ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ ತನ್ನ ಗ್ರಾಹಕರಿಗೆ ಶುಲ್ಕ ವಿಧಿಸಿದ ಹಿಂದಿನ ರಹಸ್ಯವೇನು?

|
Google Oneindia Kannada News

ಜಿಯೋ ತನ್ನ ಗ್ರಾಹಕರಿಗೆ ಇತರ ಆಪರೇಟರುಗಳಿಗೆ ಮಾಡುವ ಮೊಬೈಲ್ ವಾಯ್ಸ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ವಿಧಿಸಿರುವುದು ತಿಳಿದಿರಬಹುದು. ಇಂಟರ್‌ಕನೆಕ್ಟ್ ಯೂಸೇಜ್ ಚಾರ್ಜ್ (ಐಯುಸಿ) ಕುರಿತು ರೂಪಿಸಲಾಗಿದ್ದ ಕಾನೂನು ರದ್ದುಗೊಳಿಸುವ ನಿಟ್ಟಿನಲ್ಲಿ ಜಿಯೋ ಹೆಜ್ಜೆ ಇಟ್ಟಿದೆ. ಇತರೆ ಆಪರೇಟರುಗಳಿಗೆ ಮಾಡುವ ಮೊಬೈಲ್ ವಾಯ್ಸ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಟರ್ಮಿನೇಶನ್ ಶುಲ್ಕವನ್ನು ಗ್ರಾಹಕರಿಂದ ಅನಿವಾರ್ಯವಾಗಿ ಹಿಂಪಡೆಯಲಿದೆ. ಇದಕ್ಕಾಗಿ ಐಯುಸಿ ಟಾಪ್-ಅಪ್ ವೋಚರ್‌ಗಳ ಮೂಲಕ ರೀಚಾರ್ಚ್ ಮಾಡಿಸಿಕೊಳ್ಳಬೇಕಿದೆ. ಐಯುಸಿ ಶುಲ್ಕ ಶೂನ್ಯಕ್ಕೆ ಇಳಿಯುವವರೆಗೆ ಮಾತ್ರವೇ ಈ ಕ್ರಮ ಚಾಲ್ತಿಯಲ್ಲಿರಲಿದ್ದು, ವಾಯ್ಸ್ ಕಾಲ್ ಮಾಡಲು ಐಯುಸಿ ಟಾಪ್ ಅಪ್ ವೋಚರ್ ರೀಚಾರ್ಜ್ ಮಾಡಿಸಿದರೆ, ಆ ಮೌಲ್ಯಕ್ಕೆ ಸಮಾನವಾದ ಡೇಟಾ ಪಡೆಯಲಿದ್ದಾರೆ, ಜೊತೆಗೆ ಜಿಯೋ ಗ್ರಾಹಕರ ಟ್ಯಾರಿಫ್‌ನಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ ಎಂದು ಸಂಸ್ಥೆ ಹೇಳಿದೆ.

ಒಂದು ನಿರ್ದಿಷ್ಟ ಮೊಬೈಲ್ ಸಂಸ್ಥೆಯ ಗ್ರಾಹಕರು ಬೇರೊಂದು ಸಂಸ್ಥೆಯ ಗ್ರಾಹಕರಿಗೆ ಹೊರಹೋಗುವ (ಔಟ್‌ಗೋಯಿಂಗ್) ಮೊಬೈಲ್ ಕರೆ ಮಾಡಿದಾಗ, ಕರೆ ಮಾಡಿದ ಗ್ರಾಹಕರ ಸಂಸ್ಥೆಯು ಎರಡನೇ ಸಂಸ್ಥೆಗೆ ನೀಡಬೇಕಾದ ಶುಲ್ಕವೇ ಇಂಟರ್‌ಕನೆಕ್ಟ್ ಯೂಸೇಜ್ ಚಾರ್ಜ್ ಅಥವಾ ಐಯುಸಿ. ಎರಡು ವಿಭಿನ್ನ ಜಾಲಗಳ ನಡುವಿನ ಈ ಕರೆಗಳನ್ನು ಮೊಬೈಲ್ ಆಫ್-ನೆಟ್ ಕರೆಗಳೆಂದು ಗುರುತಿಸಲಾಗುತ್ತದೆ. ಐಯುಸಿ ಶುಲ್ಕವನ್ನು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿಗದಿಪಡಿಸುತ್ತದೆ ಮತ್ತು ಸದ್ಯ ಅದು ಪ್ರತಿ ನಿಮಿಷಕ್ಕೆ 6 ಪೈಸೆಗಳಷ್ಟಿದೆ.

