ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ತ್ರೈಮಾಸಿಕ: ಕಿಲ್ಲರ್ ಜೀನ್ಸ್ ಶೇಕಡ 24ರಷ್ಟು ಆದಾಯ ಪ್ರಗತಿ

|
Google Oneindia Kannada News

ಬೆಂಗಳೂರು, ನವೆಂಬರ್ 20: ಕೇವಲ್ ಕಿರಣ್ ಕ್ಲೋಥಿಂಗ್ ಲಿಮಿಟೆಡ್ (ಕೆಕೆಸಿಎಲ್) ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇಕಡ 10ರಷ್ಟು ಆದಾಯ ಪ್ರಗತಿ ದಾಖಲಿಸಿದೆ. ಇದು ಬ್ರಾಂಡೆಡ್ ಸಿದ್ಧ ಉಡುಪುಗಳ ಮಾರುಕಟ್ಟೆಯ ಪುನಶ್ಚೇತನದ ಸಂಕೇತವಾಗಿದೆ.

ಕಂಪನಿಯ ಅಗ್ರಗಣ್ಯ ಬ್ರಾಂಡ್ ಎನಿಸಿದ ಕಿಲ್ಲರ್ ಜೀನ್ಸ್, ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ದ್ವಿತೀಯ ತ್ರೈಮಾಸಿಕದಲ್ಲಿ ಪ್ರಬಲ ಅಂದರೆ 24.2% ಪ್ರಗತಿ ದಾಖಲಿಸಿದೆ. ಅಂತೆಯೇ ಮತ್ತೊಂದು ಪ್ರಮುಖ ಬ್ರಾಂಡ್ ಕಿನ್ನರ್‍ನ ಈಸೀಸ್ ಶೇಕಡ 11.4ರಷ್ಟು ಪ್ರಗತಿ ದಾಖಲಿಸಿದೆ. ಬ್ರಾಂಡೆಡ್ ಸಿದ್ಧ ಉಡುಪುಗಳ ಕ್ಷೇತ್ರದಲ್ಲಿ ಒಟ್ಟಾರೆ ಬೇಡಿಕೆ ಮಂದ ಗತಿಯಲ್ಲಿ ಹೆಚ್ಚುತ್ತಿದ್ದರೂ, ಕೇವಲ್ ಕಿರಣ್ ಕ್ಲೋಥಿಂಗ್ ಲಿಮಿಟೆಡ್, ಕಿಲ್ಲರ್ ಜೀನ್ಸ್ ಬ್ರಾಂಡ್‍ನ ಬಲದಿಂದಾಗಿ ಉತ್ತಮ ದರದ ಪ್ರಗತಿ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಕಿಲ್ಲರ್ ಜೀನ್ಸ್ ಮಳಿಗೆ 336ಕ್ಕೇರಿಸಲು ಗುರಿ : ಕೇವಲ್ ಕಿರಣ್ ಸಂಸ್ಥೆಕಿಲ್ಲರ್ ಜೀನ್ಸ್ ಮಳಿಗೆ 336ಕ್ಕೇರಿಸಲು ಗುರಿ : ಕೇವಲ್ ಕಿರಣ್ ಸಂಸ್ಥೆ

ಈ ಬೆಳವಣಿಗೆ ಬಗ್ಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕೇವಲ್‍ಚಂದ್ ಪಿ.ಜೈನ್ ಅವರು, "ಕಿಲ್ಲರ್ ಬ್ರಾಂಡ್ ಮತ್ತು ಈಸೀಸ್ ಬೈ ಕಿಲ್ಲರ್ ಬ್ರಾಂಡ್‍ಗಳು ಕ್ರಮವಾಗಿ ಶೇಕಡ 21 ಹಾಗೂ ಶೇಕಡ 10ರ ಆರೋಗ್ಯಕರ ಪ್ರಗತಿ ದಾಖಲಿಸಿವೆ. ಇದರಿಂದಾಗಿ ಕಂಪನಿಯ ಒಟ್ಟಾರೆ ಆದಾಯ ಶೇಕಡ 10ರಷ್ಟು ಪ್ರಗತಿ ಕಾಣಲು ಸಾಧ್ಯವಾಗಿದೆ. ಈ ಎರಡು ಬ್ರಾಂಡ್‍ಗಳು 2020ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಒಟ್ಟಾರೆ ಮಾರಾಟದ ಪೈಕಿ ಶೇಕಡ 70ರಷ್ಟು ಪಾಲು ಹೊಂದಿವೆ" ಎಂದು ಹೇಳಿದರು.

Killer Jeans clocks 24% revenue growth in the second quarter

ಮುಂದಿನ ತ್ರೈಮಾಸಿಕಗಳಲ್ಲಿ ಪ್ರಬಲವಾದ ಬೇಡಿಕೆಯ ವಾತಾವರಣ ರೂಪುಗೊಳ್ಳುವ ಬಗ್ಗೆ ಕಂಪನಿಗೆ ಅತೀವ ವಿಶ್ವಾಸವಿದೆ. ಈ ಮೂಲಕ ಒಟ್ಟಾರೆ ಆರ್ಥಿಕ ಚಟುವಟಿಕೆಗಳು ಧನಾತ್ಮಕ ಸಂಕೇತಗಳನ್ನು ಪ್ರದರ್ಶಿಸುವ ನಿರೀಕ್ಷೆ ಇದೆ. ಕಂಪನಿಯ ಕಿಲ್ಲರ್ ಬ್ರಾಂಡ್ ಮತ್ತು ಈಸೀಸ್ ಬೈ ಕಿಲ್ಲರ್ ಬ್ರಾಂಡ್‍ನ ಪ್ರಗತಿ ದರ ಆರೋಗ್ಯಕರವಾಗಿ ಮುಂದುವರಿಯುವ ನಿರೀಕ್ಷೆ ಇದ್ದು, ಇದು ಮುಂದಿನ ದಿನಗಳಲ್ಲಿ ಕಂಪನಿಯ ಒಟ್ಟಾರೆ ಆದಾಯ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದಿದ್ದಾರೆ.

English summary
Kewal Kiran Clothing Ltd (KKCL) has reported 10% growth in revenues in the second quarter of the year, which is a positive sign signalling revival of demand for branded apparels in the market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X