• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಂಪಾಪುರ ಹೆಬ್ಬಾಳ: ಉತ್ತರ ಬೆಂಗಳೂರಿನ ಹಾಟ್‌ ಸ್ಪಾಟ್!

|

ಬೆಂಗಳೂರು, ಆಗಸ್ಟ್, 19: ಹೆಬ್ಬಾಳ ಬೆಂಗಳೂರಿನ ಹೊರವಲಯವಾಗಿ ಉಳಿದುಕೊಂಡಿದಲ್ಲ. ವಾಣಿಜ್ಯ ಬೆಳವಣಿಗೆಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಹೆಬ್ಬಾಳದ ಸಮೀಪವೇ ಎಲ್ಲ ಅನಕೂಲತೆಗಳು ಅಂದರೆ ಆಸ್ಪತ್ರೆ, ಶಾಲೆ, ವಿಮಾನ ನಿಲ್ದಾಣ , ಐಟಿ ಪಾರ್ಕ್ ಎಲ್ಲವೂ ಲಭ್ಯವಿದೆ.

ಇದೆಲ್ಲ ಕಾರಣದಿಂದ ಕೆಂಪಾಪುರ ಹೆಬ್ಬಾಳ ಬೆಂಗಳೂರು ನಾಗರಿಕರ ಹಾಟ್ ಸ್ಪಾಟ್ ಆಗಿ ಬದಲಾಗುತ್ತಿದೆ ಎಂದು ವೈಷ್ಣವಿ ಸಮೂಹ ಸಂಸ್ಥೆಯ ನಿರ್ದೇಶಕ ದರ್ಶನ್ ಗೋವಿಂದರಾಜು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಒಂದು ಕಾಲದಲ್ಲಿ ಬೆಂಗಳೂರಿನ ಹೆಬ್ಬಾಳವನ್ನು ಉತ್ತರ ಭಾಗದ ಅಂತ್ಯದ ಗಡಿ ಎಂದೇ ಬಣ್ಣಿಸಲಾಗಿತ್ತು. ಆದರೆ, ಇಲ್ಲಿನ ಬಿರುಸಿನ ವಾಣಿಜ್ಯ ಚಟುವಟಿಕೆಗಳು ಮತ್ತು ಏರುಮುಖದಲ್ಲಿ ಮುನ್ನಡಿ ಇಡುತ್ತಿರುವ ರಿಯಲ್ ಎಸ್ಟೇಟ್ ಉದ್ಯಮದ ಅಭಿವೃದ್ಧಿಯತ್ತ ಸಾಗಿರುವುದನ್ನು ಗಮನಿಸಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.[ಮನೆ ಕೊಳ್ಳುವ ಕನಸು ನನಸು ಮಾಡಲಿದೆ ಡಿಎಸ್ ಮ್ಯಾಕ್ಸ್]

ಬ್ಯಾಪ್ಟಿಸ್ಟ್ ಆಸ್ಪತ್ರೆ ಮತ್ತು ಚೆಕ್ ಪೋಸ್ಟ್ ಮಧ್ಯೆ ಇರುವ ಮೈಲುಕಲ್ಲನ್ನು ಬೆಂಗಳೂರು ಕಾರ್ಪೋರೇಷನ್ ಗಡಿ ಎಂದೇ ಪರಿಗಣಿಸಲಾಗಿತ್ತು. ಆದರೆ, ಈಗ ಬೆಂಗಳೂರು ನಗರ ಇದೆಲ್ಲವನ್ನು ಮೀರಿ ಬೆಳೆದು ನಿಂತಿದೆ.