ಜಿಯೋ ಗ್ರಾಹಕರು ಇನ್ನು ವಾಯ್ಸ್ ಕಾಲ್ ಗೆ ದುಡ್ಡು ಕೊಡಬೇಕು, ಆದರೆ...ಜಿಯೋ ಗ್ರಾಹಕರು ಇನ್ನು ವಾಯ್ಸ್ ಕಾಲ್ ಗೆ ದುಡ್ಡು ಕೊಡಬೇಕು, ಆದರೆ...

ಐಯುಸಿ ಶುಲ್ಕ ಶೂನ್ಯಕ್ಕೆ ಇಳಿಯಬೇಕೆಂದು ತನ್ನ ಅಭಿಪ್ರಾಯ ಎಂದು ಟ್ರಾಯ್ 2011 ರಲ್ಲೇ ಹೇಳಿದೆ. ಸನ್ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಟ್ರಾಯ್ ಸಲ್ಲಿಸಿದ 29 ಅಕ್ಟೋಬರ್ 2011ರ ಅಫಿಡವಿಟ್ ನಲ್ಲಿ ಟರ್ಮಿನೇಶನ್ ಶುಲ್ಕಗಳು ಕಡಿಮೆಯಾಗುತ್ತ ಬಂದು ಅಂತಿಮವಾಗಿ ಸೊನ್ನೆ ಟರ್ಮಿನೇಶನ್ ಶುಲ್ಕವನ್ನು ತಲುಪಬೇಕು ಎಂದು ಉಲ್ಲೇಖಿಸಲಾಗಿದೆ.

2016ರಲ್ಲಿ ಟ್ರಾಯ್ ನೀಡಿದ ಮತ್ತೊಂದು ಅಫಿಡವಿಟ್ ನಲ್ಲಿ 1ನೇ ಅಕ್ಟೋಬರ್ 2017ರಿಂದ ಮೊಬೈಲ್ ಕರೆಗಳಿಗಾಗಿನ ಐಯುಸಿಯನ್ನು ಪ್ರತಿ ನಿಮಿಷಕ್ಕೆ 14 ಪೈಸೆಗಳಿಂದ ಪ್ರತಿ ನಿಮಿಷಕ್ಕೆ 6 ಪೈಸೆಗೆ ಇಳಿಸಲಾಯಿತು ಹಾಗೂ1ನೇ ಜನವರಿ 2020ರಿಂದ ಮೊಬೈಲ್ ಕರೆಗಳಿಗಾಗಿನ ಐಯುಸಿ ಶೂನ್ಯ ಆಗಿರಲಿದೆ ಎಂದು ಹೇಳಲಾಗಿದೆ.

2ಜಿ ಜಾಲಗಳಲ್ಲಿನ ಅತಿ ಹೆಚ್ಚಿನ ಟ್ಯಾರಿಫ್‌

2ಜಿ ಜಾಲಗಳಲ್ಲಿನ ಅತಿ ಹೆಚ್ಚಿನ ಟ್ಯಾರಿಫ್‌

ಜಿಯೋ ಜಾಲದಲ್ಲಿನ ಉಚಿತ ವಾಯ್ಸ್ ಹಾಗೂ 2ಜಿ ಜಾಲಗಳಲ್ಲಿನ ಅತಿ ಹೆಚ್ಚಿನ ಟ್ಯಾರಿಫ್‌ಗಳ ನಡುವಿನ ಬೆಲೆ ವ್ಯತ್ಯಾಸವು, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾದ 35-40 ಕೋಟಿ 2ಜಿ ಗ್ರಾಹಕರು ಜಿಯೋ ಗ್ರಾಹಕರಿಗೆ ಮಿಸ್ಡ್ ಕಾಲ್‌ಗಳನ್ನು ನೀಡಲು ಕಾರಣವಾಗುತ್ತದೆ. ಪ್ರತಿ ದಿನವೂ ಜಿಯೋ ಜಾಲಕ್ಕೆ 25ರಿಂದ 30 ಕೋಟಿ ಮಿಸ್ಡ್ ಕಾಲ್‌ಗಳು ಬರುತ್ತಿವೆ.

