ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಲ್ಲರ್ ಜೀನ್ಸ್ ಮಳಿಗೆ 336ಕ್ಕೇರಿಸಲು ಗುರಿ : ಕೇವಲ್ ಕಿರಣ್ ಸಂಸ್ಥೆ

|
Google Oneindia Kannada News

ಬೆಂಗಳೂರು, ಮಾರ್ಚ್ 26: ಅಗ್ರಗಣ್ಯ ಡೆನಿಮ್ ಬ್ರಾಂಡ್ ಆದ ಕಿಲ್ಲರ್ ಜೀನ್ಸ್ ನ ಮಾಲೀಕತ್ವ ಸಂಸ್ಥೆಯಾದ ಕೇವಲ್ ಕಿರಣ್ ಕ್ಲೋಥಿಂಗ್ಸ್ ಲಿಮಿಟೆಡ್, ಮುಂದಿನ ಎರಡು ವರ್ಷಗಳಲ್ಲಿ ತನ್ನ ವಿತರಣಾ ಜಾಲವನ್ನು ದೇಶಾದ್ಯಂತ ಸುಸ್ಥಿರವಾಗಿ ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ. ಪ್ರಸ್ತುತ ಇರುವ 125ಕ್ಕೂ ಹೆಚ್ಚು ವಿತರಕರ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ.

ಕಂಪನಿಯು ಪ್ರಸ್ತುತ 125ಕ್ಕೂ ಹೆಚ್ಚು ಮುಂಚೂಣಿ ವಿತರಕರನ್ನು ದೇಶದ 25 ರಾಜ್ಯಗಳ 209 ನಗರಗಳಲ್ಲಿ ಹೊಂದಿದೆ. ಪ್ರಸ್ತುತ ಕಂಪನಿಯು 318 ಕೆ-ಲಾಂಜ್ ಅಥವಾ ಎಕ್ಸ್ ಕ್ಲ್ಯೂಸಿವ್ ಬ್ರಾಂಡ್ ರೀಟೆಲ್ ಮಳಿಗೆಗಳನ್ನು ರಾಷ್ಟ್ರಾದ್ಯಂತ ಹೊಂದಿದ್ದು, ಈ ಹಣಕಾಸು ವರ್ಷದ ಒಳಗಾಗಿ ಇದನ್ನು 336 ಮಳಿಗೆಗಳಿಗೆ ಹೆಚ್ಚಿಸಲು ಕಾರ್ಯತಂತ್ರ ರೂಪಿಸಲಾಗಿದೆ.

ಜೀನ್ಸ್ ತೊಟ್ಟು ಆಕರ್ಷಿಸುವ ಮಹಿಳೆಯರನ್ನು ಸಮುದ್ರಕ್ಕೆ ಎಸೆಯಬೇಕುಜೀನ್ಸ್ ತೊಟ್ಟು ಆಕರ್ಷಿಸುವ ಮಹಿಳೆಯರನ್ನು ಸಮುದ್ರಕ್ಕೆ ಎಸೆಯಬೇಕು

ಒಟ್ಟಾರೆ ಆದಾಯದಲ್ಲಿ ದಕ್ಷಿಣ ಭಾರತ ಸುಮಾರು ಶೇಕಡ 20ರಷ್ಟು ಪಾಲನ್ನು ಹೊಂದಿದ್ದು, ಪೂರ್ವ ಪ್ರದೇಶವನ್ನು ಹೊರತುಪಡಿಸಿದರೆ ಎರಡನೇ ಅತಿಹೆಚ್ಚು ಕೊಡುಗೆ ನೀಡುವ ಪ್ರದೇಶವಾಗಿದೆ. ಆದ್ದರಿಂದ ದಕ್ಷಿಣ ಭಾರತದಲ್ಲಿ ತನ್ನ ಜಾಲವನ್ನು ಮತ್ತಷ್ಟು ಬಲಪಡಿಸಲು ಕಂಪನಿ ನಿರ್ಧರಿಸಿದೆ. ಕಂಪನಿಯು ಕರ್ನಾಟಕದಲ್ಲಿ ಪ್ರಸ್ತುತ 10 ಮಳಿಗೆಗಳನ್ನು ಹೊಂದಿದ್ದು, ಇದನ್ನು ವೇಗವಾಗಿ ವಿಸ್ತರಿಸಲು ಮುಂದಾಗಿದೆ.

ವಿತರಕರನ್ನು ಹೆಚ್ಚಿಸಲು ಕಾರ್ಯತಂತ್ರ

ವಿತರಕರನ್ನು ಹೆಚ್ಚಿಸಲು ಕಾರ್ಯತಂತ್ರ

ಕಂಪನಿಯು ಪ್ರಸ್ತುತ 125ಕ್ಕೂ ಹೆಚ್ಚು ಮುಂಚೂಣಿ ವಿತರಕರನ್ನು ದೇಶದ 25 ರಾಜ್ಯಗಳ 209 ನಗರಗಳಲ್ಲಿ ಹೊಂದಿದೆ. ಪ್ರಸ್ತುತ ಕಂಪನಿಯು 318 ಕೆ-ಲಾಂಜ್ ಅಥವಾ ಎಕ್ಸ್ ಕ್ಲ್ಯೂಸಿವ್ ಬ್ರಾಂಡ್ ರೀಟೆಲ್ ಮಳಿಗೆಗಳನ್ನು ರಾಷ್ಟ್ರಾದ್ಯಂತ ಹೊಂದಿದ್ದು, ಈ ಹಣಕಾಸು ವರ್ಷದ ಒಳಗಾಗಿ ಇದನ್ನು 336 ಮಳಿಗೆಗಳಿಗೆ ಹೆಚ್ಚಿಸಲು ಕಾರ್ಯತಂತ್ರ ರೂಪಿಸಲಾಗಿದೆ.