ಸಹಕಾರ ನಗರ, ಕೊಡಿಗೇಹಳ್ಳಿ ಮತ್ತು ಅಮೃತಹಳ್ಳಿಗೆ ಈ ಹೆಬ್ಬಾಳ ಪ್ರದೇಶ ಹೊಂದಿಕೊಂಡಿದೆ. ಇದರ ಸನಿಹದಲ್ಲಿಯೇ ಚಿರಂಜೀವಿ ಲೇಔಟ್, ನೀರುಬಾವಿ ಮುನಿರತ್ನಮ್ಮ ಕಾಂಪೌಂಡ್, ಪಂಪ ಎಕ್ಸಟೆನ್ಷನ್, ವೆಂಕಟಗೌಡ ಲೇಔಟ್ ಮತ್ತು ಜಕ್ಕೂರು ಲೇಔಟ್‍ಗಳಿವೆ. ಹೆಬ್ಬಾಳದ ವ್ಯಾಪ್ತಿಯಲ್ಲಿರುವ ಹೆಬ್ಬಾಳ ಫ್ಲೈಓವರ್‌ ಗೆ ಅತ್ಯಂತ ಸಮೀಪವಿರುವ ಕೆಂಪಾಪುರ ಹೆಬ್ಬಾಳವೂ ಸಹ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ. ಈ ಕೆಂಪಾಪುರ ಹೆಬ್ಬಾಳ ಪ್ರದೇಶ ಫ್ಲೈಓವರ್‍ನ ಬಲಭಾಗದಲ್ಲಿದ್ದು, ಎಸ್ಟೀಂ ಮಾಲ್ ತೀರಾ ಹತ್ತಿರದಲ್ಲಿದೆ.[ಬೆಂಗಳೂರಿಗರ ವೀಕೆಂಡ್ ಮಸ್ತಿಗೆ ಕ್ಲಬ್ ರೆಸಾರ್ಟ್ ಪರಿಕಲ್ಪನೆ]

ಮೂಲಸೌಕರ್ಯ ಮತ್ತು ಸಂಪರ್ಕ:

ಗ್ಯಾಮನ್ ಇಂಡಿಯಾ ಸಂಸ್ಥೆ ನಿರ್ಮಾಣ ಮಾಡಿರುವ ಫ್ಲೈಓವರ್ ಹೊರ ವರ್ತುಲ ರಸ್ತೆ(ಔಟರ್ ರಿಂಗ್ ರೋಡ್) ಮತ್ತು ಬಳ್ಳಾರಿ ರಸ್ತೆಯನ್ನು ಸಂಪರ್ಕಿಸುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಹೆಬ್ಬಾಳವನ್ನು ಸಂಪರ್ಕಿಸುವುದರಿಂದ ಈ ಪ್ರದೇಶ ಒಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿದೆ.[ಊರ್ಧ್ವಮುಖಿಯಾಗಿರುವ ಬೆಂಗಳೂರು ರಿಯಲ್ ಎಸ್ಟೇಟ್]

ಈ ಪ್ರದೇಶದಿಂದ 20 ಕಿಲೋಮೀಟರ್ ದೂರದ ದೇವನಹಳ್ಳಿಯಲ್ಲಿರುವ ವಿಮಾನನಿಲ್ದಾಣಕ್ಕೆ ಯಾವುದೇ ಅಡೆತಡೆ ಇಲ್ಲದೇ ಹೊರವರ್ತುಲ ರಸ್ತೆ ಮತ್ತು ಬಳ್ಳಾರಿ ರಸ್ತೆ ಮೂಲಕ ಸಂಚರಿಸಬಹುದಾಗಿದೆ. ಅದೇರೀತಿ ಇದೇ ರಸ್ತೆಯಲ್ಲಿ ಮುಂದೆ ಸಾಗಿದರೆ ಸಿಗುವ ಯಲಹಂಕ ಮತ್ತು ಸುತ್ತಮುತ್ತಲಿನ ಪ್ರದೇಶಗಳೂ ಸಹ ಅಭಿವೃದ್ಧಿ ವಿಚಾರದಲ್ಲಿ ಉತ್ತಮವಾದ ಪ್ರದೇಶಗಳಾಗಿವೆ. ಪ್ರಸ್ತುತ ಪ್ರಗತಿಯಲ್ಲಿರುವ ಎಲಿವೇಟೆಡ್ ಮತ್ತು ಪೆರಿಫರೆಲ್ ರಿಂಗ್ ರಸ್ತೆಗಳ ನಿರ್ಮಾಣದಿಂದ ಈ ಪ್ರದೇಶದ ರಸ್ತೆ ಸಂಪರ್ಕವನ್ನು ಮತ್ತಷ್ಟು ಸುಧಾರಿಸಲಿವೆ.

