ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯೋಕಾನ್ ಕಿರಣ್ ಷಾ ಇನ್ಫಿ ಕ್ಷಮೆ ಕೋರಿದ್ದು ಏಕೆ?

By Mahesh
|
Google Oneindia Kannada News

ಬೆಂಗಳೂರು, ಏ.24: ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಸಮಿತಿಯ ನಾಮಾಂಕಿತ ಸದಸ್ಯೆಯಾಗಿರುವ ಬಯೋಕಾನ್ ಅಧ್ಯಕ್ಷೆ ಕಿರಣ್ ಮುಜುಂದಾರ್ ಶಾ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚೆಗೆ ನಡೆದ ಬೋರ್ಡ್ ಮೀಟಿಂಗ್ ನ ಬಗ್ಗೆ ಕಿರಣ್ ಟ್ವೀಟ್ ಮಾಡಿ ಇನ್ಫಿ ಮೂರ್ತಿ ಮಗ ರೋಹನ್ ಅವರನ್ನು ಹೊಗಳಿದ್ದರು.

ಇನ್ಫೋಸಿಸ್ ಆಡಳಿತ ಮಂಡಳಿ ಸಭೆಯಲ್ಲಿ ಕಾರ್ಯಕಾರಿ ಅಧ್ಯಕ್ಷ ಎನ್.ಆರ್. ನಾರಾಯಣಮೂರ್ತಿ ಪುತ್ರ ರೋಹನ್ ಮೂರ್ತಿ ನಡೆಸಿಕೊಟ್ಟ 'ಪ್ರೆಸೆಂಟೇಷನ್(ಪ್ರಸ್ತುತಿ)' ಕುರಿತು ಸಭೆಯಲ್ಲೇ ಹಾಜರಿದ್ದ ಆಡಳಿತ ಮಂಡಳಿ ಸದಸ್ಯೆ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶನಿವಾರ ಸಾಮಾಜಿಕ ಜಾಲತಾಣ ಟ್ವಿಟರ್ ‌ನಲ್ಲಿ ಮಾಡಿದ್ದ ಶ್ಲಾಘನೆಗೆ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.

ಕಿರಣ್ ಮಜುಂದಾರ್ ಅವರ ಟ್ವೀಟ್ ‌ಗೆ ಉದ್ಯಮ ರಂಗದ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆಡಳಿತ ಮಂಡಳಿ ಸಭೆಯ ಕಾರ್ಯ ಕಲಾಪಗಳ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳಿಸುವುದು ತಪ್ಪು ಎಂದು ತಜ್ಞರು ಹೇಳಿದ್ದರು. ಇತ್ತೀಚಿನ ಇನ್ಫಿ ಆಡಳಿತ ಮಂಡಳಿ ಸಭೆಯಲ್ಲಿ ರೋಹನ್ ಮೂರ್ತಿ ಅವರ ತಾಂತ್ರಿಕ ನಿಪುಣತೆಯ ಪ್ರಸ್ತುತಿಯಿಂದ ನಾನು ಪ್ರಭಾವಿತಳಾದೆ. ರೋಹನ್ ಅವರ ಐಡಿಯಾಗಳು ಇನ್ಫಿಗೆ ಪ್ರಯೋಜನ ಒದಗಿಸಲಿವೆ ಎಂದು ಕಿರಣ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಕೊನೆಗೆ ಸಂಸ್ಥೆ ಸದಸ್ಯರ ಪ್ರತಿಕ್ರಿಯೆಯನ್ನು ಮನ್ನಿಸಿ ಟ್ವೀಟ್ ಮಾಡಿ ಕ್ಷಮೆ ಕೋರಿದ್ದಾರೆ.

ರೋಹನ್ ಅವರನ್ನು ಹೊಗಳಿದ್ದ ಟ್ವೀಟ್ ಕಿರಿಕಿರಿ

ರೋಹನ್ ಅವರನ್ನು ಹೊಗಳಿದ್ದ ಟ್ವೀಟ್ ಕಿರಿಕಿರಿ

ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಸಮಿತಿಯ ನಾಮಾಂಕಿತ ಸದಸ್ಯೆಯಾಗಿರುವ ಬಯೋಕಾನ್ ಅಧ್ಯಕ್ಷೆ ಕಿರಣ್ ಮುಜುಂದಾರ್ ಶಾ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಸಂಸ್ಥೆ ಮುನ್ನಡೆಸಲು ರೋಹನ್ ಸಮರ್ಥ

