದು ಸಾಧ್ಯವಿಲ್ಲ.

 ಡಿಸೆಂಬರ್ 31ರ ಬಳಿಕ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸದಿದ್ದರೆ?

ಡಿಸೆಂಬರ್ 31ರ ಬಳಿಕ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸದಿದ್ದರೆ?

ಒಂದು ವೇಳೆ ನೀವು ಡಿಸೆಂಬರ್ 31 ರ ಒಳಗಡೆಯೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸದಿದ್ದರೆ, ಮರುಪಾವತಿ ಮತ್ತು ಮುಂದಕ್ಕೆ ಸಾಗಿಸಲಾದ ನಷ್ಟಗಳಿಗಾಗಿ ನಿಮ್ಮ ವಾರ್ಡ್‌ನ ಆದಾಯ ತೆರಿಗೆ ಆಯುಕ್ತರಿಗೆ ನೀವು ಕ್ಷಮಾದಾನಕ್ಕಾಗಿ ಮನವಿಯನ್ನು ಸಲ್ಲಿಸಬೇಕಾಗುತ್ತದೆ.

ನವೀಕರಿಸಿದ ಆದಾಯಕ್ಕಾಗಿ ಹೊಸ ಫಾರ್ಮ್ ಐಟಿಆರ್ ಯು (ITR U) ಅನ್ನು ಬಳಸಬೇಕು ಮತ್ತು ನಿಮ್ಮ ಆದಾಯವನ್ನು ನವೀಕರಿಸಲು ಕಾರಣಗಳನ್ನು ನೀಡಬೇಕು.

ಆದಾಯ ತೆರಿಗೆ ಇಲಾಖೆಯ ಪ್ರಕಾರ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಜುಲೈ 25, 2022 ರವರೆಗೆ ಮೂರು ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲಾಗಿದೆ.

English summary
The due date to file Income Tax Returns (ITR) for the financial year 2021-22 is July 31. the government is unlikely to do extend the ITR due date. Taxpayers who miss the due date will still be able to file their ITR by the last date or the final deadline. The last date is December 31 but there's a catch. You will have to pay a fee. Know Full Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X