ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NEFT ಹಣ ವರ್ಗಾವಣೆಯಲ್ಲಿ ಬದಲಾವಣೆ, ಶುಲ್ಕ? ಮಿತಿ ಎಷ್ಟು?

|
Google Oneindia Kannada News

ನವದೆಹಲಿ, ಡಿಸೆಂಬರ್ 16: ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಭಸುದ್ದಿ ನೀಡಿದೆ. ಡಿಸೆಂಬರ್ 16ರಿಂದ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) ವ್ಯವಸ್ಥೆ ದಿನದ 24 ಗಂಟೆಗಳ ಕಾಲ, ವರ್ಷದ 365 ದಿನಗಳ ಕಾಲ ಲಭ್ಯವಾಗಲಿದೆ.

ಆರ್‌ಬಿಐನ ಈ ವಿಶೇಷ ಸೌಲಭ್ಯ ಬೆಳಗ್ಗೆ 8 ಗಂಟೆಯಿಂದ ಸಂಜೆ 6:30 ಗಂಟೆ ತನಕ ಮಾತ್ರ ಲಭ್ಯವಿತ್ತು. ಅಲ್ಲದೆ ಬ್ಯಾಂಕ್ ರಜೆ ದಿನಗಳಲ್ಲಿ NEFT ಸೌಲಭ್ಯ ಲಭ್ಯವಾಗುತ್ತಿರಲಿಲ್ಲ. ಆದರೆ ಈಗ ರಜೆದಿನಗಳು ಸೇರಿದಂತೆ ಎಲ್ಲಾ ದಿನಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ. ಡಿಜಿಟಲ್ ವ್ಯವಹಾರಕ್ಕೆ ಒತ್ತು ನೀಡಲು ಆರ್ ಬಿಐ ವಿವಿಧ ಕ್ರಮಗಳನ್ನು ಅಳವಡಿಸುತ್ತಿದೆ. ಎನ್ ಇ ಎಫ್ ಟಿ ಅಲ್ಲದೆ, IMPS ವ್ಯವಸ್ಥೆ ಕೂಡಾ ಜಾರಿಯಲ್ಲಿದೆ. ಆದರೆ, IMPS ಅಡಿಯಲ್ಲಿ 2 ಲಕ್ಷ ರು ತನಕ ಮಾತ್ರ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಸಾಧ್ಯ.

ಜುಲೈ 01ರಿಂದ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಅಗ್ಗಜುಲೈ 01ರಿಂದ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಅಗ್ಗ

ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ (NEFT) ಎಂಬುದು ಆನ್ ಲೈನ್ ಮೂಲಕ ಹಣ ರವಾನೆ ಮಾಡುವ ವಿಧಾನವಾಗಿದೆ. ಐಎಫ್ ಎಸ್ ಸಿ ಕೋಡ್ ಬಳಸಿ ಹಣ ರವಾನೆ ಮಾಡಬಹುದಾಗಿದ್ದು, ಕೆಲವೇ ಗಂಟೆಗಳಲ್ಲಿ ಹಣ ವರ್ಗಾವಣೆಯಾಗುತ್ತದೆ. ಹಣ ರವಾನೆ ಮಾಡುವಾಗ ಫಲಾನುಭವಿಯ ಖಾತೆ ಸಂಖ್ಯೆಯನ್ನು ಸೇರಿಸಬೇಕು. ನಂತರ ವರ್ಗಾವಣೆ ಮಾಡಬೇಕಾದ ಹಣವನ್ನು ನಮೂದಿಸಬೇಕು. ಒಂದು ದಿನಕ್ಕೆ 10 ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ.

 NEFT ಹಣ ವರ್ಗಾವಣೆಯಲ್ಲಿ ಶುಲ್ಕ?

NEFT ಹಣ ವರ್ಗಾವಣೆಯಲ್ಲಿ ಶುಲ್ಕ?

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಗಳು NEFT ಸೌಲಭ್ಯದಿಂದ ಹಣ ವರ್ಗಾವಣೆಗಾಗಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ಜುಲೈ ತಿಂಗಳಿನಲ್ಲಿ ಆರ್ ಬಿಐ ಕೂಡಾ ಶುಲ್ಕ ವಿಧಿಸದಂತೆ ಬ್ಯಾಂಕ್ ಗಳಿಗೆ ಸೂಚಿಸಿತ್ತು. ಜನವರಿ 220ರಿಂದ ಎಲ್ಲಾ ಬ್ಯಾಂಕುಗಳು NEFT ಬಳಕೆ ಉಚಿತಗೊಳಿಸಲಿವೆ.