ಸಂಸ್ಥೆ ಮುನ್ನಡೆಸಲು ರೋಹನ್ ಸಮರ್ಥ

ಮೊಬೈಲ್ ಕಂಪ್ಯೂಟಿಂಗ್, ನಿಸ್ತಂತು ಸೇವೆ ಬಗ್ಗೆ ರೋಹನ್ ಸಂಶೋಧನೆ ನಡೆಸಿದ್ದಾರೆ. ಇವರಿಗೂ ಕೂಡಾ ಬೋರ್ಡ್ ವರ್ಷಕ್ಕೆ 1 ರು ನಂತೆ ಟೋಕನ್ ಪರಿಹಾರ ಧನ ನೀಡುತ್ತಿದೆ. 31ರ ಹರೆಯದ Rohan Murty (ಮೂರ್ತಿ ಸೀನಿಯರ್ ನಂತೆ murthy ಎಂದು ರೋಹನ್ ಬಳಸುವುದಿಲ್ಲ) ಅವರು ಕಂಪನಿಯ ಹಿರಿಯ ಮ್ಯಾನೇಜ್ಮೆಂಟ್ ತಂಡದ ಭಾಗವಾಗಿದ್ದಾರೆ.

ಮೊದಲು ಟ್ವೀಟ್ ಅಮೇಲೆ ಕ್ಷಮೆ, ಪ್ರತಿಕ್ರಿಯೆ

ಮೊದಲು ಟ್ವೀಟ್ ಅಮೇಲೆ ಕ್ಷಮೆ ಕೋರಿದ ಕಿರಣ್ ಸಾರ್ವಜನಿಕರಿಗೂ ಪ್ರತಿಕ್ರಿಯಿಸಿದ್ದಾರೆ.

ಕ್ಷಮೆ ಕೋರಿದ ಬಯೋಕಾನ್ ಕಿರಣ್ ಶಾ

ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಸಮಿತಿಯ ನಾಮಾಂಕಿತ ಸದಸ್ಯೆಯಾಗಿರುವ ಬಯೋಕಾನ್ ಅಧ್ಯಕ್ಷೆ ಕಿರಣ್ ಮುಜುಂದಾರ್ ಶಾ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಮೋದಿ ಆಡಳಿತವನ್ನು ಮೆಚ್ಚುವ ಕಿರಣ್

ಮೋದಿ ಆಡಳಿತವನ್ನು ಮೆಚ್ಚುವ ಕಿರಣ್ ಅವರು ಆಗಾಗ ಗುಜರಾತ್ ಅಭಿವೃದ್ಧಿ ಬಗ್ಗೆ ಟ್ವೀಟ್ ಮಾಡುತ್ತಿರುತ್ತಾರೆ.

ಐಟಿ ಸಂಸ್ಥೆ ಕುಟುಂಬ ರಾಜಕೀಯ

ಐಟಿ ಸಂಸ್ಥೆ ಕುಟುಂಬ ರಾಜಕೀಯ

ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಸೇರಿದಂತೆ ಸಹ ಸ್ಥಾಪಕರು ತಮ್ಮ ಮಕ್ಕಳು ಕಂಪನಿ ಸೇರದಂತೆ ನೋಡಿಕೊಂಡಿದ್ದರು. ಕುಟುಂಬ ರಾಜಕೀಯದ ಛಾಯೆ ಬೀಳದಂತೆ ಇಲ್ಲಿವರೆಗೂ ನಿಗಾವಹಿಸಿದ್ದರು. ಈ ಬಗ್ಗೆ ಸಂಸ್ಥೆ ಪ್ರಮುಖರು ಅನೇಕ ಬಾರಿ ಹೇಳಿಕೆಯನ್ನು ನೀಡಿದ್ದರು. ಅದರೆ, ಈಗ ಇನ್ಫಿ ಮೂರ್ತಿ ಅವರ ಮಗ ರೋಹನ್ ಅವರನ್ನು ಉನ್ನತ ಸ್ಥಾನದಲ್ಲಿ ಕೂರಿಸಲಾಗಿದೆ. ಇದಕ್ಕೆ ಬೋರ್ಡ್ ಒಪ್ಪಿಗೆ ಇದೆ ಎನ್ನುವುದು ಗಮನಾರ್ಹ

English summary
Kiran Mazumdar-Shaw apologises for tweet on Rohan Murty.Mazumdar-Shaw, also a member of Infosys' nominations committee, showered praise on the 31-year-old son of Infosys Executive Chairman N R Narayana Murthy, on microblogging site Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X