ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರು, ಬೈಕ್ ಇದ್ದಲ್ಲಿಗೆ ಕೆಎಫ್‍ಸಿ ಉತ್ಪನ್ನಗಳ ಡೆಲಿವರಿ

|
Google Oneindia Kannada News

ಬೆಂಗಳೂರು, ಮೇ 22: ಗ್ರಾಹಕರು ಮತ್ತು ತನ್ನ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಕೆಎಫ್‍ಸಿ ಸುರಕ್ಷಿತಾ ವಿಧಾನಗಳನ್ನು ದ್ವಿಗುಣಗೊಳಿಸಿದ್ದು, ಗ್ರಾಹಕರ ಕಾರು ಅಥವಾ ಬೈಕು ಇರುವೆಡೆಗೇ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

Recommended Video

ಭಾಸ್ಕರ್ ರಾವ್ ತೆರವಿಗೆ ಚಿಂತಿಸುತ್ತಿದೆಯಾ ರಾಜ್ಯ ಸರ್ಕಾರ ? | Bhaskar Rao

ಸಂಪರ್ಕರಹಿತ ಸೇವೆಗಳನ್ನು ವಿಸ್ತರಣೆ ಮಾಡಿರುವ ಕೆಎಫ್‍ಸಿ ದೇಶದಲ್ಲಿ ಇದೇ ಮೊದಲ ಬಾರಿಗೆ ಯುವರ್ ಕೆರೋರ್ ಬೈಕೀಸ್ ಎಂಬ ಈ ವಿನೂತನವಾದ ಯೋಜನೆಯನ್ನು ಆರಂಭಿಸಿದೆ. ಇದರ ಮೂಲಕ ಗ್ರಾಹಕರ ವಾಹನದ ಬಳಿಗೆ ಹೋಗಿ ಆಹಾರ ಉತ್ಪನ್ನಗಳ ಪ್ಯಾಕೆಟ್‍ಗಳನ್ನು ನೀಡಲಿದೆ.

ಬೆಂಗಳೂರಲ್ಲಿ ಫುಡ್ ಡೆಲಿವರಿ ಸೇವೆ ಆರಂಭಿಸಿದ ಅಮೆಜಾನ್ಬೆಂಗಳೂರಲ್ಲಿ ಫುಡ್ ಡೆಲಿವರಿ ಸೇವೆ ಆರಂಭಿಸಿದ ಅಮೆಜಾನ್

ಇದಕ್ಕಾಗಿ ಗ್ರಾಹಕರು ಕೆಎಫ್‍ಸಿ ಪ್ರೀಪೇಯ್ಡ್ ಆ್ಯಪ್, ವೆಬ್‍ಸೈಟ್ ಅಥವಾ ಎಂಸೈಟ್ ಮೂಲಕ ತಮಗಿಷ್ಟವಾದ ಆಹಾರವನ್ನು ಆರ್ಡರ್ ಮಾಡಬೇಕು ಮತ್ತು ರೆಸ್ಟೋರೆಂಟ್ ಸಮೀಪ ನಿಗದಿಪಡಿಸುವ ಸ್ಥಳಕ್ಕೆ ಬಂದು ನಿಲ್ಲಬೇಕು. ಆಗ ಗ್ರಾಹಕರಿಗೆ ಕೆಎಫ್‍ಸಿ ಸಿಬ್ಬಂದಿ ಬಂದು ಆರ್ಡರ್ ಅನ್ನು ನೀಡಲಿದ್ದಾರೆ. ಈ ಯೋಜನೆಯನ್ನು ಬೆಂಗಳೂರು, ಪುಣೆ, ಮುಂಬೈ, ಚೆನ್ನೈ ಮತ್ತು ದೆಹಲಿಯ ಕೆಲವು ಆಯ್ದ ಕೆಎಫ್‍ಸಿ ರೆಸ್ಟೋರೆಂಟ್‍ಗಳಲ್ಲಿ ಪರೀಕ್ಷೆ ಮಾಡಲಾಗಿದ್ದು, ಯಶಸ್ಸನ್ನು ಕಂಡಿದೆ.