ಮಿಸ್ಡ್ ಕಾಲ್‌ಗಳ ಈ ಬೃಹತ್ ವಿದ್ಯಮಾನದಿಂದಾಗಿ, ಜಿಯೋಗೆ ಒಳಬರುವ ಕರೆಗಳು ಜಿಯೋದಿಂದ ಇತರ ಆಪರೇಟರ್‌ಗಳಿಗೆ ಹೊರಹೋಗುವ ಕರೆಗಳಾಗಿ ಪರಿವರ್ತನೆಯಾಗುತ್ತಿದೆ. ಪ್ರತಿನಿತ್ಯದ ಈ 25ರಿಂದ 30 ಕೋಟಿ ಮಿಸ್ಡ್ ಕಾಲ್‌ಗಳು ಜಿಯೋಗೆ 65ರಿಂದ 75 ಕೋಟಿ ನಿಮಿಷಗಳಷ್ಟು ಒಳಬರುವ ಟ್ರಾಫಿಕ್ ಆಗಬೇಕಿತ್ತು. ಅದರ ಬದಲು, ಜಿಯೋ ಗ್ರಾಹಕರು ಮರಳಿ ಕರೆ ಮಾಡುವುದರಿಂದಾಗಿ, 65ರಿಂದ 75 ಕೋಟಿ ನಿಮಿಷಗಳಷ್ಟು ಹೊರಹೋಗುವ ಟ್ರಾಫಿಕ್ ಸೃಷ್ಟಿಯಾಗುತ್ತಿದೆ.

ಜಿಯೋ ಆಫ್-ನೆಟ್ ವಾಯ್ಸ್ ಟ್ರಾಫಿಕ್‌ನಲ್ಲಿ ಸಮಾನತೆ

ಜಿಯೋ ಆಫ್-ನೆಟ್ ವಾಯ್ಸ್ ಟ್ರಾಫಿಕ್‌ನಲ್ಲಿ ಸಮಾನತೆ

ಬೆಲೆ ವ್ಯತ್ಯಾಸದ ಪರಿಣಾಮಗಳನ್ನು, ಅದರಲ್ಲೂ ಮಿಸ್ಡ್‌ ಕಾಲ್ ವಿದ್ಯಮಾನವನ್ನು, ಹೊರತುಪಡಿಸಿದರೆ ಜಿಯೋ ಆಫ್-ನೆಟ್ ವಾಯ್ಸ್ ಟ್ರಾಫಿಕ್‌ನಲ್ಲಿ ಈಗಾಗಲೇ ಸಮಾನತೆಯನ್ನು ಸಾಧಿಸಿದೆ. ಇತರ ಆಪರೇಟರ್‌ಗಳು ತಮ್ಮ ದುಬಾರಿ 2ಜಿ ವಾಯ್ಸ್ ಟ್ಯಾರಿಫ್‌ನಿಂದಾಗಿ ಇದರಲ್ಲಿ ಮತ್ತೆ ಅಸಮಾನತೆ ತರುತ್ತಿದ್ದಾರೆ.

