ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್‍ 4ರಂದು ಕೆಐಎಡಿಬಿ ಸುವರ್ಣ ಮಹೋತ್ಸವ

By Prasad
|
Google Oneindia Kannada News

ಬೆಂಗಳೂರು, ಮಾರ್ಚ್‍ 3 : ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಕಳೆದ 50 ವರ್ಷಗಳಿಂದ ಶ್ರಮಿಸುತ್ತಿರುವ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಸುವರ್ಣ ಮಹೋತ್ಸವವು ಮಾರ್ಚ್‍ 4ರ ಭಾನುವಾರ ನಗರದ ಶಾಂಗ್ರಿ-ಲಾ ಹೋಟೆಲಿನಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುವರ್ಣ ಮಹೋತ್ಸವವನ್ನು ಉದ್ಘಾಟಿಸಲಿದ್ದು, ಇದೇ ಸಂದರ್ಭದಲ್ಲಿ ಕೆಐಎಡಿಬಿ ಪ್ರಧಾನ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕರ್ನಾಟಕದ ಯಶಸ್ವಿ ಮಹಿಳಾ ಉದ್ಯಮಿಗಳ ಸಮಾವೇಶಕರ್ನಾಟಕದ ಯಶಸ್ವಿ ಮಹಿಳಾ ಉದ್ಯಮಿಗಳ ಸಮಾವೇಶ

ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.

KIADB Golden Jubilee celebration at hotel Shangrila in Bengaluru

ಕೆಂಪೇಗೌಡ ಏರ್‌ಪೋರ್ಟ್‌ಗೆ ಬರಲಿದೆ ಅತ್ಯಾಧುನಿಕ ಏರೋಸ್ಪೇಸ್‌ ಪಾರ್ಕ್‌ಕೆಂಪೇಗೌಡ ಏರ್‌ಪೋರ್ಟ್‌ಗೆ ಬರಲಿದೆ ಅತ್ಯಾಧುನಿಕ ಏರೋಸ್ಪೇಸ್‌ ಪಾರ್ಕ್‌

ನಗರಾಭಿವೃದ್ಧಿ ಸಚಿವ ಆರ್‍.ರೋಷನ್‍ ಬೇಗ್‍ ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ, ಇನ್ಫೋಸಿಸ್‍ನ ಸ್ಥಾಪಕ ಎನ್‍.ಆರ್‍. ನಾರಾಯಣಮೂರ್ತಿ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಅಲ್ಲದೆ, ಸಣ್ಣ ಕೈಗಾರಿಕೆಗಳ ಸಚಿವೆ ಡಾ.ಎಂ.ಸಿ. ಮೋಹನಕುಮಾರಿ, ಕೆಐಎಡಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್‍. ಜಯರಾಮ್‍, ಮಂಡಳಿಯ ಅಧ್ಯಕ್ಷ ಡಿ.ವಿ. ಪ್ರಸಾದ್, ಸರಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಸಮಾವೇಶ ಕೇಂದ್ರ, ಬಿಝಿನೆಸ್ ಪಾರ್ಕ್‍ಗೆ ಶಂಕುಸ್ಥಾಪನೆಬೆಂಗಳೂರಿನಲ್ಲಿ ಅತ್ಯಾಧುನಿಕ ಸಮಾವೇಶ ಕೇಂದ್ರ, ಬಿಝಿನೆಸ್ ಪಾರ್ಕ್‍ಗೆ ಶಂಕುಸ್ಥಾಪನೆ

English summary
KIADB Golden Jubilee (50 years) celebration at hotel Shangrila in Bengaluru on 4th March, 2018. Chief Minister Siddaramaiah to inaugurate the golden jubilee function. Medium and Large Industry minister R V Deshpande to release memoire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X