ಕೆಎಫ್‍ಸಿ ಇಂಡಿಯಾದ ಮೋಕ್ಷ್ ಚೋಪ್ರಾ

ಕೆಎಫ್‍ಸಿ ಇಂಡಿಯಾದ ಮೋಕ್ಷ್ ಚೋಪ್ರಾ

ಈ ಉಪಕ್ರಮದ ಬಗ್ಗೆ ಮಾತನಾಡಿದ ಕೆಎಫ್‍ಸಿ ಇಂಡಿಯಾದ ಚೀಫ್ ಮಾರ್ಕೆಟಿಂಗ್ ಆಫೀಸರ್ ಮೋಕ್ಷ್ ಚೋಪ್ರಾ ಅವರು, "ಕೆಎಫ್‍ಸಿ ಟು ಯುವರ್ ಕಾರ್ ಆರ್ ಬೈಕ್'' ನೊಂದಿಗೆ ಕೆಎಫ್‍ಸಿ ಉತ್ಪನ್ನಗಳನ್ನು ತಲುಪಿಸುವುದು ಸುಲಭವಾಗಿದೆ. ಇದರ ಉದ್ದೇಶ ಹೆಚ್ಚಿನ ಸುರಕ್ಷತೆಯನ್ನು ಕಾಪಾಡುವುದು. ಅಲ್ಲದೇ, ಆಹಾರ ಉತ್ಪನ್ನಗಳಿಗಾಗಿ ರಸ್ತೆಗಳಲ್ಲಿ ಹುಡುಕಾಟ ನಡೆಸುವವರಿಗೆ ಅಥವಾ ತಮ್ಮ ಕಠಿಣ ಶಿಫ್ಟ್‍ಗಳನ್ನು ಮುಗಿಸಿ ಸುಸ್ತಾಗಿ ಮನೆಯ ಕಡೆ ಹೊರಟಿರುವವರಿಗೆ ಆಹಾರ ತಲುಪಿಸುವುದಾಗಿದೆ" ಎಂದರು

ಸುರಕ್ಷತಾ ಕ್ರಮಗಳ ಆಧಾರಿತ ಸೇವೆ

ಸುರಕ್ಷತಾ ಕ್ರಮಗಳ ಆಧಾರಿತ ಸೇವೆ

''ಸ್ಯಾನಿಟೈಸೇಷನ್, ಸಾಮಾಜಿಕ ಅಂತರ, ಸ್ಕ್ರೀನಿಂಗ್ ಮತ್ತು ಸಂಪರ್ಕರಹಿತ ಸೇವೆಯಂತ ಸುರಕ್ಷತಾ ಕ್ರಮಗಳ ಆಧಾರಿತ ಸೇವೆ ಇದಾಗಿದೆ. ಕೆಎಫ್‍ಸಿ ಆ್ಯಪ್ ಬಳಕೆ ಮತ್ತು ಡಿಜಿಟಲ್ ಪೇಮೆಂಟ್‍ಗಳ ಮೂಲಕ ಈ ಸೇವೆಯನ್ನು ಸುಲಭವಾಗಿ, ತ್ವರಿತವಾಗಿ ಮತ್ತು ಸಂಪೂರ್ಣ ಸಂಪರ್ಕರಹಿತವಾಗಿ ಮಾಡಬಹುದು. ಗ್ರಾಹಕರ ಪ್ರತಿಕ್ರಿಯೆ ಮತ್ತು ಲಭ್ಯತೆಯನ್ನು ಗಮನಿಸಿ ಈ ಸೇವೆಯನ್ನು ಇತರೆ ನಗರಗಳಿಗೂ ವಿಸ್ತರಣೆ ಮಾಡಲಿದ್ದೇವೆ'' ಎಂದು ಮೋಕ್ಷ್ ಚೋಪ್ರಾ ತಿಳಿಸಿದರು.

 ಬೈಕ್‍ಗೆ ಕೆಎಫ್‍ಸಿಯನ್ನು ಪಡೆಯುವುದು ಹೇಗೆ?

ಬೈಕ್‍ಗೆ ಕೆಎಫ್‍ಸಿಯನ್ನು ಪಡೆಯುವುದು ಹೇಗೆ?