ಈಚೆಗೆ ಪ್ರಕಟಿಸಿದ ಸಮಾಲೋಚನಾ ಪತ್ರಕ್ಕೆ ಈ ಬಗೆಯ ಟ್ರಾಫಿಕ್ ಅಸಮಾನತೆಯೊಂದೇ ಆಧಾರವೆಂದು ಉಲ್ಲೇಖಿಸುವ ಮೂಲಕ, ಐಯುಸಿ ನಿಯಮಗಳ ತಿದ್ದುಪಡಿಯ ಮೂಲಕ 1ನೇ ಜನವರಿ 2020ರಿಂದ ಅನ್ವಯವಾಗುವಂತೆ ಶೂನ್ಯವೆಂದು ಈಗಾಗಲೇ ಘೋಷಿಸಲಾಗಿರುವ, ಐಯುಸಿಯ ಮುಗಿದ ಅಧ್ಯಾಯವನ್ನು ಟ್ರಾಯ್ ಮತ್ತೆ ತೆರೆದಿದೆ. 2017ರಲ್ಲಿ ಐಯುಸಿ ನಿಯಮಗಳ ತಿದ್ದುಪಡಿಯನ್ನು ಸಾಕಷ್ಟು ಚರ್ಚೆಗಳು ಮತ್ತು ಸಮಾಲೋಚನೆಗಳ ನಂತರವೇ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಮಾಲೋಚನಾ ಪತ್ರವು ನಿಯಂತ್ರಣ ಕುರಿತ ಅನಿಶ್ಚಿತತೆಯನ್ನು ಸೃಷ್ಟಿಸಿದೆ ಮತ್ತು ಅದರಿಂದಾಗಿ, ಐಯುಸಿ ಶುಲ್ಕಗಳು ಇರುವವರೆಗೂ ಎಲ್ಲಾ ಆಫ್-ನೆಟ್ ಮೊಬೈಲ್ ಧ್ವನಿ ಕರೆಗಳಿಗೆ ನಿಮಿಷಕ್ಕೆ 6 ಪೈಸೆಗಳ ಈ ನಿಯಂತ್ರಣ ಶುಲ್ಕವನ್ನು ಮರಳಿ ಪಡೆಯಲೇಬೇಕಾದ ಅನಿವಾರ್ಯತೆ, ಹೆಚ್ಚು ಇಷ್ಟವಿಲ್ಲದೆಯೂ, ಜಿಯೋಗೆ ಒದಗಿಬಂದಿದೆ.

ವಾಯ್ಸ್ ಕಾಲ್ ಗೆ ದರ ನಿಗದಿ #BoycottJio ಟ್ವಿಟ್ಟರಲ್ಲಿ ಟ್ರೆಂಡಿಂಗ್!ವಾಯ್ಸ್ ಕಾಲ್ ಗೆ ದರ ನಿಗದಿ #BoycottJio ಟ್ವಿಟ್ಟರಲ್ಲಿ ಟ್ರೆಂಡಿಂಗ್!

ಐಯುಸಿ ಟಾಪ್-ಅಪ್ ವೋಚರು

ಐಯುಸಿ ಟಾಪ್-ಅಪ್ ವೋಚರು

ಹೀಗಾಗಿ, ಇಂದಿನಿಂದ ಪ್ರಾರಂಭಿಸಿ, ಜಿಯೋ ಗ್ರಾಹಕರು ಮಾಡುವ ಎಲ್ಲ ರೀಚಾರ್ಜ್‌ಗಳ ಮೇಲೆ, ಇತರ ಮೊಬೈಲ್ ಆಪರೇಟರುಗಳಿಗೆ ಮಾಡಿದ ಕರೆಗಳಿಗೆ ಪ್ರತಿ ನಿಮಿಷಕ್ಕೆ ಆರು ಪೈಸೆಗಳ ಸದ್ಯದ ಐಯುಸಿ ಶುಲ್ಕವನ್ನು ಐಯುಸಿ ಟಾಪ್-ಅಪ್ ವೋಚರುಗಳ ಮೂಲಕ ವಿಧಿಸಲಾಗುವುದು ಮತ್ತು ಇದು ಟ್ರಾಯ್ ಶೂನ್ಯ ಟರ್ಮಿನೇಶನ್ ಶುಲ್ಕದ ಆಡಳಿತಕ್ಕೆ ಬದಲಾಗುವವರೆಗೆ ಮುಂದುವರೆಯುತ್ತದೆ. ಸದ್ಯ, ಈ ದಿನಾಂಕವು 1ನೇ ಜನವರಿ 2020 ಆಗಿದೆ.