ಸಿಎಂಡಿ ಕೇವಲ್‍ಚಂದ್ ಜೈನ್ ಮಾತನಾಡಿ

ಸಿಎಂಡಿ ಕೇವಲ್‍ಚಂದ್ ಜೈನ್ ಮಾತನಾಡಿ

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಕೇವಲ್ ಕಿರಣ್ ಕ್ಲೋಥಿಂಗ್ ಲಿಮಿಟೆಡ್‍ನ ಸಿಎಂಡಿ ಕೇವಲ್‍ಚಂದ್ ಜೈನ್ ಅವರು, "ಸಿದ್ಧ ಉಡುಪುಗಳ ಉದ್ಯಮದಲ್ಲಿ ಅತಿದೊಡ್ಡ ಗ್ರಾಹಕ ನೆಲೆಯನ್ನು ಹೊಂದಿದ್ದೇವೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ನಮ್ಮ ಅಗ್ರಗಣ್ಯ ಬ್ರಾಂಡ್ ಕಿಲ್ಲರ್, ಈ ದೇಶದ ಜನತೆಗೆ ಡೆನಿಮ್‍ನಲ್ಲಿ ಮುಂಚೂಣಿ ಆಯ್ಕೆಯಾಗಿದೆ. ಈ ವಿಸ್ತರಣೆಯ ಮೂಲಕ ಮಾರುಕಟ್ಟೆಯಲ್ಲಿ ಮತ್ತಷ್ಟು ಪ್ರಾಬಲ್ಯ ಹೊಂದಲು ಸಾಧ್ಯವಾಗಲಿದೆ" ಎಂದು ಹೇಳಿದರು.

ಅಬ್ಬಾ... ಜೀಹಾದಿಗಳು ಎಂಥೆಂತಾ ಜೋಕ್ ಮಾಡ್ತಾರಪ್ಪಾ!ಅಬ್ಬಾ... ಜೀಹಾದಿಗಳು ಎಂಥೆಂತಾ ಜೋಕ್ ಮಾಡ್ತಾರಪ್ಪಾ!

ಕಂಪನಿಯ ಅಗ್ರಗಣ್ಯ ಬ್ರಾಂಡ್ ಕಿಲ್ಲರ್

ಕಂಪನಿಯ ಅಗ್ರಗಣ್ಯ ಬ್ರಾಂಡ್ ಕಿಲ್ಲರ್

ಕೇವಲ್ ಕಿರಣ್ ಕ್ಲೋಥಿಂಗ್ ಲಿಮಿಟೆಡ್‍ನ ಅಗ್ರಗಣ್ಯ ಬ್ರಾಂಡ್ ಕಿಲ್ಲರ್ ಆಗಿದ್ದು, ಇತರ ಬ್ರಾಂಡ್‍ಗಳಾದ ಲಾಮನ್‍ಪಿಜಿ3, ಇಂಟೆಗ್ರಿಟಿ ಮತ್ತು ಈಯಾಸೆಸ್‍ಗಳು ಕಂಪನಿಯ ಮುರು ದಶಕಗಳ ಅಸ್ತಿತ್ವದಲ್ಲಿ ಗಾತ್ರದಲ್ಲಿ ಬೃಹತ್ ಆಗಿ ಬೆಳೆದ ಬ್ರಾಂಡ್‍ಗಳಲ್ಲಿ ಸೇರಿವೆ.

ತಲೆಯಿಂದ ಕಾಲಿನ ತನಕದ ವಸ್ತ್ರ

ತಲೆಯಿಂದ ಕಾಲಿನ ತನಕದ ವಸ್ತ್ರ

ಇದಕ್ಕೆ ಜನ ಮನಸೋತಿರುವುದು, ಕೆಕೆಸಿಎಲ್‍ನ ಪೂರಕ ಘಟಕಗಳು ತಲೆಯಿಂದ ಹಿಡಿದು ಕಾಲಿನವರೆಗಿನ ಜೀವನಶೈಲಿ ಉತ್ಪನ್ನಗಳನ್ನು ಅಂದರೆ ಡಿಯೋಡ್ರಂಡ್, ವಾಚ್, ವೆಲೆಟ್, ಬೆಲ್ಟ್ ಹಾಗೂ ಒಳ ಉಡುಪುಗಳನ್ನು ತಯಾರಿಸುತ್ತಿವೆ. ವ್ಯವಹಾರದ ಈ ವಲಯವು ವೈವಿಧ್ಯಮಯ ಶೈಲಿಯ ಉತ್ಪನ್ನಗಳ ಮೂಲಕ ದೊಡ್ಡ ಪ್ರಮಾಣದ ಪ್ರೇಕ್ಷಕರನ್ನು ಆಕರ್ಷಿಸಿದೆ.

ಜೀನ್ಸ್ ತೊಟ್ಟು ಆಕರ್ಷಿಸುವ ಮಹಿಳೆಯರನ್ನು ಸಮುದ್ರಕ್ಕೆ ಎಸೆಯಬೇಕುಜೀನ್ಸ್ ತೊಟ್ಟು ಆಕರ್ಷಿಸುವ ಮಹಿಳೆಯರನ್ನು ಸಮುದ್ರಕ್ಕೆ ಎಸೆಯಬೇಕು

English summary
The company currently works with 125+ leading distributors covering 25 States and 209 cities spread across India. Currently the company has 318 K-Lounge or Exclusive Brand Retail Stores nationally which is set to increase to 336 stores by this financial year end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X