ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾತಾಬುಕ್‌ನಿಂದ ಬಿಜ್ ಅನಾಲಿಸ್ಟ್ ಸ್ವಾಧೀನ, 10 ಮಿಲಿಯನ್ ಡೀಲ್

|
Google Oneindia Kannada News

ಬೆಂಗಳೂರು, ಮಾರ್ಚ್ 25: ಭಾರತದಲ್ಲಿ ಅತಿ ವೇಗದಲ್ಲಿ ಬೆಳೆಯುತ್ತಿರುವ ಫಿನ್ ಟೆಕ್ ಸ್ಟಾರ್ಟಪ್ ಆಗಿರುವ ಖಾತಾಬುಕ್ ಇಂದು ಮುಂಚೂಣಿಯಲ್ಲಿರುವ ಎಸ್ಎಎಎಸ್ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಅಪ್ಲಿಕೇಷನ್ ಆಗಿರುವ ಬಿಜ್ ಅನಾಲಿಸ್ಟ್ ಅನ್ನು ಸ್ವಾಧೀನಪಡಿಸಿದೆ. 10 ಮಿಲಿಯನ್ ಡಾಲರ್ ನಗದು ಮತ್ತು ಈಕ್ವಿಟಿಯಲ್ಲಿ ಈ ಬಿಜ್ ಅನಾಲಿಸ್ಟ್ ಅನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಸ್ವಾಧೀನದೊಂದಿಗೆ ಖಾತಾಬುಕ್ ಮುಂದಿನ ಹಂತದ ಬೆಳವಣಿಗೆ ಮತ್ತು ಹಾಲಿ ಇರುವ 10 ಲಕ್ಷಕ್ಕೂ ಅಧಿಕ ತನ್ನ ಮಾಸಿಕ ಸಕ್ರಿಯ ವ್ಯಾಪಾರಿಗಳಿಗೆ ತಮ್ಮ ವ್ಯವಹಾರಗಳನ್ನು ವೃದ್ಧಿಸಿಕೊಳ್ಳಲು ನೆರವಾಗುವ ಉದ್ದೇಶವನ್ನು ಹೊಂದಿದೆ. ಈ ಸ್ವಾಧೀನದ ಮೂಲಕ ಕಂಪನಿಯು ತನ್ನ ವ್ಯಾಪಾರಿಗಳಿಗೆ ಪ್ರೀಮಿಯಂ ಆಧಾರಿತ ಸೇವೆಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಿದೆ.

ವಿತರಕರು, ಸಗಟುದಾರರು, ವಾಣಿಜ್ಯೋದ್ಯಮಿಗಳು ಮತ್ತು ಪೂರೈಕೆದಾರರು ಸೇರಿದಂತೆ ಖಾತಾಬುಕ್ ಬಳಕೆದಾರರು ಇನ್ನು ಮುಂದೆ ಸುಲಭವಾಗಿ ಹೆಚ್ಚುವರಿ ವೈಶಿಷ್ಟ್ಯತೆಗಳನ್ನು ಬಳಸಿಕೊಂಡು ಬ್ಯುಸಿನೆಸ್ ಅನಾಲಿಟಿಕ್ಸ್, ಮಾರಾಟ ಶಕ್ತಿಯ ಆಟೋಮೇಷನ್ ಮತ್ತು ಡಿಜಿಟಲ್ ಇನ್ವಾಯ್ಸಿಂಗ್ ಮೂಲಕ ತಮ್ಮ ಸಮರ್ಥತೆಯನ್ನು ಸುಧಾರಣೆ ಮಾಡಿಕೊಳ್ಳಬಹುದಾಗಿದೆ.

Khatabook acquires SaaS player Biz Analyst in USD 10 mn deal

2016 ಅಂತ್ಯದ ವೇಳೆಗೆ ಆರಂಭವಾದ ಬಿಜ್ ಅನಾಲಿಸ್ಟ್ ನಗದು ಹರಿವಿನ ಒಂದು ಸಕಾರಾತ್ಮಕ ವ್ಯವಹಾರವಾಗಿದೆ. ದೈನಂದಿನ ವ್ಯವಹಾರದ ಕಾರ್ಯಾಚರಣೆಗಳನ್ನು ಸ್ವಯಂಚಾಲಿತಗೊಳಿಸಲು ಮತ್ತು ಮಾರಾಟ, ದಾಸ್ತಾನು, ಬಾಕಿ ಮತ್ತು ಉತ್ಪಾದಕತೆಯನ್ನು ನಿರ್ವಹಣೆ ಮಾಡಲು ಡೇಟಾ-ಚಾಲಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಟ್ಯಾಲಿ ಅಕೌಂಟಿಂಗ್ ಸಾಫ್ಟ್ ವೇರ್ ಅನ್ನು ಬಳಸುವ ಎಸ್ಎಂಇಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ.