 NEFT ಹಣ ವರ್ಗಾವಣೆ ಮಿತಿ

NEFT ಹಣ ವರ್ಗಾವಣೆ ಮಿತಿ

NEFT ಮೂಲಕ ಹಣ ವರ್ಗಾವಣೆಗೆ ಯಾವುದೇ ಮಿತಿ ಇಲ್ಲ. ಸಾಮಾನ್ಯವಾಗಿ 2 ಲಕ್ಷ ರು ತನಕದ ಹಣ ವರ್ಗಾವಣೆಗೆ ಬಳಸಲಾಗುತ್ತದೆ. ಇನ್ನೂ ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಆರ್ ಟಿ ಜಿಎಸ್ ಬಳಸಬಹುದು.

ಜ. 1ರಿಂದ ಎಸ್ಬಿಐನ ಯಾವ ಯಾವ ಡೆಬಿಟ್ ಕಾರ್ಡ್ ವರ್ಕ್ ಆಗಲ್ಲಜ. 1ರಿಂದ ಎಸ್ಬಿಐನ ಯಾವ ಯಾವ ಡೆಬಿಟ್ ಕಾರ್ಡ್ ವರ್ಕ್ ಆಗಲ್ಲ

ಕೆಲವು ಬ್ಯಾಂಕ್ ಗಳಲ್ಲಿ ಗ್ರಾಹಕರಿಗೆ ಮಿತಿಯನ್ನು ಸೂಚಿಸಲಾಗಿದೆ. ಐಸಿಐಸಿಸಿಯಲ್ಲಿ 10ಲಕ್ಷರು ಹಾಗೂ ಎಚ್ ಡಿ ಎಫ್ ಸಿಯಲ್ಲಿ25 ಲಕ್ಷ ರು ತನಕ ನೆಫ್ಟ್ ಬಳಸಬಹುದು. ಎಸ್ಬಿಐ 10 ಲಕ್ಷ ಮಿತಿ ಹೊಂದಿದೆ.

 NEFT ಹಾಗೂ ಆರ್ ಟಿ ಜಿಎಸ್ ಬಳಕೆ

NEFT ಹಾಗೂ ಆರ್ ಟಿ ಜಿಎಸ್ ಬಳಕೆ

ಸಾಮಾನ್ಯವಾಗಿ ಗ್ರಾಹಕರು ಭಾರಿ ಮೊತ್ತದ ಹಣವನ್ನು ವರ್ಗಾವಣೆ ಮಾಡಲು ಆರ್‌ಟಿಜಿಎಸ್‌ ಸೌಲಭ್ಯ ಬಳಸುತ್ತಾರೆ. ಈ ಮುಂಚೆ ಎಸ್‍ಬಿಐ, ನೆಫ್ಟ್ ಗೆ 1 ರಿಂದ 5 ರೂ. ಹಾಗೂ ಆರ್‌ಟಿಜಿಎಸ್‌ ಗೆ 5ರಿಂದ 50 ರೂಪಾಯಿವರೆಗೆ ಶುಲ್ಕ ವಿಧಿಸುತ್ತಿತ್ತು.ಆದರೆ, ಆರ್ ಬಿಐ ಸೂಚನೆ ಮೇರೆಗೆ ಶುಲ್ಕ ತೆಗೆದು ಹಾಕಲಾಗಿದೆ.

 ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ

ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ

ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು, ಆರ್‌ಟಿಜಿಎಸ್‌ ಮೂಲಕ ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಬ್ಯಾಂಕುಗಳಿಗೆ ವಿಧಿಸುವ ಸಂಸ್ಕರಣಾ ಶುಲ್ಕಗಳು ಮತ್ತು ಸಮಯ-ಬದಲಾಗುವ ಶುಲ್ಕಗಳನ್ನು ತೆಗೆದುಹಾಕಲು ನಿರ್ಧರಿಸಿದ್ದನ್ನು ಗ್ರಾಹಕರು ಸ್ವಾಗತಿಸಿದ್ದಾರೆ. ಈಗ ನೆಫ್ಟ್ ಮೇಲಿನ ಶುಲ್ಕ ರದ್ದು, ಅವಧಿ ವಿಸ್ತರಣೆಯಿಂದ ಡಿಜಿಟಲ್ ವ್ಯವಹಾರ ಹೆಚ್ಚಾಗುವ ಸಾಧ್ಯತೆಯಿದೆ.

English summary
With effect from today, the Reserve Bank of India (RBI) has made online NEFT transfers a round-the-clock process. Check the new timings, limit and charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X