ನಗರದ ಕೇಂದ್ರ ಸ್ಥಳವಾಗಿರುವ ಬಸವೇಶ್ವರ ವೃತ್ತ (ಚಾಲುಕ್ಯ ವೃತ್ತ)ದಿಂದ ಹೆಬ್ಬಾಳ ಫ್ಲೈಓವರ್‍ವರೆಗೆ ಆರು ಪಥದ ಅತ್ಯಾಧುನಿಕ ಫ್ಲೈಓವರ್ ಅನ್ನು ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸಲಾಗಿದೆ. ಈ ಅತ್ಯುತ್ತಮವಾದ ರಸ್ತೆ ನಿರ್ಮಾಣವಾದರೆ ಬೆಂಗಳೂರಿನ ಹೃದಯ ಭಾಗವನ್ನು ಸುಲಭವಾಗಿ ತಲುಪಬಹುದಾಗಿದೆ. ಕೆಂಪಾಪುರ ಹೆಬ್ಬಾಳದಿಂದ ಎಂ.ಜಿ.ರಸ್ತೆಯನ್ನು ಕೇವಲ ಸುಮಾರು 15 ರಿಂದ 20 ನಿಮಿಷದಲ್ಲಿ ತಲುಪಬಹುದು. ಅದೇರೀತಿ 8 ಕಿಲೋಮೀಟರ್ ದೂರದಲ್ಲಿರುವ ನಗರ ರೈಲ್ವೇ ನಿಲ್ದಾಣವನ್ನು ಸಹ ಸುಲಭವಾಗಿ ತಲುಪಬಹುದು.[ಬೆಂಗಳೂರಲ್ಲಿ ಮನೆ, ನಿವೇಶನ ಕೊಳ್ಳುವ ಕನಸು ನುಚ್ಚುನೂರು]

ಈ ಎಲ್ಲಾ ಭರಪೂರ ಮೂಲಸೌಕರ್ಯಗಳಿಂದಾಗಿ ಹೆಬ್ಬಾಳಕ್ಕೆ ಪೂರ್ವ ಮತ್ತು ಪಶ್ಚಿಮ ಬೆಂಗಳೂರಿನ ಕಂಟೋನ್ಮೆಂಟ್ ಮತ್ತು ಯಶವಂತಪುರ ಪ್ರದೇಶಗಳಿಂದ ಅತ್ಯುತ್ತಮ ಸಂಪರ್ಕ ಲಭ್ಯವಾಗುತ್ತದೆ. ಅದೇ ರೀತಿ ಬೆಂಗಳೂರು ದಕ್ಷಿಣದ ಹೃದಯ ಭಾಗ ಎನಿಸಿರುವ ಬಸವನಗುಡಿ 15 ಕಿಲೋಮೀಟರ್ ಆಗಲಿದ್ದು, ಇಲ್ಲಿಗೂ ಉತ್ತಮ ಸಂಪರ್ಕ ಸಿಕ್ಕಿದಂತಾಗುತ್ತದೆ.