ಕಂಪನಿಯು ಪ್ರಸ್ತುತ 80,000 ಕ್ಕೂ ಅಧಿಕ ಪಾವತಿ ಬಳಕೆದಾರರನ್ನು ಹೊಂದಿದೆ. ಬಿಜ್ ಅನಾಲಿಸ್ಟ್ ಇದೀಗ ಖಾತಾಬುಕ್ ನ ಭಾಗವಾಗಿದ್ದು, 2021 ರಲ್ಲಿ ತನ್ನ ಬಳಕೆದಾರರನ್ನು ದ್ವಿಗುಣಗೊಳಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಅಲ್ಲದೇ, ತನ್ನ 1000+ ಚಾನೆಲ್ ಪಾರ್ಟ್ನರ್ ಗಳ ಜಾಲವನ್ನು ದೊಡ್ಡ ಮಟ್ಟದಲ್ಲಿ ಸೃಷ್ಟಿಸುವ ಗುರಿಯನ್ನು ಹಾಕಿಕೊಂಡಿದೆ.

ಬಿಜ್ ಅನಾಲಿಸ್ಟ್ ತಂಡವು ಮುಂಬೈನಿಂದ ಸ್ವತಂತ್ರವಾಗಿ ಕಾರ್ಯನಿರ್ವಹಣೆ ಮಾಡುವುದನ್ನು ಮುಂದುವರಿಸಲಿದ್ದರೆ, ಬೆಂಗಳೂರಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಖಾತಾಬುಕ್ ನೊಂದಿಗೆ ಕಾರ್ಯನಿರ್ವಹಣೆ ಮಾಡಲಿದೆ. ಬಿಜ್ ಅನಾಲಿಸ್ಟ್ ನ ಮೂಲ ಸಹ-ಸಂಸ್ಥಾಪಕ ತಂಡದಲ್ಲಿರುವ ವೈಭವ್ ವಾಸ, ಮೆಹುಲ್ ಸುತಾರಿಯಾ ಮತ್ತು ನಿಲೇಶ್ ಜವೇರಿ ಅವರು ಖಾತಾಬುಕ್ ಲೀಡರ್ ಶಿಪ್ ತಂಡದ ಭಾಗವಾಗಲಿದ್ದಾರೆ.

ಖಾತಾಬುಕ್ ನ ಸಿಇಒ ಮತ್ತು ಸಹ-ಸಂಸ್ಥಾಪಕ ರವೀಶ್ ನರೇಶ್ ಅವರು ಈ ಬಗ್ಗೆ ಮಾತನಾಡಿ, ''ಈ ಒಪ್ಪಂದವು ನಮ್ಮ ರಚನಾತ್ಮಕವಾದ ಸ್ವಾಧೀನವಾಗಿದೆ. ಇದರ ಮೂಲಕ ನಾವು ನಮ್ಮ ಜಾಲದ ಪರಿಣಾಮಕಾರಿ ಸಪ್ಲೈ ಚೈನ್ ಅನ್ನು ತೀವ್ರಗೊಳಿಸುತ್ತೇವೆ ಮತ್ತು ಆದಾಯ ಗಳಿಕೆಯತ್ತ ಹೆಚ್ಚಿನ ಆದ್ಯತೆ ನೀಡುತ್ತೇವೆ. ಬಿಜ್ ಅನಾಲಿಸ್ಟ್ ನೀಡುವ ವೈಶಿಷ್ಟ್ಯತೆಗಳು ಮತ್ತು ಸಾಮರ್ಥ್ಯಗಳು ನಮ್ಮ ಪ್ರಸ್ತುತದ ವ್ಯವಹಾರದ ಪೋರ್ಟ್ ಫೋಲಿಯೋಗೆ ಪರಿಪೂರ್ಣವಾದ ವಿಸ್ತರಣೆಯನ್ನು ಒದಗಿಸುತ್ತದೆ. ಮೌಲ್ಯವರ್ಧಿತ ಸೇವೆಗಳ ಮೂಲಕ ಭಾರತದ ಎಂಎಸ್ಎಂಇಗಳಿಗೆ ವ್ಯವಹಾರ ದಕ್ಷತೆಯನ್ನು ಒದಗಿಸುವ ಉುದ್ದೇಶದಿಂದ ಈ ಸ್ವಾಧೀನವು ಖಾತಾಬುಕ್ ಗೆ ಒಂದು ಮಹತ್ವದ ಹೆಜ್ಜೆ ಎನಿಸಿದೆ'' ಎಂದು ತಿಳಿಸಿದರು.

English summary
Fintech firm Khatabook on Thursday announced the acquisition of the city-based Biz Analyst (BA), a software as a service (SaaS) company providing analytics solutions to small business, in a USD 10 million cash and equity deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X