ಆದಾಗ್ಯೂ, ಜಿಯೋ ತನ್ನ ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ನೀಡುವ ಬದ್ಧತೆಯ ಬಗ್ಗೆ ದೃಢವಾಗಿ ನಿಂತಿದೆ ಮತ್ತು ಪ್ರತಿ ನಿಮಿಷಕ್ಕೆ 6 ಪೈಸೆಯ ಶುಲ್ಕ ಈ ಕೆಳಕಂಡವುಗಳಿಗೆ ಅನ್ವಯಿಸುವುದಿಲ್ಲ:
(ಎ) ಜಿಯೋದಿಂದ ಜಿಯೋಗೆ ಮಾಡುವ ಎಲ್ಲ ಕರೆಗಳು;
(ಬಿ) ಎಲ್ಲ ಒಳಬರುವ ಕರೆಗಳು;
(ಸಿ) ಜಿಯೋದಿಂದ ಲ್ಯಾಂಡ್‌ಲೈನ್‌ಗೆ ಮಾಡುವ ಕರೆಗಳು; ಹಾಗೂ
(ಡಿ) ವಾಟ್ಸ್‌ಆಪ್ ಅಥವಾ ಫೇಸ್‌ಟೈಮ್ ಹಾಗೂ ಅಂತಹ ವೇದಿಕೆಗಳನ್ನು ಬಳಸಿ ಮಾಡುವ ಕರೆಗಳು

ಜಿಯೋ ಸರಿಸಮಾನ ಮೌಲ್ಯದ ಹೆಚ್ಚುವರಿ ಡೇಟಾ

ಜಿಯೋ ಸರಿಸಮಾನ ಮೌಲ್ಯದ ಹೆಚ್ಚುವರಿ ಡೇಟಾ

ಹೆಚ್ಚುವರಿಯಾಗಿ, ಜಿಯೋ, ರಿಲಯನ್ಸ್ ರೀಟೇಲ್‌ನ ಸಹಯೋಗದಲ್ಲಿ, ನಮ್ಮ ಜಿಯೋ ಬಳಕೆದಾರರು ಆಗಾಗ್ಗೆ ಕರೆಮಾಡುವ 2ಜಿ ಗ್ರಾಹಕರಿಗೆ ಜಿಯೋಫೋನ್ ಅನ್ನು ಆದ್ಯತೆ ಮೇರೆಗೆ ಒದಗಿಸಲಿದೆ.

ಐಯುಸಿ ಟಾಪ್-ಅಪ್ ವೋಚರ್ ಬಳಕೆಯ ಆಧಾರದ ಮೇಲೆ ಜಿಯೋ ಸರಿಸಮಾನ ಮೌಲ್ಯದ ಹೆಚ್ಚುವರಿ ಡೇಟಾ ಅರ್ಹತೆಯನ್ನು ಜಿಯೋ ನೀಡಲಿದೆ. ಇದು, ಬಳಕೆದಾರರಿಗೆ ಯಾವುದೇ ಟ್ಯಾರಿಫ್ ಹೆಚ್ಚಳ ಆಗದಂತೆ ನೋಡಿಕೊಳ್ಳಲಿದೆ.

ಗ್ರಾಹಕರಿಗೆ ತಮ್ಮ ಅಗತ್ಯಗಳನ್ನು ಪೂರೈಸಲು ಈ ಕೆಳಕಂಡ ಟಾಪ್-ಅಪ್ ವೋಚರುಗಳು ಲಭ್ಯವಿರಲಿವೆ:

*ನಿಮಿಷಕ್ಕೆ 6 ಪೈಸೆಯಂತೆ ಐಯುಸಿ ವಿಧಿಸಲಾದ ಸಮಾನ ನಿಮಿಷಗಳು, ಜಿಎಸ್‌ಟಿ ಹಾಗೂ ಸಂಸ್ಕರಣಾ ಶುಲ್ಕಕ್ಕಾಗಿ ಹೆಚ್ಚಿನ ದರ ಸೇರಿ, ಮತ್ತು ಪ್ರತಿ ಕರೆಯ ಅವಧಿ ಸಮೀಪದ ನಿಮಿಷಕ್ಕೆ ಪರಿವರ್ತಿಸಿ.

ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಆಫ್-ನೆಟ್ ಔಟ್‌ಗೋಯಿಂಗ್ ಕರೆಗಳಿಗಾಗಿ 6 ಪೈಸೆ ಪ್ರತಿ ನಿಮಿಷದ ದರದಲ್ಲಿ ಶುಲ್ಕ ವಿಧಿಸಲಾಗುವುದು ಮತ್ತು ಉಚಿತ ಡೇಟಾ ಅರ್ಹತೆಯನ್ನು ಮೇಲೆ ಹೇಳಿದ ಪ್ರಮಾಣದಲ್ಲಿ ಹೆಚ್ಚಿಸಲಾಗುವುದು.

ಐಯುಸಿಯನ್ನು ಟ್ರಾಯ್ ತೆಗೆದುಹಾಕುವ ತನಕ ಮಾತ್ರ

ಐಯುಸಿಯನ್ನು ಟ್ರಾಯ್ ತೆಗೆದುಹಾಕುವ ತನಕ ಮಾತ್ರ

ಹೊರಹೋಗುವ ಆಫ್-ನೆಟ್ ಮೊಬೈಲ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆಯ ಶುಲ್ಕವನ್ನು, ಸದ್ಯದ ನಿಯಮಗಳಿಗೆ ಅನುಗುಣವಾಗಿ, ಐಯುಸಿಯನ್ನು ಟ್ರಾಯ್ ತೆಗೆದುಹಾಕುವವರೆಗೆ ಮಾತ್ರವೇ ವಿಧಿಸಲಾಗುವುದು ಎಂದು ಜಿಯೋ ತನ್ನ 35 ಕೋಟಿ ಗ್ರಾಹಕರಿಗೆ ಮತ್ತೊಮ್ಮೆ ಭರವಸೆ ನೀಡುತ್ತದೆ. ಶೂನ್ಯ ಐಯುಸಿ ಆಡಳಿತವು ಗ್ರಾಹಕರ ಹಿತದೃಷ್ಟಿಯಿಂದ ಹೇಗೆ ಒಳ್ಳೆಯದು ಮತ್ತು ಅಪಾರ ಸಂಖ್ಯೆಯ ಮಿಸ್ಡ್ ಕರೆಗಳು ಅಸಮಾನ ದಟ್ಟಣೆಯ ತಪ್ಪು ಗ್ರಹಿಕೆಯನ್ನು ಹೇಗೆ ಸೃಷ್ಟಿಸುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ನಾವು ಎಲ್ಲಾ ದತ್ತಾಂಶಗಳನ್ನು ಟ್ರಾಯ್ ಜೊತೆಗೆ ಹಂಚಿಕೊಳ್ಳುತ್ತೇವೆ.

ಸದ್ಯದ ನಿಯಮಗಳ ಪ್ರಕಾರ ಐಯುಸಿ ಶುಲ್ಕವನ್ನು ತೆಗೆದುಹಾಕಲಾಗುವುದು ಮತ್ತು ಈ ತಾತ್ಕಾಲಿಕ ಶುಲ್ಕವು ಡಿಸೆಂಬರ್ 31, 2019ರ ವೇಳೆಗೆ ಕೊನೆಗೊಳ್ಳುತ್ತದೆ ಮತ್ತು ಆನಂತರ ಗ್ರಾಹಕರು ಈ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂಬ ಆಶಾಭಾವನೆ ನಮ್ಮದು. ಅಲ್ಲಿಯವರೆಗೆ, ಗ್ರಾಹಕರು ಐಯುಸಿ ಟಾಪ್-ಅಪ್ ವೋಚರ್‌ಗಳಿಗೆ ಪ್ರತಿಯಾಗಿ ಹೆಚ್ಚುವರಿ ಡೇಟಾ ಅರ್ಹತೆಯನ್ನು ಆನಂದಿಸುವುದನ್ನು ಮುಂದುವರಿಸಬಹುದು ಮತ್ತು 31ನೇ ಡಿಸೆಂಬರ್ 2019ರವರೆಗೆ ಶುಲ್ಕದಲ್ಲಿ ಯಾವುದೇ ವಾಸ್ತವಿಕ ಹೆಚ್ಚಳವಾಗದಂತೆ ನೋಡಿಕೊಳ್ಳಬಹುದು.

English summary
Know More about Reliance Jio's new recharge plans for voice calls.All Jio users will have to recharge with the new IUC top-up vouchers to make calls to other networks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X