ಗಗನಕ್ಕೇರಿದ ಭೂಮಿ ಬೆಲೆ

ಕಳೆದ ದಶಕದಲ್ಲಿ ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಬೆಲೆ ಅನಿರೀಕ್ಷಿತ ಮಟ್ಟದಲ್ಲಿ ಏರಿಕೆ ಕಂಡಿದೆ. ಇದರ ಜತೆಗೆ ಈ ಉದ್ಯಮ ಸಾಕಷ್ಟು ಅಭಿವೃದ್ಧಿಯನ್ನೂ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿ ಆರಂಭವಾದ ದಿನದಿಂದ 2008 ರಲ್ಲಿ ವಿಮಾನನಿಲ್ದಾಣ ಕಾರ್ಯಾರಂಭ ಮಾಡಿದ ದಿನದವರೆಗೆ ರಿಯಲ್ ಎಸ್ಟೇಟ್ ಉದ್ಯಮ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಈ ಪ್ರದೇಶದ ಭೂಮಿಯ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 2011 ರ ನಂತರ ಹೆಬ್ಬಾಳ ಸುತ್ತಮುತ್ತಲಿನ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ದರದಲ್ಲಿ ಶೇ. 59 ರಷ್ಟು ಹೆಚ್ಚಳವಾಗಿದೆ.

ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ದರಗಳ ಪಟ್ಟಿ ಹೀಗಿದೆ ನೋಡಿಕೊಂಡು ಬನ್ನಿ

* ಬಹುಮಹಡಿ ಅಪಾರ್ಟ್ ಮೆಂಟ್: ಪ್ರತಿ ಚದರಡಿಗೆ ರೂ.5991

* ವಸತಿ ಪ್ಲಾಟ್: ಪ್ರತಿ ಚದರ ಅಡಿಗೆ ರೂ. 49,934

* ಅಪಾರ್ಟ್ ಮೆಂಟ್ ಬಾಡಿಗೆ: ಪ್ರತಿ ತಿಂಗಳಿಗೆ ರೂ. 17,300 (2 ಬಿಎಚ್‍ ಕೆ)

* ವಾಣಿಜ್ಯ ಜಾಗ ಬಾಡಿಗೆ: ಪ್ರತಿ ಚದರಡಿಗೆ ರೂ. 53.

(ಮಾಹಿತಿ ಮೂಲ: ಮ್ಯಾಜಿಕ್ ಬ್ರಿಕ್ಸ್ ದರಗಳು 2015 ರ ಡಿಸೆಂಬರ್‍ನಲ್ಲಿ ಇದ್ದಂತೆ)

ಸಾಮಾಜಿಕ ಮೂಲಸೌಕರ್ಯ:

ಈ ಪ್ರದೇಶದಲ್ಲಿ ಸಾಮಾಜಿಕ ಮೂಲಸೌಲಭ್ಯಗಳ ಲಭ್ಯತೆ ಎಲ್ಲರೂ ಮೆಚ್ಚುವಂತಹದ್ದೇ. ಏಕೆಂದರೆ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಶಾಪಿಂಗ್ ಕಾಂಪ್ಲೆಕ್ಸ್ ಗಳಂತಹ ಸೌಲಭ್ಯಗಳು ಅತ್ಯುತ್ತಮವಾಗಿವೆ. ವಿದ್ಯಾಶಿಲ್ಪ, ಪ್ರೆಸಿಡೆನ್ಸಿ, ಮಲ್ಯ ಅದಿತಿ, ಮತ್ತು ರೆಯಾನ್ ಇಂಟರ್ ನ್ಯಾಶನಲ್ ನಂಥ ಪ್ರಮುಖ ಶಾಲೆಗಳು ಇಲ್ಲಿವೆ.