ಹಾಗಾದರೆ ನಿಮ್ಮ ಕಾರು ಅಥವಾ ಬೈಕ್‍ಗೆ ಕೆಎಫ್‍ಸಿಯನ್ನು ಪಡೆಯುವುದು ಹೇಗೆ? ಇದು ಅತ್ಯಂತ ಸುಲಭ. ನೀವು ಕೆಎಫ್‍ಸಿ ಆಪ್, ವೆಬ್‍ಸೈಟ್ ಅಥವಾ ಎಂಸೈಟ್‍ನಲ್ಲಿ ಟೇಕ್‍ಅವೇ ಮತ್ತು ''ಕೆಎಫ್‍ಸಿ ಟು ಯುವರ್ ಕಾರ್/ಬೈಕ್'' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ನಿಮಗೆ ಸೂಕ್ತವಾದ ಡೆಲಿವರಿ ಸಮಯ, ವಾಹನದ ಸಂಖ್ಯೆ ಇತ್ಯಾದಿ ಮಾಹಿತಿಯನ್ನು ನಮೂದಿಸಬೇಕು. ಆರ್ಡರ್ ಖಾತರಿಯಾದ ನಂತರ ರೆಸ್ಟೋರೆಂಟ್ ಮ್ಯಾನೇಜರ್ ರಿಂದ ನಿಮಗೆ ಕರೆ ಬರುತ್ತದೆ ಮತ್ತು ಅವರು ರೆಸ್ಟೋರೆಂಟ್‍ನ ವಿಳಾಸ, ಪಿಕಪ್ ಮತ್ತು ಸ್ಥಳದ ಮಾಹಿತಿಯನ್ನು ತಿಳಿಸುತ್ತಾರೆ.

ಆರ್ಡರ್ ಸಿದ್ಧವಾದ ತಕ್ಷಣ ಕರೆ

ಆರ್ಡರ್ ಸಿದ್ಧವಾದ ತಕ್ಷಣ ಕರೆ

ನಿಮ್ಮ ಆರ್ಡರ್ ಸಿದ್ಧವಾದ ತಕ್ಷಣ ಮತ್ತೊಮ್ಮೆ ಕರೆ ಮಾಡುವ ಮ್ಯಾನೇಜರ್ ಮಾಹಿತಿ ನೀಡಲಿದ್ದಾರೆ. ನೀವು ನಿಗದಿತ ಸ್ಥಳಕ್ಕೆ ಹೋದಾಗ ರೆಸ್ಟೋರೆಂಟ್ ಸಿಬ್ಬಂದಿ ನೀವು ಆರ್ಡರ್ ಮಾಡಿದ ಆಹಾರ ಉತ್ಪನ್ನವನ್ನು ನೀವಿದ್ದಲ್ಲಿಗೆ ಬಂದು ನೀಡಲಿದ್ದಾರೆ.

ಕೆಎಫ್‍ಸಿ ಟು ಯುವರ್ ಕಾರ್/ಬೈಕ್ ಸೇವೆ ಬೆಂಗಳೂರು ಮತ್ತು ದೆಹಲಿಯ ಆಯ್ದ ರೆಸ್ಟೋರೆಂಟ್‍ಗಳಲ್ಲಿ ಲಭ್ಯವಿದೆ. ಇನ್ನುಳಿದಂತೆ ದೇಶದ ವಿವಿಧ ನಗರಗಳ ರೆಸ್ಟೋರೆಂಟ್‍ಗಳಲ್ಲಿ ಕಾಂಟ್ಯಾಕ್ಟ್‍ಲೆಸ್ ಟೇಕ್‍ಅವೇ ಸೇವೆ ಲಭ್ಯವಿದೆ. ಗ್ರಾಹಕರು ಕೆಎಫ್ ಸಿ ವೆಬ್ ತಾಣ ಅಥವಾ ಕೆಎಫ್‍ಸಿ ಆ್ಯಪ್‍ನೊಂದಿಗೆ ಕೆಎಫ್‍ಸಿಯ ತಮ್ಮ ನೆಚ್ಚಿನ ಆಹಾರಗಳನ್ನು ಪಡೆದುಕೊಳ್ಳಬಹುದಾಗಿದೆ.

English summary
An extension of contactless takeaway, KFC to Your Car or Bike is a first of its kind service in India with the food being delivered to your vehicle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X