ಸಿಂಧಿ ಕಾಲೇಜು, ಬಿಎಂಎಸ್ ಐಟಿ, ಪ್ರೆಸಿಡೆನ್ಸಿ ಮತ್ತು ನಿಟ್ಟೆಯಂತಹ ಎಲ್ಲಾ ವಿಧದ ಶಿಕ್ಷಣ ನೀಡುವ ಖ್ಯಾತನಾಮ ಕಾಲೇಜುಗಳು ಇದೇ ಪ್ರದೇಶದಲ್ಲಿವೆ. ಕೊಲಂಬಿಯಾ ಏಷ್ಯಾ, ಕಾವೇರಿ ಮೆಡಿಕಲ್ ಮತ್ತು ಬ್ಯಾಪ್ಟಿಸ್ಟ್ ಆಸ್ಪತ್ರೆಗಳು ಇದೇ ಕೆಂಪಾಪುರ ಹೆಬ್ಬಾಳಕ್ಕೆ ಹೊಂದಿಕೊಂಡಂತಿವೆ. ಎಸ್ಟೀಂ ಮಾಲ್, ಜನತಾ ಬಜಾರ್ ಮತ್ತು ಈಝೋನ್‍ನಂತಹ ಶಾಪಿಂಗ್ ಮಾಲ್ ಗಳು ಇಲ್ಲಿ ನೆಲೆಸುವವರಿಗೆ ಹೇಳಿಮಾಡಿಸಿದಂತಿವೆ.

ಪಿಕ್ ನಿಕ್ ಸ್ಪಾಟ್

ವಾಣಿಜ್ಯ ಬೆಳವಣಿಗೆಯಷ್ಟೇ ಅಲ್ಲ. ಹೆಬ್ಬಾಳ ಕೆರೆ ಇದೀಗ ಇಲ್ಲಿನ ಸುತ್ತಮುತ್ತಲಿನ ನಿವಾಸಿಗಳು ಪ್ರಮುಖ ಪಿಕ್ ನಿಕ್ ಸ್ಪಾಟ್ ಆಗಿದೆ. ಅಲ್ಲದೇ, ಪಕ್ಷಿ ವೀಕ್ಷಕರನ್ನು ಕೈಬೀಸಿ ಕರೆಯುತ್ತಿದೆ. ಅದೇರೀತಿ ಈ ಹೆಬ್ಬಾಳ ಕೆರೆಯ ಕೂಗಳತೆ ದೂರದಲ್ಲಿರುವ ನಾಗಾವಾರ ಕೆರೆಯೂ ಸಹ ಜನರ ಅಚ್ಚುಮೆಚ್ಚಿನ ತಾಣವಾಗಿದೆ. ಇಲ್ಲಿ ಬೋಟಿಂಗ್ ಮತ್ತು ಸರ್ಫಿಂಗ್ ಸೌಲಭ್ಯಗಳು ಇರುವುದರಿಂದ ನಾಗರಿಕರನ್ನು ಸೆಳೆಯುತ್ತಿದೆ.

ಇಷ್ಟೆಲ್ಲಾ ಕಾರಣಗಳನ್ನು ಲೆಕ್ಕ ಹಾಕಿದರೆ ಹೆಬ್ಬಾಳ ಕೆಂಪಾಪುರ ಸಮೀಪ ಹೊಸ ಜಾಗ ಕೊಳ್ಳಲು ಮನಸ್ಸು ಮಾಡಿದರೆ ಯಾವ ತಪ್ಪಿಲ್ಲ. ಮಹಾನಗರದಲ್ಲಿಯೇ ನಿಮ್ಮ ಮನ ಮೆಚ್ಚುವ ದರದಲ್ಲಿ ಫ್ಲಾಟ್ ಹುಡುಕುತ್ತಿದ್ದರೆ ಹೆಬ್ಬಾಳ ನಿಮ್ಮ ಮೊದಲ ಆಯ್ಕೆಯಾಗುತ್ತದೆ.

English summary
Bustling with commercial activity and with real estate development at a frantic pace, it is difficult to believe that the assembly constituency area of Hebbal in Bengaluru was once indicative of the north endpoint of the city. Kempapura Hebbal is also another fast developing area within Hebbal and is located close to the Hebbal flyover. As one descends the Hebbal flyover, the locality is located on the right side and is very close to the Esteem mall. Mr.Darshan Govindaraju, Director of Vaishnavi Group tells about the whole structure of Kempapura Hebbal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X